ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ (ಎಂಸಿಜೆ) ಬೆಳ್ಳಿಹಬ್ಬ ಹಿನ್ನೆಲೆಯಲ್ಲಿ ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ್) ವತಿಯಿಂದ 26ರಂದು ನಗರದಲ್ಲಿ “ಮನೋಭಿನಂದನ” ಕಾರ್ಯಕ್ರಮ ನಡೆಯಲಿದೆ. ನಗರದ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ಅಂದು ಬೆಳಗ್ಗೆ 10ರಿಂದ 1 ಗಂಟೆ ತನಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಮ್ ಅಧ್ಯಕ್ಷ ವೇಣು ಶರ್ಮ ತಿಳಿಸಿದ್ದಾರೆ.
ಬುಧವಾರ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 10ಕ್ಕೆ ಸರಿಯಾಗಿ ಆರಂಭವಾಗುವ ಸಮಾರಂಭದಲ್ಲಿ ಅತಿಥಿಗಳಾಗಿ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಅಭಯಚಂದ್ರ ಜೈನ್, ಆರೋಗ್ಯ ಸಚಿವ ಯು.ಟಿ.ಖಾದರ್, ದ.ಕ. ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು, ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ದುಬೈ ಏರೋಮಾಡನರ್್ ಶಿಪ್ಪಿಂಗ್ನ ಸುಧಾಕರ ಪೇಜಾವರ ಹಾಗೂ ಮಂಗಳೂರು ವಿ.ವಿ. ಕುಲಪತಿ ಪ್ರೊ.ಕೆ.ಬೈರಪ್ಪ ಪಾಲ್ಗೊಳ್ಳುವರು. ಮಾಮ್ ಅಧ್ಯಕ್ಷ ವೇಣು ಶರ್ಮ ಅಧ್ಯಕ್ಷತೆ ವಹಿಸುವರು.
ಪೂವರ್ಾಹ್ನ 11.30ರಿಂದ ಪ್ರದೇಶಾಭಿವೃದ್ಧಿಯಲ್ಲಿ ಮಂಗಳೂರು ವಿ.ವಿ. ಕೊಡುಗೆ ಎಂಬ ವಿಚಾರದಲ್ಲಿ ವಿಚಾರಸಂಕಿರಣ ನಡೆಯಲಿದೆ. ಮಂಗಳೂರು ವಿ.ವಿ. ಕುಲಸಚಿವ ಪ್ರೊ.ಪಿ.ಎಸ್.ಯಡಪಡಿತ್ತಾಯ, ಮಂಗಳೂರು ವಿ.ವಿ.ಕನ್ನಡ ವಿಭಾಗ ಮುಖ್ಯಸ್ಥ ಪ್ರೊ.ಕೆ.ಚಿನ್ನಪ್ಪ ಗೌಡ, ಮಂಗಳೂರು ವಿ.ವಿ.ಸ್ಥಾಪಕ ಸದಸ್ಯ ಪ್ರೊ.ಶ್ರೀಪತಿ ತಂತ್ರಿ, ಅಮುಕ್ತ್ ಅಧ್ಯಕ್ಷ ಡಾ.ನೋರ್ಬಟರ್್ ಲೋಬೊ ಪಾಲ್ಗೊಳ್ಳುವರು. ಮಣಿಪಾಲ ವಿ.ವಿ.ನಿವೃತ್ತ ಕುಲಪತಿ ಪ್ರೊ.ಬಿ.ಎಂ.ಹೆಗ್ಡೆ ಅಧ್ಯಕ್ಷತೆ ವಹಿಸುವರು. ಮಂಗಳೂರು ವಿ.ವಿ.ಕುಲಪತಿ ಪ್ರೊ.ಕೆ.ಭೈರಪ್ಪ ಉಪಸಂಹಾರ ನುಡಿಗಳನ್ನಾಡುವರು.
