ಮಹಿಳಾ ಮತ್ತು ಮಕ್ಕಳ ದೌರ್ಜನ್ಯ /ಲಿಂಗ ತಾರತಮ್ಯದ ಅರಿವು ಕಾರ್ಯಗಾರ
ಮಂಗಳೂರು: ಮಹಿಳಾ ಮತ್ತು ಮಕ್ಕಳ ದೌರ್ಜನ್ಯ /ಲಿಂಗ ತಾರತಮ್ಯದ (Sensitization on issues relating to women and children) ಅರಿವು ಮೂಡಿಸುವ ಕಾರ್ಯಗಾರವು ದಿನಾಂಕ: 17-01-2017 ರಿಂದ 19-01-2017ರವರೆಗೆ ಪೊಲೀಸ್ ಆಯುಕ್ತರ ಕಛೇರಿಯ ಸಭಾಂಗಣದಲ್ಲಿ ಬೆಂಗಳೂರು ಫ್ರೊಜೆಕ್ಟ್ ಟೀಮ್ ನ ರುವಿನಾ ಹಾಗೂ ಗುರುರಾಜ್ ರವರ ಮುಖಾಂತರ ಮಂಗಳೂರು ನಗರದ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಠಾಣೆಗಳ ಪೊಲೀಸ್ ನಿರೀಕ್ಷಕರು, ಉಪ ನಿರೀಕ್ಷಕರು, ಸಹಾಯಕ ಪೊಲೀಸ್ ಉಪನಿರೀಕ್ಷಕರು ಹಾಗೂ ಪೊಲೀಸ್ ಸಿಬ್ಬಂದಿಯವರಿಗೆ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಯಶ್ವಸಿಗೊಳಿಸಲು ಶ್ರೀ ಚಂದ್ರಶೇಖರ.ಎಂ, IPS ಮಾನ್ಯ ಪೊಲೀಸ್ ಆಯುಕ್ತರು, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಶಾಂತರಾಜು ಹಾಗೂ ಅಪರಾಧ ಸಂಚಾರದ ಡಿಸಿಪಿ ಡಾ|| ಸಂಜೀವ ಎಂ ಪಾಟೀಲ ಮತ್ತು ಮಕ್ಕಳ ವಿಶೇಷ ಪೊಲೀಸ್ ಘಟಕದ ಅಧಿಕಾರಿ ವೆಲಂಟಿನ್ ಡಿಸೋಜಾರವರುಗಳ ಮಾರ್ಗದರ್ಶನದಲ್ಲಿ ನಡೆಯಿತು.