ಮಹಿಳಾ ಮತ್ತು ಮಕ್ಕಳ ಮಾರಾಟ ಸಾಗಾಟ ತಡೆಗಾಗಿ ಪೊಲೀಸ್ ಆಯುಕ್ತರಿಗೆ ಮನವಿ
ಮಂಗಳೂರು : ನಗರ ಪ್ರದೇಶದಲ್ಲಿ ಮಹಿಳೆಯರ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ಮಾರಾಟ ಮತ್ತು ಸಾಗಟ ತಡೆಗಟ್ಟುವ ಕುರಿತು ನಗರ ಪ್ರದೇಶಕ್ಕೆ ಮಧ್ಯವರ್ತಿಗಳು ಹೆಣ್ಣುಮಕ್ಕಳನ್ನು ಕರೆತಂದು ಬೇರೆ ಬೇರೆ ರಿತಿಯಲ್ಲಿ ದುರ್ಬಳಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಮಾನ ಮನಸ್ಕ ಸಂಘಟನೆಗಳು ಈ ಬಗ್ಗೆ ಗಂಭೀರ ಚಿಂತನೆಯನ್ನು ನಡೆಸಿ ಕೆ¼ವೊಂದು ಅಂಶಗಳನ್ನು ಪೊಲೀಸ್ ಆಯುಕ್ತರ ಗಮನಕ್ಕೆ ತರುವ ಮೂಲಕ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದ.ಕ.ಜಿಲ್ಲಾ ಪೊಲೀಸ್ ಆಯುಕ್ತರಿಗೆ ಮನವಿ ಮಾಡಲಾಯಿತು.
ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಪ್ರಕಟವಾದಂತೆ ಪಂಪ್ ವೆಲ್ ಲಾಡ್ಜ್ ಗಳಲ್ಲಿ ಪೋಲೀಸರು ಮಹಿಳೆಯರನ್ನು ರಕ್ಷಿಸಿ ಕಾನುನು ವಿರೋಧಿ ಚಟುವಟಿಕೆಗಳನ್ನು ಭೇದಿಸಿರುವ ನಿಟ್ಟಿನಲ್ಲಿ ಉತ್ತಮ ಕಾರ್ಯವನ್ನು ಪೊಲೀಸ್ ಇಲಾಖೆಯವರು ಮಾಡಿರುತ್ತಾರೆ. ಆದರೆ ನಗರ ಪ್ರದೇಶದಲ್ಲಿರುವ ಬಹುಮಹಡಿ ಕಟ್ಟಡಗಳಲ್ಲಿ, ವಸತಿ ಗೃಹಗಳಲ್ಲಿ ಬೇರೆ ಬೇರೆ ರಾಜ್ಯಗಳಿಂದ ಹದಿಹರೆಯದ ಹೆಣ್ಣು ಮಕ್ಕಳನ್ನು ಉದ್ಯೋಗ ನೀಡುವ ಭರವಸೆಯಲ್ಲಿ ಮಂಗಳೂರು ನಗರ ಪ್ರದೇಶಕ್ಕೆ ಮಧ್ಯವರ್ತಿಗಳು ಕರೆತಂದು ಅವರನ್ನು ಇಲ್ಲಿ ಬೇರೆ ಬೇರೆ ರಿತಿಯಲ್ಲಿ ದುರ್ಬಳಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಮಾನ ಮನಸ್ಕ ಸಂಘಟನೆಗಳು ಈ ಬಗ್ಗೆ ಗಂಭೀರ ಚಿಂತನೆಯನ್ನು ನಡೆಸಿ ಈ ಕೆಳಗಿನ ಅಂಶಗಳನ್ನು ನಗರ ಪೊಲೀಸ್ ಆಯುಕ್ತರ ಗಮನಕ್ಕೆ ತರುವ ಮೂಲಕ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಈ ಕೆಳಗಿನ ಅಂಶಗಳನ್ನೊಳಗೊಂಡ ಮನವಿಯನ್ನು ಮಾಡಲಾಯಿತು.
• ಮಸಾಜು ಪಾರ್ಲರು, ಪಬ್ಗಳ ಹೆಸರುಗಳಲ್ಲಿ ಮಕ್ಕಳನ್ನು ಮತ್ತು ಮಹಿಳೆಯರನ್ನು ಅನೈತಿಕ ಚಟುವಟಿಕೆಗಳಲ್ಲಿ ಬಳಸಿಕೊಳ್ಳುವುದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು.
