ಮುಲ್ಕಿ ಅಕ್ರಮ ಕಸಾಯಿಖಾನೆ ಪರವಾನಿಗೆ ರದ್ದು: ವಿಶ್ವಹಿಂದೂ ಪರಿಷದ್ ಸ್ವಾಗತ
ಮಂಗಳೂರು: ಕಿನ್ನಿಗೋಳಿ ಗ್ರಾಮಪಂಚಾಯತ್ ವ್ಯಾಪ್ತಿಯ ತಾಲಿಪ್ಯಾಡಿ ಗ್ರಾಮದಲ್ಲಿ ಕಾನೂನು ಬಾಹಿರವಾಗಿ ಬೀಫ್ ಮಾಂಸಕ್ಕಾಗಿ ನೀಡಿದ ಪರವಾನಿಗೆಯನ್ನು ರದ್ದು ಪಡಿಸಿರುವುದಕ್ಕೆ ವಿಶ್ವಹಿಂದೂ ಪರಿಷದ್ ಸಂತಸ ವ್ಯಕ್ತಪಡಿಸಿದೆ.
ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ವಿಶ್ವಹಿಂದೂ ಪರಿಷತ್ತಿನ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಕಿನ್ನಿಗೋಳಿ ಗ್ರಾಮಪಂಚಾಯತ್ ವ್ಯಾಪ್ತಿಯ ತಾಲಿಪ್ಯಾಡಿ ಗ್ರಾಮದಲ್ಲಿ ಕಾನೂನು ಬಾಹಿರವಾಗಿ ಬೀಫ್ ಮಾಂಸಕ್ಕಾಗಿ ವಧಾಗೃಹಕ್ಕಾಗಿ ಲೈಸೆನ್ಸ್ ಕೊಟ್ಟದ್ದನ್ನು ರದ್ದುಪಡಿಸುವಂತೆ ಆದೇಶಿಸಲು ಕೋರಿ ಹಾಗೂ ಅಕ್ರಮ ಪರವಾನಿಗೆ ಕೊಟ್ಟ ಅಧಿಕಾರಿ ಹಾಗೂ ಸಹಕರಿಸದ ಅಧಿಕಾರಿಗಳನ್ನು ವಜಾ ಮಾಡಲು ಕೋರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಮನವಿ ಮಾಡಲಾಗಿತ್ತು,
ಮುಲ್ಕಿ ವ್ಯಾಪ್ತಿಯ ಪುನರೂರು ಬಳಿ ಅಕ್ರಮವಾಗಿ ಗೋ ವುಗಳನ್ನು ವಧೆ ಮಾಡುತಿದ್ದ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ 10 ಮೇ 2020 ರಂದು ಕೇಸು ದಾಖಲಾಗಿದ್ದು, ಇದೀಗ ಈ ಅಕ್ರಮ ಕಸಾಯಿಖಾನೆ ನಡೆಸುತ್ತಿದ್ದ ಪರವಾನಿಗೆಯನ್ನು ರದ್ದುಮಾಡಲು ಜಿಲ್ಲಾಡಳಿತ ಆದೇಶ ನೀಡಿದ್ದು ಈ ಕ್ರಮವನ್ನು ವಿಶ್ವಹಿಂದೂ ಪರಿಷದ್ – ಬಜರಂಗದಳ ಸ್ವಾಗತಿಸಿದ್ದು, ಪೊಲೀಸ್ ಇಲಾಖೆಯ ಈ ಕಾರ್ಯವನ್ನು ವಿಶ್ವಹಿಂದೂ ಪರಿಷದ್ ಶ್ಲ್ಯಾಘಿಸುತ್ತದೆ ಎಂದು ತಿಳಿಸಿರುತ್ತಾರೆ