Home Mangalorean News Kannada News ಮಿಲಾಗ್ರಿಸ್ ಪದವಿ ಕಾಲೇಜಿನಲ್ಲಿ ಹಾಲ್ ಟಿಕೇಟ್ ನಿರಾಕರಣೆ, ವಿದ್ಯಾರ್ಥಿ ಪೋಷಕರ ಪ್ರತಿಭಟನೆ

ಮಿಲಾಗ್ರಿಸ್ ಪದವಿ ಕಾಲೇಜಿನಲ್ಲಿ ಹಾಲ್ ಟಿಕೇಟ್ ನಿರಾಕರಣೆ, ವಿದ್ಯಾರ್ಥಿ ಪೋಷಕರ ಪ್ರತಿಭಟನೆ

Spread the love

ಮಿಲಾಗ್ರಿಸ್ ಪದವಿ ಕಾಲೇಜಿನಲ್ಲಿ ಹಾಲ್ ಟಿಕೇಟ್ ನಿರಾಕರಣೆ, ವಿದ್ಯಾರ್ಥಿ ಪೋಷಕರ ಪ್ರತಿಭಟನೆ

ಮಂಗಳೂರು: ನಗರದ ಮಿಲಾಗ್ರಿಸ್ ಪದವಿ ಕಾಲೇಜಿನ ಪರೀಕ್ಷೇಯ ಹಾಲ್ ಟಿಕೆಟ್ ನಿರಾಕರಿಸಿದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಕಾಲೇಜಿನ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಮ್ಯಾಂಗಲೋರಿಯನ್ ಪ್ರತಿಯೊಂದಿಗೆ ಮಾತನಾಡಿದ ವಿದ್ಯಾರ್ಥಿಗಳ ಪೋಷಕರು 15 ದಿನಗಳ ಹಿಂದೆ ಕಾಲೇಜಿನಲ್ಲಿ ನಡೆದ ಶಿಕ್ಷಕ ರಕ್ಷಕ ಸಂಘದ ಸಭೆಯಲ್ಲಿ ನಾವು ಭಾಗವಹಿಸಿದ್ದು, ಪ್ರಾಂಶುಪಾಲರು ಹಾಜರಾತಿ ಕಡಿಮೆ ಇದ್ದ ವಿದ್ಯಾರ್ಥಿಗಳಿಗೆ ದಂಡ ವಿಧಿಸಿ ಹಾಲ್ ಟಿಕೇಟ್ ನೀಡುವುದಾಗಿ ಭರವಸೆ ನೀಡಿದ್ದರು. ಬಳಿಕ ನಾವೆಲ್ಲರೂ ಆಡಳಿತ ಮಂಡಳಿಯ ಸಭೆಯಲ್ಲಿ ಕೂಡ ಭಾಗವಹಿಸಿದ್ದು ನಮ್ಮನ್ನು ಅವರು ಸರಿಯಾಗಿ ಪ್ರತಿಕ್ರಿಯಿಸಿಲ್ಲ. ಬಳಿಕ ಪ್ರಾಂಶುಪಾಲರ ಬಳಿ ಕೇಳಿದರೆ ಇದೆಲ್ಲಾ ನನ್ನ ಕೈಲಿಲ್ಲ ಬದಲಾಗಿ ಮಂಗಳೂರು ವಿಶ್ವವಿದ್ಯಾನಿಲಯದ ನಿರ್ಧಾರ ಎಂದಿದ್ದರು. ಬೆಳಿಗ್ಗಿನಿಂದ ಸಂಜೆಯ ತನಕ ಹಾಲ್ ಟಿಕೇಟಿಗಾಗಿ ಕಾದು ಕುಳಿತರೂ ಏನೂ ಪ್ರಯೋಜನವಾಗರಿಲಿಲ್ಲ. ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಅವರು ಹಾಲ್ ಟಿಕೇಟ್ ನೀಡುವಂತೆ ಕಾಲೇಜಿನ ಪ್ರಾಂಶುಪಾಲರಿಗೆ ಸೂಚನೆ ನೀಡಿದ್ದು ಅದರಂತೆ ಮಾರನೇ ದಿನ ಕಾಲೇಜಿಗೆ ಬಂದರೆ ಪ್ರಾಂಶುಪಾಲರು ಹಾಲ್ ಟಿಕೇಟ್ ನೀಡಲು ನಿರಾಕರಿಸಿದರು.

