ಮುರುಡೇಶ್ವರದಲ್ಲಿ ಸಮುದ್ರದಲ್ಲಿ ಬೆಂಗಳೂರು ಪ್ರವಾಸಿ ನೀರು ಪಾಲು
ಭಟ್ಕಳ : ಬೆಂಗಳೂರಿನಿಂದ ಮುರ್ಡೇಶ್ವರಕ್ಕೆ ಪ್ರವಾಸಕ್ಕೆಂದು ಬಂದ ತಂಡದ ಒರ್ವ ಸಮುದ್ರಪಾಲಾದ ಘಟನೆ ಶುಕ್ರವಾರ ನಡೆದಿದೆ.
ಮೃತರನ್ನು ಬೆಂಗಳೂರು ಮೂಲದ ಕಿರಣ್ ಕುಮಾರ್ (18) ಎಂದು ಗುರುತಿಸಲಾಗಿದೆ
ಬೆಂಗಳೂರಿನಿಂದ ಶುಕ್ರವಾರ 9 ಮಂದಿಯ ತಂಡ ಪ್ರವಾಸಕ್ಕೆ ಬಂದಿದ್ದು ಮುರ್ಡೇಶ್ವರದಲ್ಲಿ ಅವರಲ್ಲಿ 4 ಮಂದಿ ಸಮುದ್ರದಲ್ಲಿ ಆಟವಾಡುತ್ತಿದ್ದ ವೇಳೆ ಅಲೆಗೆ ಕಿರಣ್ ಕುಮಾರ್ ಸಹಿತ ನಾಲ್ಕು ಮಂದಿ ಕೂಡ ಕೊಚ್ಚಿಕೊಂಡು ಹೋಗಿದ್ದು ಮೂವರನ್ನು ಸ್ಥಳೀಯರು ರಕ್ಷಿಸಿದ್ದು ಕಿರಣ್ ಕುಮಾರ್ ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗಿದೆ.
ಮುರುಡೇಶ್ವರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