ಈ ಸಂದರ್ಭ ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಸೇವೆಗಾಗಿ ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಅವರನ್ನು ಸನ್ಮಾನಿಲಾಗುವುದು. ಮನೋಹರ್ ಪ್ರಸಾದ್ ಅವರನ್ನು ಅಭಿನಂದಿಸುವ “ಮನೋಭಿನಂದನ” ಅಭಿನಂದನ ಗ್ರಂಥ ಮಾಮ್ ಗೌರವಾಧ್ಯಕ್ಷ ಸುರೇಂದ್ರ ಶೆಟ್ಟಿ ಸಂಪಾದಕತ್ವದಲ್ಲಿ ಸಿದ್ಧಗೊಂಡಿದ್ದು, ತರಂಗ ನಿಯತಕಾಲಿಕದ ವ್ಯವಸ್ಥಾಪಕ ಸಂಪಾದಕಿ ಡಾ.ಸಂಧ್ಯಾ ಪೈ ಬಿಡುಗಡೆಗೊಳಿಸುವರು.
ಮಾಮ್ ನಿಂದ ಇನ್ನಷ್ಟು ಕಾರ್ಯಯೋಜನೆ:
2014 ಡಿ.20ರಂದು “ಎಂಸಿಜೆ 25” ಸಂಭ್ರಮ ಕೂಟದಲ್ಲಿ `ಮಾಮ್’ ರಚಿಸಲಾಗಿದೆ. ಪತ್ರಿಕೋದ್ಯಮ ಮತ್ತು ಸಂಬಂಧಿತ ವಿಷಯಗಳ ಮೇಲೆ ಕಾರ್ಯಕ್ರಮ, ವಿ.ವಿ. ಮತ್ತು ನಮ್ಮ ವಿಭಾಗದ ಜೊತೆಗೆ ಒಡನಾಟ, ವಿಶ್ವವಿದ್ಯಾನಿಲಯ ಹಾಗೂ ಪತ್ರಿಕೋದ್ಯಮ ವಿಭಾಗದ ವಿದ್ಯಾಥರ್ಿಗಳಿಗೆ ನೆರವು, ಮಾಧ್ಯಮ ಕುರಿತ ವಿಚಾರಗೋಷ್ಠಿ, ಕಾಯರ್ಾಗಾರ, ಅಭಿನಂದನೆ, ಮಾಧ್ಯಮದಲ್ಲಿ ಕಲಿಯುವವರಿಗೆ ಬಹುಮಾನ, ಮಾಧ್ಯಮ ಪ್ರಕಾರಗಳಾದ ಸಿನಿಮಾ, ಸಂವಹನ ತರಬೇತಿ, ನವ ಪೀಳಿಗೆಯ ಸಂವಹನ ಕ್ಷೇತ್ರಗಳಲ್ಲಿ ವಿಶೇಷ ಕೆಲಸ, ಮಾಧ್ಯಮ ರಂಗ ಕುರಿತ ಪುಸ್ತಕ ಪ್ರಕಾಶನ ಮತ್ತಿತರ ಉದ್ದೇಶಗಳನ್ನು ಮಾಮ್ ಇರಿಸಿದೆ., ಮುಂದಿನ ತಿಂಗಳು ನಡೆಯುವ ಮಾಮ್ ವಾಷರ್ಿಕ ಮಹಾಸಭೆಯಲ್ಲಿ ಇದಕ್ಕೆ ನಿದರ್ಿಷ್ಟ ರೂಪ ನೀಡಲಾಗುವುದು. ಎಂದರು. ಮಂಗಳೂರು ವಿ.ವಿ. ಎಂಸಿಜೆ ವಿಭಾಗದಲ್ಲಿ ಈ ತನಕ ಸುಮಾರು 300ಕ್ಕೂ ಅಧಿಕ ವಿದ್ಯಾಥರ್ಿಗಳು ಕಲಿತು ಹೊರಬಂದಿದ್ದಾರೆ. ಈ ಪೈಕಿ ಈಗಾಗಲೇ 150ಕ್ಕೂ ಅಧಿಕ ಮಂದಿ ಮಾಮ್ ಸಂಪರ್ಕದಲ್ಲಿದ್ದಾರೆ.
ಮಾಮ್ ಸಂಪರ್ಕ: reachtomaam@gmail.com.
ಮಾಮ್ ಪ್ರಧಾನ ಕಾರ್ಯದಶರ್ಿ ಫ್ಲೋರಿನ್ ರೋಚ್ ಹಾಗೂ ಉಪಾಧ್ಯಕ್ಷ ಡಾ.ಅನಿಲ್ ರೊನಾಲ್ಡ್ ಫನರ್ಾಂಡಿಸ್ ಉಪಸ್ಥಿತರಿದ್ದರು.