ಮಾರ್ಚ್ 4: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ಏಕತಾ ಸಮಾವೇಶ

Spread the love

ಮಾರ್ಚ್ 4: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ಏಕತಾ ಸಮಾವೇಶ

ಉಡುಪಿ: ಮುಸ್ಲಿಮ್ ಸಮುದಾಯದೇಶದ ಪ್ರಗತಿಯಲ್ಲಿ ಕೇವಲ ಮೂಕ ಪ್ರೇಕ್ಷಕರಾಗಿರದೆ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಶೈಕ್ಷಣಿಕ ಮುಂತಾದ ಕ್ಷೇತ್ರಗಳಲ್ಲಿ ತನ್ನನ್ನು ಸಬಲೀಕರಿಸುವ ಮೂಲಕ ದೇಶ ನಿರ್ಮಾಣಕಾರ್ಯದಲ್ಲಿ ತನ್ನ ಪಾತ್ರವನ್ನು ನಿರ್ವಹಿಸುವಂತಾಗಬೇಕು ಎಂಬ ಉದ್ದೇಶದೊಂದಿಗೆ ದೇಶ ನಿರ್ಮಾಣಕ್ಕಾಗಿ ಸಮುದಾಯದ ಸಬಲೀಕರಣ ಎಂಬ ಧ್ಯೇಯವಾಕ್ಯದಡಿಯಲ್ಲಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ಏಕತಾ ಸಮಾವೇಶವನ್ನು ಮಾರ್ಚ್ 4 ರವಿವಾರದಂದು ಉಡುಪಿ ಬೀಡಿನಗುಡ್ಡೆಯ ಮಹಾತ್ಮಗಾಂಧಿ ಬಯಲು ರಂಗ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಏಕತಾ ಸಮಾವೇಶ ಇದರ ಸಂಚಾಲಕರಾದ

ಖತೀಬ್ಅಬ್ದುಲ್ ರಶೀದ್ ಅವರು ಸಂಜೆ 3.30 ರಿಂದ ರಾತ್ರಿ 10.30ರ ವರೆಗೆ ನಡೆಯಲಿರುವ ಈ ಸಮಾವೇಶವನ್ನು ಇತ್ತಿಹಾದೆ ಮಿಲ್ಲತ್ ಕೌನ್ಸಿಲ್ನ ಅಧ್ಯಕ್ಷರು ಹಾಗೂ ಅಹ್ಲೆ ಸುನ್ನತ್ವಲ್ ಜಮಾಅತ್ನ ಪ್ರಖ್ಯಾತ ವಿದ್ವಾಂಸರಾದ ಅಹ್ಮದ್ ರಝಾಖಾನ್ ಅವರ ಮೊಮ್ಮಗ ಮೌಲಾನಾ ತೌಖೀರ್ ರಝಾಖಾನ್ಉದ್ಘಾಟಿಸಲಿರುವರು.

ಒಕ್ಕೂಟದ ಅಧ್ಯಕ್ಷರಾದ ಮುಹಮ್ಮದ್ ಯಾಸೀನ್ ಮಲ್ಪೆ ದಿಕ್ಸೂಚಿ ಭಾಷಣ ಮಾಡಲಿದ್ದು. ಮಂಗಳೂರು ಜಿಲ್ಲಾ ಖಾಝಿಗಳಾದ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಸಮಾರೋಪ ಭಾಷಣ ಮಾಡಲಿರುವರು. ಮುಖ್ಯ ಅತಿಥಿಗಳಾಗಿ ಅಜ್ಮೀರ್ನ ಖಾಜಾ ಮೊೈನುದ್ದೀನ್ ಚಿಶ್ತಿ ದರ್ಗಾದ ಸಜ್ಜಾದ್ ನಶೀನ್ ವ ದಿವಾನರಾದ ಹಝ್ರತ್ ಚಿಶ್ತಿ ದಿವಾನ್ ಸೈಯದ್ ಝೈನುಲ್ ಆಬಿದೀನ್, ತಬ್ಲೀಗ್ ಜಮಾಅತ್ನ ನಾಯಕ ಹಾಗೂ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ನ ವಕ್ತಾರರಾದ ಮೌಲಾನಾ ಸಜ್ಜಾದ್ ನೋಮಾನಿ, ಜಮಿಯ್ಯತೆ ಅಹ್ಲೆ ಹದೀಸ್ನ ರಾಷ್ಟ್ರೀಯ ಅಧ್ಯಕ್ಷರಾದ ಮೌಲಾನಾ ಶೇಖ್ ಅಸ್ಗರ್ ಅಲಿ ಇಮಾಮ್ ಮೆಹ್ದಿ, ಪೊಪ್ಯುಲರ್ ಫ್ರಂಟ್ಆಫ್ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷರಾದ ಇ. ಅಬೂಬಕ್ಕರ್, ಜಮಾಅತೆ ಇಸ್ಲಾಮೀ ಹಿಂದ್ನ ರಾಷ್ಟ್ರೀಯ ಉಪಾಧ್ಯಕ್ಷ ಸೈಯದ್ ಸಆದತುಲ್ಲಾ ಹುಸೈನಿ ಹಾಗೂ ವಾರ್ತಾಭಾರತಿಯ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಭಾಗವಹಿಸಿ ತಮ್ಮ ವಿಚಾರಗಳನ್ನು ಮಂಡನೆ ಮಾಡಲಿರುವರು.