image001milagres-college-hall-ticket-mangalorean-com-20161027-001

ನಮ್ಮ ಮಕ್ಕಳ ತರಗತಿ ಹಾಜರಾತಿ ಕಡಿಮೆ ಇದ್ದು ಇದರಿಂದ ಹಾಲ್ ಟಿಕೇಟ್ ತಡೆಹಿಡಿಯಲಾಗಿದೆ. ಇತ್ತೀಚೆಗೆ ಒರ್ವ ವಿದ್ಯಾರ್ಥಿ ಕಾಲೇಜಿನ ಪ್ರಾಂಶುಪಾಲರ ಮೇಲೆ ಹಲ್ಲೆ ನಡೆಸಿದ ವೇಳೆ ಆತ ನಮ್ಮ ಸಮುದಾಯವನಾದರೂ ಕೂಡ ನಾವು ಪ್ರಾಂಶುಪಾಲರ ಬೆಂಬಲಕ್ಕೆ ನಿಂತಿದ್ದೇವೆ. ಮಿಲಾಗ್ರಿಸ್ ಕಾಲೇಜಿನ ಹಾಜರಾತಿ ಕೊರತೆ ಹಿನ್ನಲೆಯಲ್ಲಿ 90 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಹಾಲ್ ಟಿಕೆಟ್ ನಿರಾಕರಿಸಲಾಗಿತ್ತು.  ಬಳಿಕ ಈ ಪೈಕಿ 22 ವಿದ್ಯಾರ್ಥಿಗಳನ್ನು ಹೊರತು ಪಡಿಸಿ ಉಳಿದವರಿಗೆ ಹಾಲ್ ಟಿಕೆಟ್ ನಿಡಲಾಗಿದೆ. ಹಾಲ್ ಟಿಕೇಟ್ ನಿರಾಕರಿಸಲ್ಪಟ್ಟ 22 ಮಂದೀ ವಿದ್ಯಾರ್ಥಿಗಳು ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಲಿದೆ ಎಂದರು.

ವಿದ್ಯಾರ್ಥಿಗಳು ಹೇಳುವ ಪ್ರಕಾರ ನಮ್ಮ ತರಗತಿ ಹಾಜರಾತಿ ಕಡಿಮೆ ಇದ್ದಿರುವುದು ನಿಜ ಆದರೆ ಪ್ರಾಂಶುಪಲಾರು ಮೊದಲು ಹಾಲ್ ಟಿಕೇಟ್ ನೀಡುವುದಾಗಿ ಹೇಳಿ ಈಗ ನಿರಾಕರಿಸಿದ್ದಾರೆ ಅಲ್ಲದೆ ನಮ್ಮ ಪೋಷಕರ ಜೊತೆ ಮಾತನಾಡಲು ಕೂಡ ತಯಾರಿಲ್ಲ. ಇತ್ತೀಚೆಗೆ ವಿದ್ಯಾರ್ಥಿಯೋರ್ವ ಪ್ರಾಂಶುಪಾಲರ ಮೇಲೆ ಹಲ್ಲೆ ನಡೆಸಿದ್ದು ಅದರ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಬಳಿಕ ಸ್ಥಳೀಯ ಠಾಣಾ ಪೋಲಿಸ್ ಇನ್ಸ್ ಪೆಕ್ಟರ್ ಶಾಂತಾರಾಮ್ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಂಘಟನೆಯ ಸದಸ್ಯರನ್ನು ಸಮಾಧಾನಪಡಿಸಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.


Spread the love
3 Comments
Inline Feedbacks
View all comments
8 years ago

ಹಾಲ್ ಟಿಕೆಟ್ ಕೊರ್ಪುನ ಅವ್ ಕಾಲಜುಗ್ ಸಂಬಂಧಪಟ್ಟಿನ ವಿಷಯ ಆಂಡ ಮಾತೆರ್ಲ ಕಾಲೇಜ್ ಗು ಸರಿಯಾದ್ ಪೊಂಡ ಫುಡ್ ಕೋರ್ಟ್, ಪಾರ್ಕ್ , ಮುಲ್ಟಿಫ್ಲೆಕ್ಸ್ , ಹೋಟೆಲ್ ಪೂರಾ ಕಾಲಿ ಕಾಲಿ ಇಪ್ಪುಜ ಅಂಚ ಸಾಮಾಜಿಕ ಕಳಕಲಿಟ್ ಮುಕುಲು ಒಂತೆ ರಜೆ ಮಂತ್ ಇಪ್ಪೊಡು

Truth Seeker
8 years ago

So…all of those 22 students protesting were from one particular community??? Well, no special prizes for guessing the name of the community. smiles…On the other hand, I could only imagine the fake outrage from beef club, had this been from Puttooru Vivekanaanda College or Bantwaala Venkataramana College!!! The entire incident would have turned into another case of sanaathana-bashing!!! Yea – Mera Bhaaratha Mahaaan!!! smiles…

Truth Seeker
8 years ago

If I am right, this group held a protest a few months ago demanding more time for Friday prayers!!! Last week, one of them assaulted College Principal. Now they are holding a protest demanding College management to ignore their low attendance and break their own rules!! why do they have such a low level of respect for rules and always demand special treatment? Amazing how even parents are supporting this bad behavior. From MIA to Milagres college, there is a common theme here. This is the cultural problem that no stenographer is willing to touch or address. As to the… Read more »

wpDiscuz
Exit mobile version