ಮಾ. 2 ಕ್ಕೆ ಅಬುಧಾಬಿಯಲ್ಲಿ ಮಂಗಳೂರು ಕಪ್ – 2018
ಅನಿವಾಸಿ ಕನ್ನಡಿಗರ ಮಂಗಳೂರು ಫೆಸ್ಟ್ ಮತ್ತು ಕ್ರಿಕೆಟ್ ಕಾರ್ನಿವಾಲ್
ಅಬುಧಾಬಿ : ವರ್ಷಂಪ್ರತಿ ಅದ್ದೂರಿಯಾಗಿ ನಡೆಸಿಕೊಂಡು ಬರುತ್ತಿರುವ ಮಂಗಳೂರು ಕಪ್ ನ ಆರನೇ ಸೀಸನ್ “ಮಂಗಳೂರು ಕಪ್ 2018” ಮಾರ್ಚ್ 2 ಶುಕ್ರವಾರ ಶೇಖ್ಝಾಯಿದ್ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆಯೆಂದು ಮಂಗಳೂರು ಕ್ರಿಕೆಟ್ ಕ್ಲಬ್ ಅಬುಧಾಬಿ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಬಾರಿ ಕ್ರಿಕೆಟ್ ಪಂದ್ಯಾಟದ ಜೊತೆಗೆ ಮಂಗಳೂರು ಫೆಸ್ಟ್ ಹಮ್ಮಿಕೊಂಡಿದ್ದು ಮಕ್ಕಳಿಗೆ ಪ್ಲೇ ಕಾರ್ನರ್, ಫೇಸ್ ಪೈನಿಟಿಂಗ್ ಮತ್ತು ಮಹಿಳೆಯರಿಗೆ ಮೆಹೆಂದಿ ಇನಿತರ ಕಾರ್ಯಕ್ರಮಗಳನ್ನು ನಡೆಸುವುದರಿಂದ ಯುಎಇ ಯ ಮೂಲೆ ಮೂಲೆಗಳಿಂದ ಕನ್ನಡಿಗರು ಪಾಲ್ಗೊಳ್ಳುವ ನಿರೀಕ್ಷೆ ಸಂಘಟಕರಿಗಿದೆ.
ಕಳೆದ ನಾಲ್ಕು ಸೀಸನ್ ಗಳಲ್ಲಿ ಶೇಖ್ ಝಾಯಿದ್ ಓವೇಲ್ ಕ್ರೀಡಾಂಗಣದಲ್ಲಿ ಪಂದ್ಯಾಟ ಜರುಗಿದ್ದು . ಐದನೇ ಸೀಸನ್ ಶೇಖ್ ಝಾಯಿದ್ ಅಂತಾರಾಷ್ಟ್ರೀಯ ಸರಣಿ ನಡೆಯುವ ಮುಖ್ಯ ಮೈದಾನದಲ್ಲಿ ಅದ್ದೊರಿಯಾಗಿ ನಡೆದಿತ್ತು, ಈ ಬಾರಿಯ ಆರನೇ ಸೀಸನ್ ಕೂಡ ಅದೇ ಮೈದಾನದಲ್ಲಿ ನಡೆಯಲಿದ್ದು ಕ್ರೀಡಾ ಪ್ರೇಮಿಗಳಿವೆ ರಸದೌತಣವನ್ನು ನೀಡಲಿದೆ ಎಂಬುದು ಸಂಘಟಕರ ವಿಶ್ವಾಸ.
ಪಂದ್ಯಾಟದ ನೇರ ಪ್ರಸಾರ, ವೀಕ್ಷಕರಿಗಾಗಿ ಹತ್ತು ಹಲವು ಆಟಗಳು, ಇಲೆಕ್ಟ್ರಾನಿಕ್ ಗ್ಯಾಜೆಟ್ಸ್ ಲಕ್ಕಿಡ್ರಾ, ಜೆಟ್ ಏರ್ ವೇಸ್ ವತಿಯಿಂದ ವೀಕ್ಷಕರಿಗೆ ಉಚಿತ ಟಿಕೆಟ್ ಲಕ್ಕಿ ಡ್ರಾ, ಉಚಿತ ಅರೋಗ್ಯ ತಪಾಸಣೆ, ಹತ್ತು ಹಲವು ಉಚಿತ ಪ್ರಾಡಕ್ಟ್ ಗಳ ವಿತರಣೆ, ಊಟದ ವ್ಯವಸ್ಥೆ ಇರುವುದರಿಂದ ಐದು ಸಾವಿರಕ್ಕೂ ಮಿಕ್ಕ ವೀಕ್ಷಕರನ್ನು ಹೊಂದುವ ನೀರಿಕ್ಷೆಯನ್ನು ಸಂಘಟಕರು ವ್ಯಕ್ತ ಪಡಿಸಿದ್ದಾರೆ.
