Home Mangalorean News Kannada News ಮುಳ್ಳಿಕಟ್ಟೆ: ರಾ. ಹೆದ್ದಾರಿ ಸಮೀಪದ ಸರ್ಕಾರಿ ಭೂಮಿಯಲ್ಲಿ ಧಗಧಗ ಹೊತ್ತಿ ಉರಿದ ಬೆಂಕಿ

ಮುಳ್ಳಿಕಟ್ಟೆ: ರಾ. ಹೆದ್ದಾರಿ ಸಮೀಪದ ಸರ್ಕಾರಿ ಭೂಮಿಯಲ್ಲಿ ಧಗಧಗ ಹೊತ್ತಿ ಉರಿದ ಬೆಂಕಿ

Spread the love

ಮುಳ್ಳಿಕಟ್ಟೆ: ರಾ. ಹೆದ್ದಾರಿ ಸಮೀಪದ ಸರ್ಕಾರಿ ಭೂಮಿಯಲ್ಲಿ ಧಗಧಗ ಹೊತ್ತಿ ಉರಿದ ಬೆಂಕಿ

ಕುಂದಾಪುರ: ಇಲ್ಲಿನ ಮುಳ್ಳಿಕಟ್ಟೆ ರಾಷ್ಟ್ರೀಯ ಹೆದ್ದಾರಿಯ ಸಮೀಪವಿರುವ ಸರ್ಕಾರಿ ಭೂಮಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹತ್ತಕ್ಕೂ ಅಧಿಕ ಎಕರೆ ಪ್ರದೇಶ ಬೆಂಕಿಗಾಹುತಿಯಾಗಿದೆ. ಬೆಂಕಿಗೆ ಕಾರಣ ಏನೆಂಬುವುದು ತಿಳಿದುಬಂದಿಲ್ಲ.

ಮುಳ್ಳಿಕಟ್ಟೆಯ ಕೊಪ್ಪರಿಗೆಯಲ್ಲಿರುವ ಸುಮಾರು 20 ಎಕರೆ ಸರ್ಕಾರಿ ಭೂಮಿಯಲ್ಲಿ 10 ಎಕರೆಯಷ್ಟು ಜಾಗ ಬೆಂಕಿಗಾಹುತಿಯಾಗಿದೆ. ಈ ಪ್ರದೇಶದಲ್ಲಿ ಗಾಳಿ ಮರಗಳು ಬೆಳೆದಿದ್ದು ಅದರ ಎಲೆಗಳು ಒಣಗಿ ಬಿದ್ದಿದ್ದವು. ಇದೇ ಎಲೆಗೆ ಬೆಂಕಿ ತಗುಲಿದ್ದು, ಬೆಂಕಿಯ ತೀವ್ರತೆ ವ್ಯಾಪಿಸಿದೆ ಎಂದು ಶಂಕಿಸಲಾಗಿದೆ. ಸಂಜೆ ಆರು ಗಂಟೆಯ ಸುಮಾರಿಗೆ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ ಬೆಂಕಿಯ ಕೆನ್ನಾಲಗೆ ವಿಸ್ತಾರವಾಗು ಉರಿಯುತ್ತಿರುವುದನ್ನು ನೋಡಿ ಎಚ್ಚೆತ್ತುಕೊಂಡ ಸ್ಥಳೀಯ ನಿವಾಸಿಗಳು ಹಾಗೂ ಯುವಕರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿ ಬೆಂಕಿ ನಂದಿಸಲು ಮುಂದಾದರು.

 ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳೀಯ ಯುವಕರು ಗಿಡಗಳನ್ನು ಬೆಂಕಿ ನಂದಿಸಲು ಪ್ರಯತ್ನಿಸಿದರು. ಸುಮಾರು 9.30ರ ತನಕವೂ ಕಾರ್ಯಾಚರಣೆ ನಡೆದಿದ್ದು, ಬಳಿಕ ಬಂಕಿಯನ್ನು ಹತೋಟಿಗೆ ತರಲಾಯಿತು.


Spread the love

Exit mobile version