Home Mangalorean News Kannada News ಮಾರ್ನಮಿಕಟ್ಟೆ ನಿವಾಸಿ ಸಂದೀಪ್ ಶೆಟ್ಟಿ ಕೊಲೆ ಯತ್ನ ಪ್ರಕರಣ ಮೂವರ ಬಂಧನ

ಮಾರ್ನಮಿಕಟ್ಟೆ ನಿವಾಸಿ ಸಂದೀಪ್ ಶೆಟ್ಟಿ ಕೊಲೆ ಯತ್ನ ಪ್ರಕರಣ ಮೂವರ ಬಂಧನ

Spread the love

ಮಾರ್ನಮಿಕಟ್ಟೆ ನಿವಾಸಿ ಸಂದೀಪ್ ಶೆಟ್ಟಿ ಕೊಲೆ ಯತ್ನ ಪ್ರಕರಣ ಮೂವರ ಬಂಧನ

ಮಂಗಳೂರು: ಮಾರ್ನಮಿಕಟ್ಟೆ ನಿವಾಸಿ ಸಂದೀಪ್ ಶೆಟ್ಟಿ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಪೋಲಿಸರು ಮಂಕಿ ಸ್ಟ್ಯಾಂಡ್ ವಿಜಯ್ ಹಾಗೂ ಆತನ ಸಹಚರರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಮಂಕಿಸ್ಟ್ಯಾಂಡ್ ನಿವಾಸಿ ವಿಜಯ (30), ಗೋರಿಗುಡ್ಡೆ ವೆಲೆನ್ಸಿಯ ನಿವಾಸಿ ಮೆಲ್ರಿಕ್ ಡಿ’ಸೋಜ (20), ಕೋಡಿಕಲ್ ನಿವಾಸಿ ಪ್ರವೀಣ್ (23) ಎಂದು ಗುರುತಿಸಲಾಗಿದೆ.

vijay-melrick-praveen-20160824

ಅಗೋಸ್ತ್ 16 ರಂದು ಮಧ್ಯಾಹ್ನ 1 ಗಂಟೆಗೆ ಮಾರ್ನಮಿಕಟ್ಟೆ ನಿವಾಸಿ ಸಂದೀಪ್ ಶೆಟ್ಟಿ ಎಂಬಾತನನ್ನು ಆರೋಪಿಗಳಾದ ಮಂಕಿ ಸ್ಟಾಂಡ್ ವಿಜಯ್ ಹಾಗೂ ಆತನ ಸಹಚರರು ಮಾರ್ನಮಿಕಟ್ಟೆ ರಿಕ್ಷಾ ಪಾರ್ಕಿಂಗ್ ಬಳಿಯಿಂದ ಬೆನ್ನಟ್ಟಿ, ತಲವಾರುಗಳಿಂದ ಕಡಿದು, ಮಾರಣಾಂತಿಕ ಗಾಯಗೊಳಿಸಿ, ಕೊಲೆ ನಡೆಸಲು ಪ್ರಯತ್ನಿಸಿದ ಬಗ್ಗೆ ಮಂಕಿ ಸ್ಟಾಂಡ್ ವಿಜಯ್ ಹಾಗೂ ಆತನ ಸಹಚರರ ಮೇಲೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಾದ ಬಳಿಕ ಅತೀ ಕಡಿಮೆ ಅವದಿಯಲ್ಲಿ ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಾದ ನಿಖಿಲ್ ಶೆಟ್ಟಿ, ಅಣ್ಣಯ್ಯ, ಧನರಾಜ್, ಅಭೀಷೇಕ್ ಮತ್ತು ಸಂಪತ್ ಬಂಗೇರಾ ರವರನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಪ್ರಕರಣದ ಪ್ರಮುಖ ಆರೋಪಿಗಳಾದ ವಿಜಯ @ ಮಂಕಿ ಸ್ಟಾಂಡ್ ವಿಜಯ, ಮೆಲ್ರಿಕ್ ಮತ್ತು ಪ್ರವೀಣ್ @ ಚೋಟು ರವರುಗಳು ಪ್ರಕರಣ ದಾಖಲಾದ ನಂತರದಿಂದ ತಲೆಮರೆಸಿಕೊಂಡಿರುತ್ತಾರೆ. ಇವರುಗಳ ಪತ್ತೆಗೆ ವಿಶೇಷ ತಂಡಗಳನ್ನು ನೇಮಿಸಿ ಮಡಿಕೇರಿ, ಬೆಂಗಳೂರು, ಮುಂಬೈ ಕಡೆಗಳಲ್ಲಿ ಪ್ರಯತ್ನಿಸಲಾಗಿತ್ತು. ಈ ಪ್ರಕರಣದಲ್ಲಿ ತಲೆಮರೆಸಿಕೊಂಡ ಪ್ರಮುಖ ಆರೋಪಿಗಳಾದ ವಿಜಯ, ಮೆಲ್ರಿಕ್, ಪ್ರವೀಣ್ ಎಂಬವರನ್ನು ಮಂಗಳೂರು ದಕ್ಷಿಣ ಠಾಣೆಯ ಪೊಲೀಸರು ಅಗೋಸ್ತ್ 23 ರಂದು ರಾತ್ರಿ ಬೆಳಗಾವಿ ಜಿಲ್ಲೆಯ ರಾಯ್ ಭಾಗ್ ತಾಲೂಕಿನ ಬೆಕ್ಕೇರಿ ಎಂಬಲ್ಲಿಂದ ಬಂಧಿಸಿರುತ್ತಾರೆ.

