Home Mangalorean News Kannada News ಮೀನು ಸಾಕಣೆ ಮೂಲಕ ಉದ್ಯೋಗ ಸೃಷ್ಟಿಗೆ ಫೆಡರೇಶನ್ ವತಿಯಿಂದ ಯೋಜನೆ : ಯಶ್ಪಾಲ್ ಸುವರ್ಣ

ಮೀನು ಸಾಕಣೆ ಮೂಲಕ ಉದ್ಯೋಗ ಸೃಷ್ಟಿಗೆ ಫೆಡರೇಶನ್ ವತಿಯಿಂದ ಯೋಜನೆ : ಯಶ್ಪಾಲ್ ಸುವರ್ಣ

Spread the love

ಮೀನು ಸಾಕಣೆ ಮೂಲಕ ಉದ್ಯೋಗ ಸೃಷ್ಟಿಗೆ ಫೆಡರೇಶನ್ ವತಿಯಿಂದ ಯೋಜನೆ : ಯಶ್ಪಾಲ್ ಸುವರ್ಣ

ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ವತಿಯಿಂದ ಮಣಿಪಾಲ ಮಣ್ಣಪಳ್ಳ ಕೆರೆಯಲ್ಲಿ ಮೀನು ಮರಿ ಬಿತ್ತನೆಗೆ ಫೆಡರೇಷನ್ ಅಧ್ಯಕ್ಷರಾದ, ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೇಂದ್ರ ಸರಕಾರದ ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕೆರೆಗಳಲ್ಲಿ ಮೀನು ಸಾಕಣೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ವತಿಯಿಂದ ಯೋಜನೆ ರೂಪಿಸಿದ್ದು, ಈ ಮೂಲಕ ಜಿಲ್ಲೆಯ ಯುವ ಜನತೆಗೆ ಉದ್ಯೋಗಾವಕಾಶ ಸೃಷ್ಠಿಗೆ ಫೆಡರೇಶನ್ ಮುಂದಾಗಲಿದೆ ಎಂದರು.

ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಮಾತನಾಡಿ ಜಿಲ್ಲೆಯ ಕೆರೆಗಳಲ್ಲಿ ಮೀನು ಸಾಕಾಣಿಕೆಗೆ ಜಿಲ್ಲಾಡಳಿತದ ವತಿಯಿಂದ ಸಂಪೂರ್ಣ ಸಹಕಾರದ ಆಶಯ ವ್ಯಕ್ತಪಡಿಸಿದರು.

ಫೆಡರೇಶನ್ ವತಿಯಿಂದ ಮಣ್ಣಪಳ್ಳ ಕೆರೆಗೆ ಸುಮಾರು 40 ಸಾವಿರ ಕಾಟ್ಲಾ, ರೋಹು ಸಹಿತ ವಿವಿಧ ಪ್ರಭೇದದ ಮೀನು ಮರಿಗಳನ್ನು ಬಿತ್ತನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮೀನು ಮಾರಾಟ ಫೆಡರೇಶನ್ ನಿರ್ದೇಶಕರಾದ ರಾಮಚಂದ್ರ ಕುಂದರ್, ಸುರೇಶ್ ಸಾಲ್ಯಾನ್, ನಗರ ಸಭಾ ಸದಸ್ಯರಾದ ಶ್ರೀಮತಿ ಕಲ್ಪನಾ ಸುಧಾಮ, ಫೆಡರೇಶನ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ದರ್ಶನ್, ಕಾರ್ಯದರ್ಶಿ ಶ್ರೀಮತಿ ದೇವಯಾನಿ, ಫೆಡರೇಶನ್ ಸಿಬ್ಬಂದಿಗಳು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.


Spread the love

Exit mobile version