ಪೈಪೋಟಿಯುತ ಹಣಾಹಣಿ ನಿರೀಕ್ಷಿತ ಪಂದ್ಯಾವಳಿಯಲ್ಲಿ ಹಾರ್ಡ್ ಟೆನಿಸ್ – MRI ಚೆಂಡು ಬಳಕೆಯಾಗಲಿದ್ದು, ಪಂದ್ಯ ವು ನಿರ್ದಿಷ್ಟ ಆರು ಓವರ್ ಗಳಿಗೆಸೀಮಿತವಾಗಿದೆ. ಪ್ರವಾಸಿ ಭಾರತೀಯ ತಂಡಗಳಿಗೆ ಮಾತ್ರ ಸೀಮಿತವಾಗಿರುವ ಈ ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳು ಕೇವಲ ಭಾರತೀಯ ಕ್ರಿಕೆಟಿಗರನ್ನುಮಾತ್ರ ಹೊಂದಿರಬೇಕೆಂಬ ನಿಬಂಧನೆ ಇರುವುದಾಗಿ ಸಂಘಟಕರು ವ್ಯಕ್ತಪಡಿಸಿದ್ದಾರೆ.
ಈ ಸಂಧರ್ಭದಲ್ಲಿ ಮಂಗಳೂರು ಕಪ್ – ಮೈಲಿಗಲ್ಲುಗಳು ಎಂಬ ಕಿರುಹೊತ್ತಿಗೆಯನ್ನೂ ಸಂಘಟಕರು ಪ್ರಕಾಶನ ಮಾಡಲಿದ್ದಾರೆ. ಕಳೆದ ಬಾರಿ 28 ಯುಎಇಸಂಯುಕ್ತ ಅರಬ್ ಸಂಸ್ಥಾನದ ಏಳು ಎಮಿರೇಟ್ ಗಳಿಂದ ಆಗಮಿಸಿದ ತಂಡಗಳು ಕದನ ಕುತೂಹಲ ಕೆರಳಿಸಿತ್ತು. 2013 ರ ಫೈನಲ್ ಹಣಾಹಣಿಯಲ್ಲಿ ಸುರತ್ಕಲ್ ಸ್ಟಾರ್ ಟ್ರೋಫಿಯನ್ನುತನ್ನ ಬಗಲಿಗೆ ಹಾಕಿಕೊಂಡರೆ ನಫೀಸ್ ದುಬೈ ರನ್ನರ್ ಅಪ್ ಆಗಿ ಹೊರಹೊಮ್ಮಿತ್ತು. 2014 ರ ಫೈನಲ್ ನಲ್ಲಿ ಯಂಗ್ ಇಂಡಿಯನ್ಸ್ ಮತ್ತು ಸಿತಾರ ಕ್ರಿಕೆಟರ್ಸ್ ತಂಡಗಳುಕ್ರಮವಾಗಿ ವಿನ್ನರ್ ಮತ್ತು ರನ್ನರ್ ಅಪ್ ಆಗಿತ್ತು. 2015 ರ ಜಿದ್ದಾಜಿದ್ದಿನ ಹೋರಾಟದಲ್ಲಿ ಸುರತ್ಕಲ್ ಸ್ಟಾರ್ಸ್ ವಿಜಯ ದುಂದುಭಿ ಮೊಳಗಿಸಿದರೆ ಆಕ್ಸ್ಫರ್ಡ್ ಮರೀನ್ತಂಡ ರನ್ನರ್ ಅಪ್ ಆಗಿ ಮೂಡಿಬಂದಿತ್ತು. 2016 ರ ರೋಚಕ ಫೈನಲ್ ನಲ್ಲಿ ಫ್ರೈಡೆ ಚಾರ್ಜರ್ಸ್ ತಂಡ ಮತ್ತು ಆಕ್ಸ್ಫರ್ಡ್ ಮರೀನ್ ತಂಡಗಳು ಕ್ರಮವಾಗಿ ವಿನ್ನರ್ ಮತ್ತುರನ್ನರ್ ಅಪ್ ಆಗಿ ಜಯಭೇರಿ ಬಾರಿಸಿತ್ತು.
