Home Mangalorean News Kannada News ಮೀನಿನ ವ್ಯಾಪಾರಿಯ ಬ್ಯಾಗ್ ದರೋಡೆ ; 7 ಆರೋಪಿಗಳ ಬಂಧನ

ಮೀನಿನ ವ್ಯಾಪಾರಿಯ ಬ್ಯಾಗ್ ದರೋಡೆ ; 7 ಆರೋಪಿಗಳ ಬಂಧನ

Spread the love

ಮೀನಿನ ವ್ಯಾಪಾರಿಯ ಬ್ಯಾಗ್ ದರೋಡೆ ; 7 ಆರೋಪಿಗಳ ಬಂಧನ

ಮಂಗಳೂರು: ಕಂಕನಾಡಿ ಜಂಕ್ಷನ್ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ದಿನಾಂಕ 05/02/2019 ರಂದು ಸುಮಾರು 09.30 ಗಂಟೆಗೆ ಮಂಗಳೂರಿಗೆ ಮೀನಿನ ವ್ಯಾಪಾರಕ್ಕಾಗಿ ಬಂದಿದ್ದ ಅಸೀಫ್ ಮಹಮ್ಮದ್ ನಕ್ವಾ, ರತ್ನಾಗಿರಿ ಮಹಾರಾಷ್ಟ್ರ ರವರ 5 ಲಕ್ಷ ರೂಪಾಯಿ ಹಣವಿರುವ ಬ್ಯಾಗನ್ನು ಅಪರಿಚಿತ ಬಿಳಿ ಬಣ್ಣದ ಟವೇರಾ ಕಾರಿನಲ್ಲಿ ಬಂದಿದ್ದ 6-7 ಜನರ ತಂಡ ದರೋಡೆ ಮಾಡಿಕೊಂಡು ಹೋಗಿದ್ದು, ಇದರ ಆರೋಪಿಗಳನ್ನು ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಭಟ್ಕಳ ಅಬಜರ್ ಕಾಲೋನಿ ನಿವಾಸಿ ಮಹಮ್ಮದ್ ಸಬೀರ್ (31), ಗುಲ್ಮಿ ನಿವಾಸಿ ಮಹಮ್ಮದ್ ನವೀದ್ ಯಾನೆ ನವೀದ್ ಹುಸೇನ್ ಪೀರಾ, [29], ಖ್ವಾಜಾ ಸಾಬ್ [28], ಮಹಮ್ಮದ್ ನಬೀಲ್ ಸಾಬ್ [31], ಸಯ್ಯದ್ ಹುಸೇನ್ [32], ಸಯ್ಯದ್ ಫಯಾಜ್ [31], ನಾಸೀರ್ ಶೇಕ್ [21) ಎಂದು ಗುರುತಿಸಲಾಗಿದೆ.
ಬಂಧಿತರಿಂದ ಕೃತ್ಯಕ್ಕೆ ಉಪಯೋಗಿಸಿದ KA-53-B- 4418 ಟವೇರಾ ಕಾರು, 5 ಲಕ್ಷ ನಗದು, ಹಾಗೂ ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಪತ್ತೆ ಕಾರ್ಯಾಚರಣೆಯನ್ನು ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಟಿ. ಆರ್. ಸುರೇಶ್ ಐ.ಪಿ.ಎಸ್, ಹನುಮಂತರಾಯ ಐ.ಪಿ.ಎಸ್. ಉಪ ಪೊಲೀಸ್ ಆಯುಕ್ತರು (ಕಾನೂನು ಸುವ್ಯವಸ್ಥೆ) & ಉಮಾ ಪ್ರಶಾಂತ್ ಉಪ-ಪೊಲೀಸ್ ಆಯುಕ್ತರು (ಅಪರಾಧ ಮತ್ತು ಸಂಚಾರ ) ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ರಾಮರಾವ್ ರವರ ಮಾರ್ಗದರ್ಶನದಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಅಶೋಕ ಪಿ, ಕಾನೂನು ಸುವ್ಯವಸ್ಥೆಯ ಪೊಲೀಸ್ ಉಪ ನಿರೀಕ್ಷಕರಾದ ಪ್ರದೀಪ್ ಟಿ. ಆರ್., ಅಪರಾಧ ಪತ್ತೆ ವಿಭಾಗದ ಪೊಲೀಸ್ ಉಪ ನಿರೀಕ್ಷಕರಾದ ಜಾನಕಿ ಹಾಗೂ, ಎಎಸ್ಐ ಗಿಲ್ಬರ್ಟ್, ಸಿಬ್ಬಂದಿಗಳಾದ ಮದನ್, ಸಂತೋಷ್ ವಿನೋದ್, ರಾಜೇಶ್, ರಘುವೀರ್ ನೂತನ್, ಸಂದೀಪ್ ಮಾಲತೇಶ್, ಕಾರ್ತಿಕ್ ರವರು ಪಾಲ್ಗೊಂಡಿರುತ್ತಾರೆ.


Spread the love

Exit mobile version