ಮಿಥುನ್ ರೈ ಗೆ ಲೋಕಸಭಾ ಟಿಕೇಟ್ ನೀಡುವಂತೆ ಯುವ ಕಾಂಗ್ರೆಸಿಗರ ಒತ್ತಾಯ
ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಕಾರ್ಯಕಾರಿಣಿ ಸಭೆಯು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾದ್ಯಕ್ಷರಾದ ಮಿಥುನ್ ರೈಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಗೆ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದ ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಕರ್ನಾಟಕ ಯುವ ಕಾಂಗ್ರೆಸ್ ಉಸ್ತುವಾರಿಗಳಾದ ಸಂದೀಪ್ ವಾಲ್ಮಿಕಿಯವರು ಯುವ ಕಾಂಗ್ರೆಸ್ಸಿನ ಕಾರ್ಯಕ್ರಮವಾದ “ಮನೆ ಮನೆಗೆ ಯುವ ಕಾಂಗ್ರೆಸ್” ಮತ್ತು ಜನವರಿ 30 ರಂದು ದೆಹಲಿಯಲ್ಲಿ ನಡೆಯುವ ಯುವಕ್ರಾಂತಿ ಯಾತ್ರೆಯನ್ನು ವಿಜಯಗೊಳಿಸಲು ಬೇಕಾದ ಸಿದ್ದತೆ ಹಾಗೂ ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನೊಡಿಯಾಗಿ ಪಕ್ಷ ಸಂಘಟನೆಗೆ ಕೈಕೊಳ್ಳಬೇಕಾದ ಕಾರ್ಯಗಳ ಕುರಿತು ಸಲಹೆ ನೀಡಿದರು ಸಭೆಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಕೆಪರಾಜು, ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂದಕ್ ವಿವಿದ ಸೂಚನೆಗಳನ್ನು ನೀಡಿದರು.
ಚುಣಾವನೆಗಳಲ್ಲಿ ಪಕ್ಷಕ್ಕೊಸ್ಕರ ದುಡಿಯುತ್ತಿರುವ ಯುವಕರಿಗೆ ಸ್ಥಾನಮಾನ ನೀಡುವುದು ಪಕ್ಷದ ಕರ್ತವ್ಯ, ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಯುವ ಕಾಂಗ್ರೆಸ್ಸಿಗೆ ಮುಂದಿನ ದಿನಗಳಲ್ಲಿ ಅವಕಾಶದ ಭರವಸೆ ನೀಡಲಾಗಿತ್ತು ಈ ಸಲವೂ ಅವಕಾಶ ವಂಚಿತರಾದರೆ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ದುಡಿಯುವ ಯುವಕರ ಕೊರತೆಯಾಗಬಹುದು ಈ ನಿಟ್ಟಿನಲ್ಲಿ ಮುಂಬರುವ ಲೋಕಸಭೆ ಚುನಾವಾಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಮಿಥುನ್ ರೈಯವರಿಗೆ ಟಿಕೆಟ್ ನೀಡಬೇಕೆಂದು ವಿಧಾನಸಭಾ ಅಧ್ಯಕ್ಷರುಗಳು ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಒಕ್ಕೊರಲಿನಿಂದ ಒತ್ತಾಯ ಮಾಡಿದರು.
ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಲುಕ್ಮಾನ್ ಬಂಟ್ವಾಳ, ಸುನಿತ್ ಡೇಸಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕಿರಣ್ ಬುಡ್ಲೆಗುತ್ತು, ಪ್ರಸಾದ್ ಮಲ್ಲಿ, ಶುಹೈಬ್, ವರುಣ್ ಅಂಬಾಟ್, ಶಿಪಲ್ ರಾಜ್, ನವೀದ್ ಅಕ್ತರ್, ಕಾರ್ಯದರ್ಶಿಗಳಾದ ನಾಸಿರ್ ಸಾಮನಿಗೆ, ಲೊರೆನ್ಸ್ ಡಿಸೋಜ, ಶಬೀರ್ ಕೆಂಪಿ, ಸವನ್, ವಿಧಾನಸಭಾ ಸಮಿತಿಯ ಅಧ್ಯಕ್ಷರುಗಳಾದ ಮೆರಿಲ್ ರೆಗೊ, ಗಿರೀಶ್ ಆಳ್ವ, ಚಂದ್ರಹಾಸ್ ಸನಿಲ್, ತೌಸೀಫ್ ಯುಟಿ, ಅಬಿನಂಧನ್ ಹರೀಶ್, ಸಿದ್ದೀಕ್ ಕೊಕ್ಕೊ, ಸಿಎಂ ರವೂಫ್, ಕಚೇರಿ ಕಾರ್ಯದರ್ಶಿ ಅನ್ಸಾರುದ್ದೀನ್ ಸಾಲ್ಮರ ಮುಂತಾದವರು ಉಪಸ್ಥಿತರಿದ್ದರು.