ಸಮಾವೇಶದಲ್ಲಿ ಗೌರವ ಅತಿಥಿಗಳಾಗಿ ದುಬೈಯ ಹಿದಾಯತ್ ಗ್ರೂಪ್ ಆಫ್ ಕಂಪೆನಿಯ ಚೇರ್ಮೆನ್ ಹಿದಾಯತುಲ್ಲಾ ಅಬ್ಬಾಸ್, ಭಾರತ, ಮಧ್ಯಪ್ರಾಚ್ಯ, ಚೀನಾ ದೇಶಗಳಲ್ಲಿ ಕಾರ್ಯಾಚರಿಸುತ್ತಿರುವ ಪಿ.ಬಿ.ಎಫ್. ಗ್ರೂಪ್ ಅಫ್ ಕಂಪೆನೀಸ್ ಇದರ ಚೇರ್ಮೆನ್ ಹಾಗೂ ಆಡಳಿತ ನಿರ್ದೇಶಕರಾದ ಮುಹಮ್ಮದ್ ಅಸ್ಲಂ ಖಾಝಿ, ಉದ್ಯಾವರ ಹಲೀಮಾ ಸಾಬ್ಜು ಆಡಿಟೋರಿಯಂನ ಮಾಲಕರಾದ ಹಾಜಿ ಅಬ್ದುಲ್ ಜಲೀಲ್ ಉದ್ಯಾವರ, ಗೋವಾದ ಕ್ವಾಲಿಟಿ ಎಕ್ಸ್ಪೋರ್ಟ್ನ ಆಡಳಿತ ನಿರ್ದೇಶಕರಾದ ಮೌಲಾನಾ ಇಬ್ರಾಹಿಂ ಗಂಗೊಳ್ಳಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎಂ.ಎ. ಗಫೂರ್, ದ.ಕ. ಮತ್ತು ಉಡುಪಿ ಜಿಲ್ಲಾ ಸೆಂಟ್ರಲ್ ಮುಸ್ಲಿಮ್ ಕಮಿಟಿಯ ಅಧ್ಯಕ್ಷರಾದ ಹಾಜಿಕೆ.ಎಸ್. ಮುಹಮ್ಮದ್ ಮಸೂದ್, ಮಂಗಳೂರಿನ ಮಾಜಿ ಮೇಯರ್ ಹಾಗೂ ದ.ಕ.ಜಿಲ್ಲಾ ಮುಸ್ಲಿಮ್ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್, ಭಟ್ಕಳದ ಮಜ್ಲಿಸ್-ಎ-ಇಸ್ಲಾಹ್-ಓ ತಝೀಮ್ನ ಅಧ್ಯಕ್ಷರಾದ ಇನಾಯತುಲ್ಲಾ ಶಾಬಂದ್ರಿ, ಜಮಿಯತುಲ್ ಫಲಾಹ್ ದ.ಕ. ಮತ್ತು ಉಡುಪಿ ಜಿಲ್ಲೆಗಳ ಅಧ್ಯಕ್ಷರಾದ ಶಾಹುಲ್ ಹಮೀದ್ ಕೆ.ಕೆ., ಮಂಗಳೂರಿನ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ನ ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ, ಉಡುಪಿ ಜಿಲ್ಲಾ ಸುನ್ನಿ ಸಂಯುಕ್ತ ಜಮಾತ್ನ ಅಧ್ಯಕ್ಷರಾದ ಹಾಜಿ ಅಬ್ದುಲ್ಲಾ ನಾವುಂದ, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಹಿರಿಯ ಉಪಾಧ್ಯಕ್ಷರಾದ ಹಾಜಿ ಅಬ್ದುಲ್ಲಾ ಪರ್ಕಳ, ಜಮಾಅತೆ ಇಸ್ಲಾಮೀ ಹಿಂದ್ನ ಕರಾವಳಿ ವಲಯ ಸಂಚಾಲಕರಾದ ಅಕ್ಬರ್ ಅಲಿ, ಉಡುಪಿ ಅಹ್ಲೆ ಸುನ್ನತ್ ವಲ್ ಜಮಾತ್ನ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶೀಶ್, ಜಮೀಯತೆ ಅಹ್ಲೆ ಹದೀಸ್ ಉಡುಪಿ ಘಟಕದ ಅಧ್ಯಕ್ಷರಾದ ಆತಿಫ್ ಹುಸೈನ್, ತಬ್ಲೀಗ್ ಜಮಾಅತ್ ಉಡುಪಿ ವಲಯದ ಸಂಘಟಕರಾದ ಮುಹಮ್ಮದ್ ಶರೀಫ್, ಪೋಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಉಡುಪಿ ಜಿಲ್ಲಾಧ್ಯಕ್ಷರಾದ ನಿಸಾರ್ ಅಹ್ಮದ್ ಮತ್ತು ಉಡುಪಿ ಜಿಲ್ಲಾ ಮುಸ್ಲಿಮ್ ರಾಜಕೀಯ ವೇದಿಕೆಯ ಸಂಚಾಲಕರಾದ ಹಬೀಬ್ ಅಲಿ ಭಾಗವಹಿಸಲಿದ್ದಾರೆ.

ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳಲಿರುವ ಈ ಸಮಾವೇಶದಲ್ಲಿ ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ವಿನಂತಿ.


Spread the love