Spread the love
ಮಾರ್ಚ್ 31ರ ವರೆಗೆ ಉಡುಪಿಯ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್ ಗಳಲ್ಲಿ ಒಪಿಡಿ ಬಂದ್
ಉಡುಪಿ: ರಾಜ್ಯಾದ್ಯಂತ ಕೊರೊನಾ ಹೈ ಅಲರ್ಟ್ ಹಿನ್ನೆಲೆಯಲ್ಲಿ ಉಡುಪಿಯ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್ ಗಳಲ್ಲಿ ಮಾರ್ಚ್ 31ರ ವರೆಗೆ ಒಪಿಡಿ ಗಳನ್ನು ಬಂದ್ ಮಾಡಲು ನಿರ್ಧರಿಸಿದ್ದಾರೆ.
ಈ ಕುರಿತು ಭಾರತೀಯ ವೈದ್ಯ ಸಂಘ, ಉಡುಪಿ ಕರಾವಳಿ ಪ್ರಕಟಣೆ ನೀಡಿದ್ದು ಅಲೋಪತಿ ವೈದ್ಯರು ಮಾರ್ಚ್ 23ರಿಂದ 31 ರ ತನಕ ಒಪಿಡಿ ಸೇವೆಯನ್ನು (ಹೊರರೋಗಿ ವಿಭಾಗ) ಖಾಸಗಿ ಕ್ಲಿನಿಕ್ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸ್ಥಗಿತಗೊಳಿಸಲಿದ್ದಾರೆ. ಆದರೆ ತುರ್ತು ಚಿಕಿತ್ಸೆ ಎಂದಿನಂತೆ ಮುಂದುವರಿಯಲಿದೆ ಎಂದು ಭಾರತೀಯ ವೈದ್ಯ ಸಂಘ ಉಡುಪಿ-ಕರಾವಳಿಯ ಅಧ್ಯಕ್ಷ ಡಾ|ಉಮೇಶ್ ಪ್ರಭು ತಿಳಿಸಿದ್ದಾರೆ.
Spread the love