Home Mangalorean News Kannada News ಮೀನುಗಾರಿಕಾ ಕಾಲೇಜಿನಲ್ಲಿ ‘ಕೃಷಿ ಶಿಕ್ಷಣ ದಿನಾಚರಣೆ’

ಮೀನುಗಾರಿಕಾ ಕಾಲೇಜಿನಲ್ಲಿ ‘ಕೃಷಿ ಶಿಕ್ಷಣ ದಿನಾಚರಣೆ’

Spread the love

ಮೀನುಗಾರಿಕಾ ಕಾಲೇಜಿನಲ್ಲಿ ‘ಕೃಷಿ ಶಿಕ್ಷಣ ದಿನಾಚರಣೆ’

ಮಂಗಳೂರು : ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ಭಾರತೀಯ ಕೃಷಿ ಅನುಸಂದಾನ ಪರಿಷತ್, ನವದೆಹಲಿಯ ನಿರ್ದೇಶನಗಳ ಪ್ರಕಾರ, ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲದಲ್ಲಿ 3ನೇ, ಡಿಸೆಂಬರ್ 2017 “ಕೃಷಿ ಶಿಕ್ಷಣ ದಿನಾಚರಣೆ” ಯನ್ನು ಆಚರಿಸಲಾಯಿತು. ಭಾರತದ ಮೊದಲ ಕೃಷಿ ಸಚಿವ ಮತ್ತು ಸ್ವತಂತ್ರ ಭಾರತದ ಮೊದಲ ರಾಷ್ಟ್ರಪತಿಯಾದ, ಭಾರತ ರತ್ನ ಡಾ. ರಾಜೇಂದ್ರ ಪ್ರಸಾದ್ ರವರ ಜನ್ಮ ದಿನದ ಅಂಗವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ‘ಕೃಷಿ ಶಿಕ್ಷಣ ದಿನಾಚರಣೆಯ ಮುಖ್ಯ ಉದ್ದೇಶವೇನೆಂದರೆ, ಕೃಷಿ ಹಾಗೂ ಕೃಷಿಯೇತರದ ವಿವಿಧ ವಿಷಯಗಳಾದ ಕೃಷಿವಿಜ್ಞಾನ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಪಶು ವೈದ್ಯಕೀಯ, ಹೈನುಗಾರಿಕೆ, ಅರಣ್ಯ ವಿಜ್ಞಾನ ಮತ್ತು ಗೃಹವಿಜ್ಞಾನ ಗಳಲ್ಲಿ ಸ್ನಾತಕ ಪದವಿ ವಿದ್ಯಾಬ್ಯಾಸದ ಜೊತೆಗೆ ದೇಶದ ಅಭಿವೃದ್ಧಿಯಲ್ಲಿ ಕೃಷಿಯನ್ನು ಗಮನದಲ್ಲಿಟ್ಟು ಶಾಲೆಗಳನ್ನು ಒಳಗೊಂಡಂತೆ ವಿದ್ಯಾರ್ಥಿಗಳಿಗೆ ಬಹಿರಂಗಪಡಿಸುವುದು. ವಿದ್ಯಾರ್ಥಿಗಳನ್ನು ಕೃಷಿಯ ಕಡೆಗೆ ಪ್ರೇರೇಪಿಸಿ, ಅವರನ್ನು ಆಕರ್ಷಿಸಿ ಕೃಷಿ ಮತ್ತು ಸಂಬಂಧಿತ ವಿಷಯಗಳಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳುವುದು. ಮುಂದುವರೆದು, ವಿದ್ಯಾರ್ಥಿಗಳು, ತಮ್ಮ ಶಿಕ್ಷಣದಲ್ಲಿ ವೃತ್ತಿಪರ ಜೀವನವನ್ನು ಅಳವಡಿಸಿಕೊಂಡು ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಅಥವಾ ಭವಿಷ್ಯದಲ್ಲಿ ಕೃಷಿ ಉದ್ಯಮಿ ಹಾಗೂ ಉದ್ಯಮಶೀಲರಾಗಿಸುವುದು.

