ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ವ್ಯಾಟಿಕನ್ ರಾಯಭಾರಿ

Spread the love

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ವ್ಯಾಟಿಕನ್ ರಾಯಭಾರಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭಾರತಕ್ಕೆ ವ್ಯಾಟಿಕನ್ ರಾಯಭಾರಿಗಳಾದ ಜಿಯಾಮ್ ಬಾಟ್ಟಿಸ್ಟ ಅವರು ಭೇಟಿಯಾದರು.

ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿ ಗಳನ್ನು ಭೇಟಿ ಮಾಡಿ ಜಿಯಾಮ್ ಬಾಟ್ಟಿಸ್ಟ ಅವರು ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಆರ್ಚ್ ಬಿಷಪ್ ಬರ್ನಾಡ್ ಮೊರಾಸ್ ಅವರು ಉಪಸ್ಥಿತರಿದ್ದರು. ಮುಖ್ಯಮಂತ್ರಿಗಳ ಜೊತೆ ಸಚಿವ ಕೆ.ಜೆ. ಜಾರ್ಜ್‌ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.

ಮಾತುಕತೆಗೂ ಮುನ್ನ ಮುಖ್ಯಮಂತ್ರಿ ಗಳು‌ ವ್ಯಾಟಿಕನ್ ರಾಯಭಾರಿಯವರನ್ನು ಶಾಲು ಹೊದಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಧರ್ಮಗುರುಗಳು ಮುಖ್ಯಮಂತ್ರಿಗಳಿಗೆ ಬೈಬಲ್ ನ್ನು ಕಾಣಿಕೆಯಾಗಿ ನೀಡಿದರು.

ಇದೊಂದು ಸೌಜನ್ಯದ ಭೇಟಿಯಾಗಿದೆ ಎಂದು ಆರ್ಚ್ ಬಿಷಪ್ ಬರ್ನಾಡ್ ಮೊರಾಸ್ ಅವರು ತಿಳಿಸಿದರು.


Spread the love