ಮೀನುಗಾರಿಕಾ ಯಾಂತ್ರೀಕೃತ ದೋಣಿಗಳಿಗಾಗಿ ಡೀಸೆಲ್ ಸಬ್ಸಿಡಿ 33 ಕೋಟಿ ರೂಪಾಯಿ ಬಿಡುಗಡೆ
ಮಂಗಳೂರು: ರಾಜ್ಯದಲ್ಲಿರುವ ಕರಾವಳಿ ಜಿಲ್ಲೆಯ 2700 ಮೀನುಗಾರಿಕಾ ಯಾಂತ್ರೀಕೃತ ದೋಣಿಗಳಿಗೆ ನವೆಂಬರ್ ಮತ್ತು ಡಿಸೆಂಬರ್ ತಿಂಗಳ ಬಾಬ್ತು 33 ಕೋಟಿ ರೂಪಾಯಿ ಡೀಸೆಲ್ ಸಬ್ಸಿಡಿ ಬಿಡುಗಡೆಗೊಳಿಸಲಾಗಿದೆ ಎಂದು ರಾಜ್ಯ ಮೀನುಗಾರಿಕಾ, ಬಂದರು, ಒಳನಾಡು ಜಲಸಾರಿಗೆ ಸಚಿವರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
ಕಳೆದ ವರ್ಷದ ಬಜೆಟ್ನಲ್ಲಿ ಡೀಸೆಲ್ ಸಬ್ಸಿಡಿಗೆ ಒಟ್ಟು 135 ಕೋಟಿ ರೂಪಾಯಿ ಮಂಜೂರಾಗಿದ್ದು, ಡೀಸೆಲ್ ದರ ಹಾಲಿ ವರ್ಷದಲ್ಲಿ ಪ್ರತಿ ಲೀಟರಿಗೆ 2 ರೂಪಾಯಿ ಹೆಚ್ಚಾದ ಹಿನ್ನೆಲೆಯಲ್ಲಿ 31.54 ಕೋಟಿ ರೂಪಾಯಿ ಹೆಚ್ಚುವರಿ ಹಣದ ಅಗತ್ಯವಿದ್ದು, ಈ ಕುರಿತು ಆರ್ಥಿಕ ಇಲಾಖೆ ಜೊತೆಗೆ ಚರ್ಚೆ ಮಾಡಿ ಜನವರಿ ಮತ್ತು ಫೆಬ್ರವರಿ ತಿಂಗಳ ಡೀಸೆಲ್ ಸಬ್ಸಿಡಿ ಮುಂದೆ ಬಿಡುಗಡೆ ಮಾಡಲಾಗುವುದು ಎಂದು ಸಚಿವರ ಕಛೇರಿ ಪ್ರಕಟಣೆ ತಿಳಿಸಿದೆ.