Spread the love
ಮಾದಕ ವಸ್ತುಗಳ ಬಳಕೆ ದೂರು ದಾಖಲಾತಿಗಾಗಿ 1908 ಸಂಖ್ಯೆ ಬಳಸಿ
ಮಂಗಳೂರು : ರಾಜ್ಯದಲ್ಲಿ ಮಾದಕ ವಸ್ತುಗಳ ಬಳಕೆ ಹಾಗೂ ಮಾರಾಟವನ್ನು ತಡೆಗಟ್ಟಲು ಮತ್ತು ಮಾದಕ ವಸ್ತಗಳ ದುಷ್ಪರಿಣಾಮದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಡ್ರಗ್ಸ್ ಅವ್ಯವಹಾರಗಳಿಗೆ ಸಂಬಂದಿಸಿದಂತೆ ರಹಸ್ಯ ಮಾಹಿತಿ/ದೂರು ನೀಡಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ 4 ಅಂಕಿಗಳ 1908 ಎಂಬ ಸಂಖ್ಯೆಯನ್ನು ನೀಡಲಾಗಿದೆ.
ಈ ಸಂಖ್ಯೆಗೆ ಬರುವ ದೂರುಗಳನ್ನು ಸ್ವೀಕರಿಸಲು ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದು ಕೊಳ್ಳುವಂತೆ ಮಂಗಳೂರು ನಗರ ಪೋಲಿಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Spread the love