Home Mangalorean News Kannada News ಮಾಸ್ಕ್ ಧರಿಸಿ ಕೊರೋನಾ ನಿಯಂತ್ರಿಸಲು ಸಾರ್ವಜನಿಕರು ಸಹಕರಿಸಿ – ಕೆ ರಾಜು

ಮಾಸ್ಕ್ ಧರಿಸಿ ಕೊರೋನಾ ನಿಯಂತ್ರಿಸಲು ಸಾರ್ವಜನಿಕರು ಸಹಕರಿಸಿ – ಕೆ ರಾಜು

Spread the love

ಮಾಸ್ಕ್ ಧರಿಸಿ ಕೊರೋನಾ ನಿಯಂತ್ರಿಸಲು ಸಾರ್ವಜನಿಕರು ಸಹಕರಿಸಿ – ಕೆ ರಾಜು

ಕುಂದಾಪುರ: ಉಡುಪಿ ಜಿಲ್ಲೆ ಹಸಿರು ವಲಯದಲ್ಲಿ ಇದ್ದುದು ನಂತರದ ದಿನಗಳಲ್ಲಿ ನಾನಾ ಕಾರಣಗಳಿಂದ, ಪರ ಊರಿನಲ್ಲಿದ್ದ ಈ ಊರಿನ ಬಂಧುಗಳು ಊರಿಗೆ ಬಂದಾಗ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚತೊಡಗಿತು. ಆದರೆ ಗುಣಮುಖರಾಗುವ ಪ್ರಮಾಣ ಕೂಡಾ ಉಡುಪಿ ಜಿಲ್ಲೆಯಲ್ಲಿ ಹೆಚ್ಚೇ ಇದೆ ಎಂದು ಎಸಿ ಕೆ. ರಾಜು ಹೇಳಿದರು.

ಅವರು ಗುರುವಾರ ಪುರಸಭೆ ಎದುರು ಮಾಸ್ಕ್ ಧಾರಣೆ ಜಾಗೃತಿ ದಿನಾಚರಣೆ ಜಾಥಾ ಉದ್ಘಾಟಿಸಿ ಮಾತನಾಡಿದರು.

ಕೋವಿಡ್-19 ನಿಯಂತ್ರಿಸುವಲ್ಲಿ ಸರ್ಕಾರದೊಂದಿಗೆ ಸಾರ್ವಜನಿಕರ ಸಹಕಾರವೂ ಅತ್ಯಗತ್ಯ. ಎಲ್ಲರೂ ಖಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಕೊರೋನಾ ಮಹಾಮಾರಿ ನಿಯಂತ್ರಿಸಲು ನಮ್ಮೊಂದಿಗೆ ಕೈಜೋಡಿಸಬೇಕು ಎಂದರು.

ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಸದಸ್ಯರಾದ ದೇವಕಿ ಸಣ್ಣಯ್ಯ, ಚಂದ್ರಶೇಖರ್ ಖಾರ್ವಿ, ಶ್ರೀಧರ ಶೇರುಗಾರ್, ಪ್ರಭಾಕರ ವಿ, ಸಂತೋಷ್ ಕುಮಾರ್ ಶೆಟ್ಟಿ, ಸಂದೀಪ್ ಖಾರ್ವಿ, ಕಮಲ ಮಂಜುನಾಥ್, ಸ್ಕೌಟ್ ಗೈಡ್ ಸಂಸ್ಥೆಯ ಗುಣರತ್ನಾ, ನಗರ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ವಿಕಾಸ ಹೆಗ್ಡೆ, ಸಮಾಜ ಕಲ್ಯಾಣ ಇಲಾಖಾಧಿಕಾರಿ ರಾಘವೇಂದ್ರ ವರ್ಣೇಕರ್, ತಾಲೂಕು ಆಸ್ಪತ್ರೆ ಫಿಜಿಸಿಯನ್ ಡಾ. ನಾಗೇಶ್, ಸರಕಾರಿ ನೌಕರರ ಸಂಘ ಉಪಾಧ್ಯಕ್ಷ ಪ್ರಕಾಶ್ ಚಂದ್ರ ಶೆಟ್ಟಿ, ಪುರಸಭೆ ಪರಿಸರ ಎಂಜಿನಿಯರ್ ರಾಘವೇಂದ್ರ, ಅಧಿಕಾರಿ ಶರತ್ ಮೊದಲಾದವರು ಉಪಸ್ಥಿತರಿದ್ದರು.


Spread the love

Exit mobile version