Home Mangalorean News Kannada News ಮಾನ ಹಾನಿಕರ ವರದಿ ಪ್ರಕಟಿಸುವ ಬೆದರಿಕೆಯೊಡ್ಡಿದ ಪತ್ರಕರ್ತನ ಮೇಲೆ ಪ್ರಕರಣ ದಾಖಲು

ಮಾನ ಹಾನಿಕರ ವರದಿ ಪ್ರಕಟಿಸುವ ಬೆದರಿಕೆಯೊಡ್ಡಿದ ಪತ್ರಕರ್ತನ ಮೇಲೆ ಪ್ರಕರಣ ದಾಖಲು

Spread the love

ಮಾನ ಹಾನಿಕರ ವರದಿ ಪ್ರಕಟಿಸುವ ಬೆದರಿಕೆಯೊಡ್ಡಿದ ಪತ್ರಕರ್ತನ ಮೇಲೆ ಪ್ರಕರಣ ದಾಖಲು

ಉಡುಪಿ: ಮಾನಹಾನಿಕರ ವರದಿಗಳನ್ನು ಪ್ರಕಟಿಸುವುದಾಗಿ ಬೆದರಿಕೆಯೊಡ್ಡುತ್ತಿದ್ದ ಟ್ಯಾಬ್ಲೋಯ್ಡ್ ಪತ್ರಿಕೆಯ ಸಂಪಾದಕನೋರ್ವನ ಮೇಲೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾಯ್ ಕರಾವಳಿ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಅಮ್ಮ ರವಿ ಎಂಬ ವ್ಯಕ್ತಿ ಇತ್ತೀಚೆಗೆ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನಲ್ಲಿ ಗ್ಯಾಂಗ್ ಕಟ್ಟಿಕೊಂಡು ಬಂದ ಅಮ್ಮರವಿ, ಹೆಬ್ರಿಯ ಹಳೆ ಚಾಮ್ಸ್ ಫ್ಯಾಕ್ಟರಿ ಬಳಿ ನಡೆದುಕೊಂಡು ಹೋಗ್ತಾಯಿದ್ದ ಪುಷ್ಪರಾಜ್ ಎಂಬವರನ್ನ ಅಡ್ಡಗಟ್ಟಿ ಸುಳ್ಳು ಸುದ್ದಿ ಪ್ರಕಟಿಸಬಾರದೆಂದಾದ್ರೆ ಒಂದು ಲಕ್ಷ ನೀಡಬೇಕು ಎಂಬ ಹಣದ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಅಲ್ಲದೆ ನೀನು ನಿನ್ನ ಕುಟುಂಬದವರು ನೀಚ ಜಾತಿಗೆ ಸೇರಿದವರು ಎಂದು ಜಾತಿ ನಿಂದನೆ ಮಾಡಿದ್ದಾನೆ ಜೊತೆಗೆ ಇತ್ತೀಚೆಗೆ ನನ್ನ ಪ್ರಭಾವದಿಂದ ನಿನ್ನ ಮೇಲೆ ಒಂದು ಹುಡುಗಿಯ ಕೇಸ್ ಮಾಡಿ ಈ ಹಿಂದೆ ನನ್ನ ಹಾಯ್ ಕರಾವಳಿ ಪತ್ರಿಕೆಯಲ್ಲಿ ಸುದ್ದಿ ಪ್ರಕಟಿಸಿದ್ದೇನೆ. ನನಗೆ ಹಣ ನೀಡದಿದ್ದಲ್ಲಿ ಮತ್ತೆ ಸುದ್ದಿಹಾಕುತ್ತೇನೆ ಬೆದರಿಕೆ ಕೂಡ ಹಾಕಿದ್ದನು ಎಂದು ದೂರಿನಲ್ಲಿ ಪುಷ್ಪರಾಜ್ ತಿಳಿಸಿದ್ದಾರೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಎಸ್ಸಿಎಸ್ಟಿ ಆಕ್ಟ್ ಅಡಿಯಲ್ಲಿ ಮಾನಹಾನಿ, ಜೀವ ಬೆದರಿಕೆ ಪ್ರಕರಣ ದಾಖಲಾಗಿದೆ.


Spread the love

Exit mobile version