ಉದ್ಘಾಟಕರರಾಗಿ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರಾದ ಡಾ| ಎಸ್.ಎಂ. ಶಿವಪ್ರಕಾಶ್ ಮಾತನಾಡಿ ರೈತನೊಬ್ಬನೇ ಕೃಷಿಯ ಜವಾಬ್ದಾರಿ ವಹಿಸುವುದಲ್ಲದೇ ಇಂದಿನ ಯುವಪೀಳಿಗೆಗಳು ದೇಶದ ಜನಸಂಖ್ಯೆ ದ್ವಿಗುಣವಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಕೃಷಿಯೇತರ ವಿಷಯಗಳಲ್ಲಿ ಪದವಿಯನ್ನು ಗಳಿಸಿ ವೈಜ್ಞಾನಿಕ ತಂತ್ರಜ್ಞಾನಗಳನ್ನು ಬಳಕೆ ಮಾಡಿ ಆದಾಯವನ್ನು ದ್ವಿಗುಣಗೊಳಿಸುವಲ್ಲಿ ಪಾತ್ರವಹಿಸಬೇಕೆಂದು ನುಡಿದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇ ಗೌಡ ಮತ್ತು ಮಂಗಳೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಷಾ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಇಂತಹ ಕಾರ್ಯಕ್ರಮಗಳು ಯುವಕರಲ್ಲಿ ಪ್ರಭಾವ ಬೀರುವುದರಲ್ಲಿ ಯಾವುದೇ ಸಂಶಯವಿಲ್ಲವೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮೀನುಗಾರಿಕಾ ಮಹಾವಿದ್ಯಾಲಯದ ಡೀನ್‍ರಾದ ಡಾ| ಎಂ.ಎನ್. ವೇಣುಗೋಪಾಲ್ ರವರು ಅಧ್ಯಕ್ಷತೆ ವಹಿಸಿದ್ದರು.

ಅಸೋಸಿಯೇಟ್ ಪ್ರೊಫೆಸರ್ ಮತ್ತು ಎನ್.ಎಸ್.ಎಸ್. ಅಧಿಕಾರಿ ಡಾ| ಎ.ಟಿ. ರಾಮಚಂದ್ರ ನಾಯ್ಕರವರು ಈ ಕಾರ್ಯಕ್ರಮದ ಸಂಯೋಜಕರು. ಇವರು ಕಾರ್ಯಕ್ರಮದ ಉದ್ದೇಶ ಹಾಗೂ ಪ್ರಾಸ್ಥಾವಿಕ ನುಡಿದು ಅತಿಥಿಗಳನ್ನು ಸ್ವಾಗತಿಸಿದರು. ಸ್ನಾತಕೋತ್ತರ ವಿದ್ಯಾರ್ಥಿ  ಚನ್ನೇಶ್ ಜಿ.ವಿ. ವಂದಿಸಿದರು. ಕು| ಶೀತಲ್ ಕೆ.ಯು.  ನಿರೂಪಿಸಿದರು. ಕು| ಸಪ್ತಮಿ ಆರ್. ಜೊಗ್ಲೆಕರ್ ಪ್ರಾರ್ಥನೆ ಮಾಡಿದರು.

ಈ ದಿನಾಚಾರಣೆಯ ಅಂಗವಾಗಿ, ವಿದ್ಯಾರ್ಥಿಗಳಿಗೆ ಲಿಖಿತ ರಸಪ್ರಶ್ನೆ ಸ್ಪರ್ಧೆಯನ್ನು ಸಹಾ ಏರ್ಪಡಿಸಿಲಾಗಿತ್ತು. ವಿಜೇರಾದ ಕು| ಶ್ರಿಜನ್ ಎಸ್. ಭಟ್, ಕು| ಕಾರಣ್ಯ ಕೆ.ಪಿ., ಕು| ಅಂಕಿತ ಪಿ. ಅಮೀನ್, ಮಹೇಶ್ ಪಿ.ಕೆ., ಕು| ದಿಯಾ ಡಿ. ಸಾನಿಲ್ ಮತ್ತು ಹನುಮಂತ ಇವರಿಗೆ ಪ್ರಸಸ್ತಿ ಪತ್ರದ ಜೊತೆಗೆ ನೆನಪಿನ ಕಾಣಿಕೆ ಮತ್ತು ಪರಿಸರಕ್ಕೆ ಸಂಭದ ಪಟ್ಟ ಪಟ್ಯಪುಸ್ತಕವನ್ನು ಕೊಟ್ಟು ಗೌರವಿಸಲಾಯಿತು.


Spread the love

Exit mobile version