ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ 10ನೇ ವರ್ಷದ ಸಾರ್ವಜನಿಕ ಗಣೇಶ ಉತ್ಸವ
ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ 10ನೇ ವರ್ಷದ ಸಾರ್ವಜನಿಕ ಗಣೇಶ ಉತ್ಸವವು ಬಹಳ ವಿಜ್ರಂಭಣೆಯಿಂದ ತಾರೀಕು 8 ಸೆಪ್ಟಂಬರ್ 2024 ಆದಿತ್ಯವಾರ ಅಜ್ಮಮಾನ್ ಇಂಡಿಯನ್ ಆಶೊಶೇಶನ್ ನಲ್ಲಿ ನೇರವೇರಿತು
ಬೆಳಗ್ಗೆ ಗಣಹೋಮ ದೊಂದಿಗೆ ಆರಂಭವಾಗಿ ಮಧ್ಯಾಹ್ನ ಮಹಾ ಪೂಜೆ ಮಹಾಅನ್ನದಾನ . ಸುಮಾರು ಮೂರು ಸಾವಿರ ಜನ ಭಕ್ತದಿಗಳು ಪಾಲು ಗೊಂಡರು,
ಸಭಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಮಂತ್ರಿಗಳಾದ ಶ್ರೀ ಕೃಷ್ಣ ಜೆ ಪಾಲಿಮರ್ ,ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ, ಶ್ರೀ ಹರೀಶ್ ಶೇರೆಗರ್ ಮತ್ತು ಕನ್ನಡ ಚಿತ್ರ ನಟ ಶ್ರೀ ರಂಜನ್ ಹಾಗು ಮಾರ್ಗದೀಪ ಸಮಿತಿಯ ಅಧ್ಯಕ್ಷರಾದ ಶ್ರೀ ಅಜೇತ್ ಕೋರಕೋಡು. ಉಪಾಧ್ಯಕ್ಷರಾದ ಶ್ರೀ ಸಂದೀಪ್ ರಾವು. ಮುಖ್ಯ ಕಾರ್ಯದರ್ಶಿ ಶ್ರೀ ಮಹೇಶ್ ಚಂದ್ರಗಿರಿ. ಕೋಶದಿಕಾರಿ ಶ್ರೀ ರಾಜೇಶ್ ರಾವು ಹಾಗು ಉತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಸುಗಂಧ ರಾಜ್ ಬೇಕಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು ಮಾರ್ಗದೀಪ ಸಾಂಸ್ಕೃತಿಕ ಸಮಿತಿಯು ಕಳೆದ 27 ವರ್ಷದಿಂದ ಹತ್ತು ಹಲವು ಕಾರ್ಯಕ್ರಮ ನೀಡಿರುವ ಬಗೆ ಹಾಗು ಹಲವು ಸಹಾಯಗಳನು ನೀಡಿರುವ ಬಗೆ ಅಧ್ಯಕ್ಷರು ವಿವರಿಸಿದರು. ಅತಿಥಿಗಳು ಮಾತನಾಡಿ ಮಾರ್ಗದೀಪ ಸಾಂಸ್ಕೃತಿಕ ಸಮಿತಿಯಬಗೆ ಹಾಗು ಸಾರ್ವಜನಿಕ ಗಣೇಶ ಉತ್ಸವ ಕಾರ್ಯಕ್ರಮವನ್ನು ನಡೆಸಿಬಂದಿರುವ ಬಗೆ ತುಂಬ ಪ್ರಶಂಶಿಸಿದರು.
ಭಜನೆತಂಡ: ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ,ಮೊಗವೀರ ಭಜನೆತಂಡ ದುಬೈ,ಓಂ ಶ್ರೀ ಭಜನೆತಂಡ ಶಾರ್ಜ, ಶ್ರೀ ಗುರುರಾಘವೇಂದ್ರ ಬಳಗ ಯುಎಇ ಮತ್ತು ರಾಮಕ್ಷತ್ರಿಯ ಮಹಿಳ ವೃಂದ ಯುಎಇ ನವರಾಗಂ ದುಬೈ :ಇವರಿಂದ ಸಂಗೀತ ಭಕ್ತಿಗಾನ ಸುಧಾ ಕಾರ್ಯಕ್ರಮ ,ಭರತನಾಟ್ಯ ಮತ್ತು ನೃತ್ಯ;ಗೋಲ್ಡನ್ ಸ್ಟಾರ್ ಮೂಸಿಕ್ ಶಾರ್ಜ, ರೂಪಕಿರಣ್ ಮತ್ತು ಸಂಸ್ಕೃತಿ ನೃತ್ಯ ಶಾಲೆ ದುಬೈ ಈ ದಿನದ ಸಾಂಸ್ಕೃತಿಕ ಮತ್ತು ಸಭ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀನಿವಾಸ ಕೃಷ್ಣಾಪುರ, ಶ್ರೀಮತಿ ಆರತಿ ಅಡಿಗ ಮತ್ತು vignesh kundapura ನಡೆಸಿಕೊಟ್ಟರು ಹಾಗೂ ಶ್ರೀ ಶತೀಶ್ ಹಂಗುಲೂರು ಸಹಕರಿಸಿದರು
ಈ ಕಾರ್ಯಕ್ರಮದ ಯಶಸ್ವಿಗೊಳಿಸಲು ಭಕ್ತದಿಗಳು , ದಾನಿಗಳು ಮತ್ತು ಮಾದೃಮ ಮಿತ್ರರು ಹಾಗು ತನು ಮನ ಧನದಿಂದ ಸಹಕರಿಸಿದ ಸಮಿತಿಯ ಎಲ್ಲ ಸದಸ್ಯರಿಗು ಹಾಗು ಕನ್ನಡ ಪರ ಸಂಘ ಸಂಸ್ಥೆಗಳಿಗೆ ಪ್ರತ್ಯೇಕೣ ಹಾಗು ಪರೋಕ್ಷವಾಗಿ ಸಹಾಯ ಬೆಂಬಲ ನೀಡಿದ ಎಲ್ಲರಿಗೂ ಶ್ರೀ ಸುಗಂಧ ರಾಜ್ ಬೇಕಲ್ ಧನ್ಯವಾದ ಹೇಳಿದರು
ಪುರೋಹಿತರಾದ ಶ್ರೀ ಲಕ್ಷೀಶ್ ಭಟ್ ಶ್ರೀ ರಾಜೇಶ್ ಅಡಿಗ ಇವರ ಮಾರ್ಗದರ್ಶನದಲ್ಲಿ ಪೂಜ ವಿದಿಗಳು ನಡೆಯಿತು