Home Mangalorean News Kannada News ಮಾವು ಪ್ರದರ್ಶನ-ಮಾರಾಟ ಮೇಳ ಹಾಗೂ ಪಿಲಿಕುಳ ವಸಂತೋತ್ಸವ 2016 ಉದ್ಘಾಟನೆ

ಮಾವು ಪ್ರದರ್ಶನ-ಮಾರಾಟ ಮೇಳ ಹಾಗೂ ಪಿಲಿಕುಳ ವಸಂತೋತ್ಸವ 2016 ಉದ್ಘಾಟನೆ

Spread the love

ಮಂಗಳೂರು : ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ ಬೆಂಗಳೂರು ಮತ್ತು ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ, ಮೂಡುಶೆಡ್ಡೆ ಮಂಗಳೂರು ಇದರ ವತಿಯಿಂದ ಎರಡು ದಿನಗಳ ಆಯೋಜಿಸಿರುವ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ ಹಾಗೂ ಪಿಲಿಕುಳ ವಸಂತೋತ್ಸವ 2016 ಕಾರ್ಯಕ್ರಮವನ್ನು ಶನಿವಾರ ಕೆ. ಅಭಯಚಂದ್ರ, ಯುವಜನ ಸೇವೆ, ಕ್ರೀಡೆ ಮತ್ತು ಮೀನುಗಾರಿಕಾ ರಾಜ್ಯ ಸಚಿವರು ಕರ್ನಾಟಕ ಸರ್ಕಾರ ಇವರಿಂದ ಉದ್ಘಾಟನೆಗೊಂಡಿತು.

image008mango-exhibition-pilikula-20160521-008

ಈ ಸಂದರ್ಭದಲ್ಲಿ ಶ್ರೀಮತಿ ಎಂ ಕಮಲಾಕ್ಷಿ ರಾಜಣ್ಣ, ಅಧ್ಯಕ್ಷರು, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ ಬೆಂಗಳೂರು, ಸನ್ಮಾನ್ಯ ಶ್ರೀ ಜೆ. ಆರ್ ಲೋಬೋ, ಶಾಸಕರು, ಮಂಗಳೂರು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರ, ಸನ್ಮಾನ್ಯ ಶ್ರೀ. ಬಿ. ಎ. ಮೊಹಿಯುದ್ದೀನ್ ಬಾವಾ, ಶಾಸಕರು, ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರ, ಹಾಗೂ ಐ. ಚಂದ್ರಕಾಂತ ರಾವ್, ಮಾಜಿ ಸಿ.ಇ.ಓ ಮತ್ತು ನಿರ್ದೇಶಕರು ಜಿಂದಲ್ ಪೋಲಿ ಫಿಲಿಮ್ಸ್ ಲಿಮಿಟೆಡ್ ಮತ್ತಿತ್ತರ ಗಣ್ಯರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಗಣ್ಯರಿಗೆ ಮತ್ತು ಪತ್ರಕರ್ತರಿಗೆ “ಮಾವಿನ ಹಣ್ಣನ್ನು ತಿಂದು ಗೊರಟನ್ನು ಎಸೆಯುವಂತಹ ಮೋಜಿನ ಸ್ಪರ್ಧೆ”ಯನ್ನು ಏರ್ಪಡಿಸಲಾಯಿತು. ಗೊರಟನ್ನು ಅತ್ಯಂತ ದೂರ ಎಸೆದವರಿಗೆ ಬಹುಮಾನವನ್ನು ವಿತರಿಸಲಾಯಿತು..


Spread the love

Exit mobile version