ಮುಂದುವರಿದ ಕಾರ್ಯಾಚರಣೆ; ಬಸ್ಸುಗಳ ಕರ್ಕಶ ಹಾರ್ನ್ ತೆರವು, ದಂಡ ವಿಧಿಸಿದ ಪೊಲೀಸರು
ಉಡುಪಿ: ನಗರ ವ್ಯಾಪ್ತಿಯಲ್ಲಿ ಸೋಮವಾರ ಟ್ರಾಫಿಕ್ ಪೊಲೀಸ್, ಆರ್ ಟಿ ಒ ಜಂಟಿಯಾಗಿ ಮತ್ತೆ ಖಾಸಗಿ ಬಸ್ಗಳ ಕರ್ಕಶ ಹಾರ್ನ್ ತೆರವುಗೊಳಿಸುವ ಕಾರ್ಯಾಚರಣೆ ಕೈಗೊಂಡರು.
ಕಿನ್ನಿಮೂಲ್ಕಿ ಸ್ವಾಗತ ಗೋಪುರ, ರಾಷ್ಟ್ರೀಯ ಹೆದ್ದಾರಿ ಬಲಾಯಿಪಾದೆ ಬಳಿ ಕಾರ್ಯಾಚರಣೆ ನಡೆಸಿದ ಇಲಾಖೆ ಒಟ್ಟು 20 ಪ್ರಕರಣಗಳನ್ನು ದಾಖಲಿಸಿ ದಂಡ ವಿಧಿಸಿದರು. ಅದರಂತೆ ಆರ್ ಟಿ ಒ 14 ಪ್ರಕರಣಗಳನ್ನು ದಾಖಲಿಸಿ ತಲಾ ರೂ 3000 ದಂತೆ ಹಾಗೂ ಪೊಲೀಸ್ ಇಲಾಖೆ 6 ಪ್ರಕರಣಗಳನ್ನು ದಾಖಲಿಸಿ ತಲಾ ರೂ 500 ರಂತೆ ದಂಡ ವಿಧಿಸಿದರು.
ಜೂ.3ರಂದು ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಉಡುಪಿ ಸಿಟಿ ಬಸ್ ಮಾಲಕರು ಮತ್ತು ಸರ್ವಿಸ್ ಬಸ್ ಮಾಲಕರು ಉಡುಪಿಯ ಸಿಟಿ ಹಾಗೂ ಸರ್ವೀಸ್ ಬಸ್ ಗಳಲ್ಲಿ ಅಳವಡಿಸಲಾದ ಕರ್ಕಶ ಹಾರ್ನ್ ಗಳನ್ನು ಜೂ.15ರೊಳಗೆ ಕಡ್ಡಾಯವಾಗಿ ಸೂಚಿಸುವಂತೆ ಸೂಚನೆ ನೀಡಲಾಗಿತ್ತು. ಅದರ ಬಳಿಕ ನಗರದ ಸಿಟಿ ಹಾಗೂ ಸರ್ವಿಸ್ ಬಸ್ ನಿಲ್ದಾಣಗಳಲ್ಲಿ ಕಾರ್ಯಾಚರಣೆ ಮಾಡಿ ದಂಡ ವಿಧಿಸಿಲಾಗಿತ್ತು. ಅಲ್ಲದೆ ಒಂದು ಬಸ್ಸಿನ ಚಾಲಕ ವಿರುದ್ದ ಕರ್ಕಶ ಹಾರ್ನ್ ಬಳಕೆ ಸಂಬಂಧ ಪ್ರಕರಣ ದಾಖಲಿಸಲಾಗಿತ್ತು.
ಕರ್ಕಶ ಹಾರ್ನ್ ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ಆರ್ ಟಿ ಒ ಅಧಿಕಾರಿಗಳಾದ ಸಂತೋಷ್ ಶೆಟ್ಟಿ, ಮಾರುತಿ ನಾಯಕ್, ಟ್ರಾಫಿಕ್ ಪಿಎಸ್ ಐ ಗಳಾದ ಸುದರ್ಶನ್ ದೊಡ್ಡಮನಿ, ಪ್ರಕಾಶ್ ಸಾಲಿಯಾನ್, ಶೇಖರ್ ಭಾಗವಹಿಸಿದ್ದರು.