ಮಹಿಳೆಯ ಬ್ಯಾಗ್ ಕಸಿದು ಪರಾರಿಯಾದ ಇಬ್ಬರು ಆರೋಪಿಗಳ ಬಂಧನ
ಉಡುಪಿ: ಶ್ರೀಕೃಷ್ಣ ಮಠದ ರಾಜಾಂಗಣ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಓರ್ವ ಮಹಿಳೆಯಿಂದ ಬ್ಯಾಗ್ ಕಸಿದುಕೊಂಡು ಅಲ್ಲಿಂದ ತಪ್ಪಿಸಿಕೊಂಡು ಒಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ.
ಬಂಧೀತರನ್ನು ಕೊಳಲಗಿರಿ ನಿವಾಸಿ ಶಕಿಲೇಶ್ (18) ಮತ್ತು ಮನೋಹರ್ (19) ಎಂದು ಗುರುತಿಸಲಾಗಿದೆ.
ಅಗೋಸ್ತ್ 20 ರಂದು ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 177/2017 ಕಲಂ: 379 ಜೊತೆಗೆ 34 ಐಪಿಸಿ ಪ್ರಕರಣದಲ್ಲಿನ ಆರೋಪಿಗಳ ಬಗ್ಗೆ ಪತ್ತೆಯ ಬಗ್ಗೆ ಎ.ಎಸ್.ಐ ಗೋಪಾಲಕೃಷ್ಣ ಜೋಗಿ ಮತ್ತು ಅಪರಾಧ ಪತ್ತೆ ಕರ್ತವ್ಯ ಸಿಬ್ಬಂದಿಗಳಾದ ಜೀವನ್ ಕುಮಾರ್ , ಪ್ರಸನ್ನ, ಪ್ರಸಾದ್ ರವರೊಂದಿಗೆ ಉಡುಪಿ ಹೊರ ವಲಯದ ಕರಾವಳಿ ಜಂಕ್ಷನ್ ನಲ್ಲಿ ಸಂಶಯಿತ ದ್ವಿಚಕ್ರ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾಗ ಸಮಯ ಸುಮಾರು 21:15 ಗಂಟೆಗೆ ಉಡುಪಿ ಸಂಚಾರ ಠಾಣೆಯ ಎ.ಎಸ್.ಐ ಪ್ರಕಾಶ್ ಮತ್ತು ಅವರ ಸಿಬ್ಬಂದಿ ಶಿವಪ್ಪ ಬಿ. ಮಾದರ ರವರು ಒಂದು ನೀಲಿ ಬಣ್ಣದ ದ್ವಿ ಚಕ್ರ ವಾಹನವನ್ನು ಅಂಬಾಗಿಲು ಕಡೆಯಿಂದ ಬೆನ್ನಟ್ಟಿ ಕೊಂಡು ಬರುತ್ತಿರುವ ಬಗ್ಗೆ ಮಾಹಿತಿ ನೀಡಿದ ಮೇರೆಗೆ ಕೂಡಲೇ ಕರಾವಳಿ ಜಂಕ್ಷನ್ ನಿಂದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂತೆಕಟ್ಟೆ ಕಡೆಗೆ ಹೊರಟು ಬರುತ್ತಾ ಸುಮಾರು 21:30 ಗಂಟೆಗೆ ಅಂಬಾಗಿಲು ಎಲ್.ವಿ.ಟಿ ಮುಂಭಾಗ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚಾರ ಠಾಣೆಯ ಎ.ಎಸ್.ಐ ಪ್ರಕಾಶ್ ಮತ್ತು ಅವರ ಸಿಬ್ಬಂದಿಯವರು ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಿಸಿದಾಗ ಶ್ರೀಕೃಷ್ಣ ಮಠದ ರಾಜಾಂಗಣ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಓರ್ವ ಮಹಿಳೆಯಿಂದ ಕಸಿದುಕೊಂಡು ಅಲ್ಲಿಂದ ತಪ್ಪಿಸಿಕೊಂಡು ಒಡುತ್ತಿದ್ದ ವಿಚಾರ ತಿಳಿಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ಮೊಬೈಲ್, ನಗದು ಹಾಗೂ ಸೊತ್ತುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.