ಈ ಪ್ರಕರಣದ ಪಿರ್ಯಾದಿ ಸಂದೀಪ್ ಶೆಟ್ಟಿಯೊಂದಿಗೆ ಪ್ರಕರಣದ ಪ್ರಮುಖ ಆರೋಪಿ ವಿಜಯ @ ಮಂಕಿ ಸ್ಟಾಂಡ್ ವಿಜಯ ನಿಗೆ ಹಲವಾರು ವರ್ಷಗಳಿಂದ ವೈಯುಕ್ತಿಕ ದ್ವೇಷವಿದ್ದು, ಈ ಮೊದಲು ಕೂಡಾ ಸಂದೀಪ್ ಶೆಟ್ಟಿ ರವರ ಕೊಲೆಗೆ ಪ್ರಯತ್ನ ನಡೆದಿತ್ತು.

ಆರೋಪಿಗಳು ಸುಮಾರು ಮೂರು ತಿಂಗಳುಗಳಿಂದ ತಲೆಮರಸಿಕೊಂಡಿದ್ದು, ಇವರುಗಳಿಗೆ ಹಣ ಕಾಸು ನೆರವು ಹಾಗೂ ಆಶ್ರಯ ನೀಡಿದದವರ ವಿರುದ್ದವು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಕುಮಾರಿ ಶೃತಿ ಎನ್.ಎಸ್, ಕೆ.ಎಸ್.ಪಿ.ಎಸ್, ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಬೆಳ್ಳಿಯಪ್ಪ ಕೆ. ಯು ಇವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಮಹಮ್ಮದ್ ಶರೀಫ್ ಕೆ, ರವರು ಆರೋಪಿಗಳನ್ನು ಬಂಧಿಸಿರುತ್ತಾರೆ. ಆರೋಪಿಗಳ ಪತ್ತೆಗೆ ಪಿ.ಎಸ್.ಐ. ಅನಂತ ಮುರ್ಡೇಶ್ವರ, ಎ.ಎಸ್.ಐ. ಕೃಷ್ಣ ಸಿಬ್ಬಂಧಿಗಳಾದ ಗಂಗಾಧರ, ಶೇಖರ ಗಟ್ಟಿ, ವಿಶ್ವನಾಥ, ಧನಂಜಯ, ಸತ್ಯನಾರಾಯಣ, ಪ್ರದೀಪ್ ಕುಮಾರ್ ರೈ, ನೂತನ್ ಕುಮಾರ್, ವಿನೋದ್, ಸಿದ್ದಾರ್ಥ, ಪ್ರವೀಣ್ ಶೆಟ್ಟಿ, ಚಂದ್ರ ಶೇಖರ, ಸುನಿಲ್ ಕುಮಾರ್, ಪುರುಶೋತ್ತಮ, ಭೀಮಪ್ಪ ಉಪ್ಪಾರ, ವೀರೇಶ್ ಮತ್ತು ಕಂಪ್ಯೂಟರ್ ವಿಭಾಗದ ಮನೋಜ್ ಕುಮಾರ್ ಹಾಗೂ ಸುನಿಲ್ ಪ್ರವೀಣ್ ಪಿರೇರಾರವರು ರವರು ಸಹಕರಿಸಿರುತ್ತಾರೆ.


Spread the love

Exit mobile version