ಮುಲ್ಕಿ : ರಾಜ್ಯ, ಅಂತರಾಜ್ಯ ವಾಹನ, ಮನೆ ಮತ್ತು ದೈವಸ್ಥಾನ ಕಳ್ಳರ ಬಂಧನ
ಮಂಗಳೂರು: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಕಳವು ಪ್ರಕರಣಗಳಿಗೆ ಸಂಬಂದಿಸಿದಂತೆ ಮುಲ್ಕಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧೀತರಿಂದ ಗೋವಾ ರಾಜ್ಯದಲ್ಲಿ ಕಳವು ಮಾಡಿದ ನೊಂದಣಿ ಸಂಖ್ಯೆ ಅಳವಡಿಸದ ಪಾರ್ಚುನರ್ ಕಾರು ಹಾಗೂ ನೊಂದಣಿ ಸಂಖ್ಯೆ ಅಳವಡಿಸದ ರಾಯಲ್ ಎನ್ ಪೀಲ್ಡ್ ಬುಲೆಟ್ ಬೈಕ್ -2 ನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಹಾಗೂ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಕದಿಕೆ, ಸಂತೆಕಟ್ಟೆ ಕಡೆಗಳಲ್ಲಿ ಮನೆ ಹಾಗೂ ದೈವಸ್ಥಾನ ಕಳ್ಳತನ ಮಾಡಿದ ಚಿಲ್ಲರೆ ಹಣವನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಅಪರಾಧ ಕೃತ್ಯಕ್ಕೆ ಬಳಸಿದ ಟಾಟಾ ಪಿಕ್ ಅಪ್ ನ ನೊಂದಣಿ ಸಂಖ್ಯೆ ಕೆಎ 19 ಎಎ 8637 , ಡಿಸ್ಕವರ್ ಬೈಕ್ ನಂಬ್ರ ಕೆ ಎ 19 ಇಮ್ 795 ಮತ್ತು ಪಲ್ಸರ್ ಬೈಕ್ ನಂಬ್ರ ಕೆ ಎ 19 ಇಕೆ 7981 ನೇದನ್ನು ಹಾಗೂ ಆರೋಪಿಗಳಿಂದ 3 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಮೇಲ್ಕಂಡ ಕೃತ್ಯಗಳಲ್ಲಿ ಬಾಗಿಯಾಗಿರುವ ಕಾರ್ನಾಡು ವಾಸಿ ಹಿಯಾಜ್ ತಂದೆ: ಮುನೀರ್ ಹಾಗೂ ಇನ್ನಿತರ ಆರೋಪಿಗಳ ಪತ್ತೆಕಾರ್ಯ ನಡೆದಿರುತ್ತದೆ. ಸ್ವಾಧೀನ ಪಡಿಸಿದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 40 ಲಕ್ಷ ಆಗಿರುತ್ತದೆ.
ಪ್ರಕರಣದ ಪತ್ತೆಗೆ ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್ ಐಪಿಎಸ್ ರವರ ಮಾರ್ಗದರ್ಶನದಂತೆ ಹನುಮಂತರಾಯ ಉಪ ಪೊಲೀಸ್ ಆಯುಕ್ತರು ಕಾ&ಸು ಮತ್ತು ಲಕ್ಷ್ಮಿಗಣೇಶ್ ಉಪ ಪೊಲೀಸ್ ಆಯುಕ್ತರು ಅಪರಾಧ ಮತ್ತು ಸಂಚಾರ ರವರ ನಿರ್ದೇಶನದಂತೆ ಶ್ರೀನಿವಾಸ ಗೌಡ ಐಪಿಎಸ್ ಸಹಾಯಕ ಪೊಲೀಸ್ ಆಯುಕ್ತರು ಮಂಗಳೂರು ಉತ್ತರ ಉಪ ವಿಭಾಗ ರವರ ನೇತೃತ್ವದಲ್ಲಿ ಮುಲ್ಕಿ ಪೊಲೀಸ್ ಠಾಣಾ ನಿರೀಕ್ಷಕರಾದ ಸತೀಶ್, ಸಿದ್ದರಾಜು, ಪೊಲೀಸ್ ಉಪ ನಿರೀಕ್ಷಕರಾದ ಶೀತಲ್ ಆಲಗೂರ, ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ಚಂದ್ರಶೇಖರ್, ಹೆಡ್ ಕಾನ್ಸ್ ಟೇಬಲ್ ಗಳಾದ ತಾರನಾಥ, ಧರ್ಮೇಂದ್ರ, ಚಂದ್ರಶೇಖರ್, ಪ್ರಮೋದ್, ಮಹೇಶ್, ಸೌಮ್ಯ ಸಿಬ್ಬಂದಿಗಳಾದ ಸುರೇಶ್, ರಾಜೇಶ್, ಮೊಹಮ್ಮದ್ ಹುಸೇನ್, ಅಣ್ಣಪ್ಪ, ಸಂದೀಪ್, ದರ್ಮರಾಯ, ಹನುಮಂತ, ಬಸವರಾಜ, ಸತೀಶ್, ರೋಹಿತ್, ಧನರಾಜ್, ರಂಗನಗೌಡ, ರಮೇಶ್, ಶರೀಪ್, ನದಾಪ್, ಮೇಘ, ವಿದೀಪ್ ರವರು ಭಾಗವಹಿಸಿರುತ್ತಾರೆ.