2017 ರ ಅಂತಿಮ ಹಣಾಹಣಿಯಲ್ಲಿ ಫ್ರೈಡೆ ಚಾರ್ಜರ್ಸ್ ತಂಡ ವನ್ನು ಮಣಿಸಿ ಸಂಟೆಕ್ ತಂಡ ಅಂತಿಮ ಗೆಲುವಿನ ನಗೆ ಬೀರಿತ್ತು.
ಈ ಬಾರಿ ಪಂದ್ಯಾವಳಿಯ ವಿಜಯಿಗಳಿಗೆ ಆಕರ್ಷಕ ಬಹುಮಾನ ಘೋಷಿಸಲಾಗಿದ್ದು ಅವು ಇಂತಿವೆ :
ಪ್ರಥಮ ಸ್ಥಾನ – ಟ್ರೋಫಿ ಮತ್ತು 11000/ – AED ಮೊತ್ತ
ರನ್ನರ್ ಅಪ್ – ಟ್ರೋಫಿ ಮತ್ತು 6000/ – AED ಮೊತ್ತ
ಸರಣಿ ಪುರುಷೋತ್ತಮ, ಉತ್ತಮ ದಾಂಡಿಗ, ಉತ್ತಮ ಎಸೆತಗಾರ, ಉತ್ತಮ ಕೀಪರ್, ಉತ್ತಮ ಕ್ಷೇತ ರಕ್ಷಕ, ಮನಮೋಹಕ ಕ್ಯಾಚ್ ಹಾಗು ಫೈನಲ್ ಪಂದ್ಯ ಪುರುಷೋತ್ತಮಪ್ರಶಸ್ತಿ ಪ್ರದಾನಮಾಡಲಾಗುವುದು. ಲೀಗ್ ಹಂತದ ಪ್ರತೀ ಪಂದ್ಯಗಳಲ್ಲಿ ಕೂಡ ಪಂದ್ಯ ಪುರುಷೋತ್ತಮ ಟ್ರೋಫಿ ಮತ್ತು ನಗದು ಬಹುಮಾನ ನೀಡಲಾಗುವುದು. ವೀಕ್ಷಕರಿಗೆ ಮತ್ತು ಆಟಗಾರರಿಗೆ ಹತ್ತು ಹಲವು ಆಕರ್ಷಕ ಬಹುಮಾನಗಳನ್ನೂ ಪಡೆಯುವ ಸದಾವಕಾಶವಿದೆ. ಈ ಪಂದ್ಯಾವಳಿಯ ಉಧ್ಘಾಟನಾ ಮತ್ತು ಪ್ರಶಸ್ತಿ ಪ್ರದಾನಸಮಾರಂಭದಲ್ಲಿ ಸಾಮಾಜಿಕ ಕ್ಷೇತ್ರದ ಗಣ್ಯರು, ಉದ್ಯಮಿಗಳು ಭಾಗವಹಿಸಲಿದ್ದಾರೆ.
ಅನಿವಾಸಿ ಕನ್ನಡಿಗರಲ್ಲಿ ಕ್ರೀಡಾಪ್ರೇಮವನ್ನು ಹುರಿದುಂಬಿಸುವ ಸಲುವಾಗಿ ಹುಟ್ಟಿಕೊಂಡ ಮಂಗಳೂರು ಕ್ರಿಕೆಟ್ ಕ್ಲಬ್ ವರ್ಷಂಪ್ರತಿ ಈ ಪಂದ್ಯಾವಳಿಯನ್ನುನಡೆಸಿಕೊಂಡು ಹೋಗುವ ಗುರಿ ಹೊಂದಿದೆ. ತಂಡಗಳ ನೋಂದಣಿ ಕಾರ್ಯ ಪ್ರಗತಿಯಲ್ಲಿದ್ದು. ಭಾಗವಹಿಸಲಿಚ್ಚಿಸುವವರು ಅಂತರ್ಜಾಲದ ಮುಖಾಂತರ ಮಂಗಳೂರುಕ್ರಿಕೆಟ್ ಕ್ಲಬ್ ವೆಬ್ಸೈಟ್ http://www.mccabudhabi.com ನಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗಿ ಎಂಸಿಸಿ ಅಧ್ಯಕ್ಷ ಕೆ. ಹೆಚ್ ಲತೀಫ್ ಕಕ್ಕಿಂಜೆ ಪತ್ರಿಕಾ ಪ್ರಕಟಣೆಯಲ್ಲಿತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡವರನ್ನು ದೂರವಾಣಿ ಮೂಲಕ ಸಂಪರ್ಕಿಸಬೇಕಾಗಿ ಕೋರಲಾಗಿದೆ, ಲತೀಫ್ – 0506713247.