Home Mangalorean News Kannada News ಮಹಿಳೆಯರ ರಕ್ಷಣೆಗೆ ಕಾನೂನು ಉಪಯೋಗವಾಗಲಿ – ಡಾ. ಸೆಲ್ವಮಣಿ ಆರ್  

ಮಹಿಳೆಯರ ರಕ್ಷಣೆಗೆ ಕಾನೂನು ಉಪಯೋಗವಾಗಲಿ – ಡಾ. ಸೆಲ್ವಮಣಿ ಆರ್  

Spread the love

ಮಹಿಳೆಯರ ರಕ್ಷಣೆಗೆ ಕಾನೂನು ಉಪಯೋಗವಾಗಲಿ – ಡಾ. ಸೆಲ್ವಮಣಿ ಆರ್  

ಮಂಗಳೂರು : ಮಹಿಳೆಯರು ಎಲ್ಲಾ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ, ಅವರ ಆತ್ಮರಕ್ಷಣೆ ಮತ್ತು ಸ್ವಾಭಿಮಾನದ ರಕ್ಷಣೆಗೆ ಕಾನೂನಿನ ಉಪಯೋಗ ಆಗಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸ್ವೆಲಮಣಿ ಆರ್ ಹೇಳಿದರು.

ಸೋಮವಾರ ದ.ಕ. ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ಸಾಂತ್ವನ ಯೋಜನೆ ಮತ್ತು ವರದಕ್ಷಿಣೆ ನಿಷೇಧ ಸಭೆಯಲ್ಲಿ ಮಾತನಾಡಿದರು.

ಸಾಂತ್ವನ ಯೋಜನೆ ಅಡಿಯಲ್ಲಿ ನೊಂದವರಿಗೆ ಕಾನೂನು ವ್ಯಾಪ್ತಿಯಲ್ಲಿ ಸಹಾಯ ನೀಡಲಾಗುವುದು. ತಾಲೂಕಿನ ಆಯಾ ಭಾಗಗಳಲ್ಲಿ ಸಾಂತ್ವನ ಸಹಾಯ ಕೇಂದ್ರದಿಂದ ನೊಂದವರಿಗೆ ಸಹಾಯವಾಗಬೇಕು. ನೊಂದ ಮಹಿಳೆಯರಿಗೆ ಚಿಕಿತ್ಸೆಯ ಅವಶ್ಯಕತೆ ಇದೆ ಎಂದು ವ್ಶೆದ್ಯರು ತಪಾಸನೆ ನಡೆಸಿದ ಸಮಯದಲ್ಲಿ ದೃಢ ಪಡಿಸಿದರೆ ಅವರಿಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ರತೇಕ ಕೊಠಡಿಯ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಅಂತವರ ರಕ್ಷಣೆಯ ದೃಷ್ಠಿಯಿಂದ ಮಹಿಳಾ ಪೊಲೀಸ್‍ರನ್ನು ನೇಮಕ ಮಾಡಲಾಗುತ್ತದೆ. ವರದಕ್ಷಿಣೆಗೆ ಸಂಬಂಧಸಿದಂತೆ ಬಾಕಿ ಇರುವ ಪ್ರಕರಣಗಳನ್ನು ಆದಷ್ಟು ಬೇಗನೇ ಇತ್ಯರ್ಥಕ್ಕೆ ಸೂಕ್ತ ಕ್ರಮವಹಿಸಿಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರಾಮಕೃಷ್ಣ ರಾವ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್, ಟ್ರಸ್ಟ್ ಮುಖ್ಯಸ್ಥüರು, ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಇತರರು ಉಪಸ್ಥಿತರಿದ್ದರು.


Spread the love

Exit mobile version