• ಮಹಿಳೆಯರನ್ನು ಮತ್ತು ಮಕ್ಕಳನ್ನು ದುರ್ಬಳಕೆ ಮಾಡುತ್ತಿರುವ ಹಾಗೂ ಕಾರ್ಯಚಟುವಟಿಕೆ ನಡೆಸುತ್ತಿರುವ ಸ್ಥಳಗಳ ಮಾಲಕರಿಗೆ ಹಾಗೂ ಮಧ್ಯವರ್ತಿಗಳ ಮೇಲೆ ಕಾನೂನು ಕ್ರಮವನ್ನು ಸೂಕ್ತವಾಗಿ ಜರಗಿಸುವುದರ ಜೊತೆಗೆ ಇಂತಹ ವಿಚಾರಗಳ ಬಗ್ಗೆ ಮಾಹಿತಿ ನೀಡುವವರಿಗೆ ಕೂಡ ಸೂಕ್ತವಾದ ರಕ್ಷಣೆ ಅಥವಾ ಭದ್ರತೆ ನೀಡಬೇಕು.
• ತುರ್ತು ರಕ್ಷಣೆಯಲ್ಲಿ ಪಾರಾದ ಮಹಿಳೆ ಮತ್ತು ಮಕ್ಕಳಿಗೆ ಸೂಕ್ತವಾದ ವ್ಯವಸ್ಥೆಯನ್ನು ಕಲ್ಪಿಸುವಂತೆ ತಕ್ಷಣವೇ ಕ್ರಮ ಕೈಗೊಳ್ಳಬೇಕು.
• ಜಿಲ್ಲಾಡಳಿತದ ನೇತೃತ್ವದಲ್ಲಿ ಪ್ರತೀ 3 ತಿಂಗಳಿಗೊಮ್ಮೆ ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಗಾಗಿ ಮಹಿಳೆಯರಮತ್ತು ಮಕ್ಕಳ ಪರ ಕೆಲಸ ಮಾಡುವ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು, ಸಾಮಾಜಿಕ ಕಾರ್ಯಕರ್ತರ ಸಭೆಯನ್ನು ಕರೆಯಬೇಕು.
ಈ ಸಂದರ್ಭದಲ್ಲಿ ಬಾಲಕಾರ್ಮಿಕ ಪದ್ದತಿ ವಿರೋಧಿ ಆಂದೋಲನದ ರೆನ್ನಿಡಿಸೋಜ, ಎನ್.ಜಿ.ಒ ಒಕ್ಕೂಟದ ಸುರೇಶ್ ಶೆಟ್ಟಿ,ಶಿಕ್ಷಣ ರಕ್ಷಣಾ ವೇಧಿಕೆಯ ಲೋಲಾಕ್ಷ, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಅಧ್ಯಕ್ಷರಾದ ಪ್ರೇಮಿ ಪೆರ್ನಾಂಡಿಸ್, ಹ್ಯಾರಿಸ್ ಬಂಟ್ವಾಳ, ಪಿ.ಯು.ಸಿ.ಎಲ್ನ ರಾಷ್ಟ್ರೀಯ ಉಪಾಧ್ಯಕ್ಷರಾದ ಪಿ.ಬಿ.ಡೇಸಾ, ಪ್ರತಿದ್ವನಿ ಜಿಲ್ಲಾ ವೇಧಿಕೆಯ ನಂದಾ ಪಯಾಸ್,ಮಾನವ ಹಕ್ಕುಗಳ ಹೋರಾಟಗಾರರಾದ ಉಷಾ ನಾಯಕ್, ಹರಿಣಿ, ದುರ್ಗಪ್ರಸಾದ್, ಆಶಾ ಹೊಸಬೆಟ್ಟು, ಹಿರಿಯ ನಾಗರಿಕ ಸಹಾಯವಾಣಿಯ ಸಾತ್ವಿಕ್, ಸಮಾಜ ಕಾರ್ಯಕರ್ತರಾದ ಅಸುಂತಾ, ಜಯಂತಿ ಮೂಲ್ಯ,ಆಶಲತಾ, ಹಾಗೂ ಕೀರ್ತೆಶ್ರವರು, ಸಹೋದಯಾ ಭೆಥನಿ ಸೇವಾ ಸಂಸ್ಥೆ ಬೆಂದೂರ್ವೆಲ್ ಇದರ ಸಿಬ್ಬಂಧಿಗಳು ಭಾಗವಹಿಸಿದ್ದರು.