Home Mangalorean News Kannada News ಮುಸ್ಲಿಂ ತ್ರಿವಳಿ ತಲಾಖ್ ವಿಷಯದಲ್ಲಿ ಹಸ್ತಕ್ಷೇಪ ಮಾಡಬೇಡಿ: ಕೇಂದ್ರಕ್ಕೆ ಖಾಝಿ ಉಸ್ತಾದ್ ಎಚ್ಚರಿಕೆ

ಮುಸ್ಲಿಂ ತ್ರಿವಳಿ ತಲಾಖ್ ವಿಷಯದಲ್ಲಿ ಹಸ್ತಕ್ಷೇಪ ಮಾಡಬೇಡಿ: ಕೇಂದ್ರಕ್ಕೆ ಖಾಝಿ ಉಸ್ತಾದ್ ಎಚ್ಚರಿಕೆ

Spread the love

ಮುಸ್ಲಿಂ ತ್ರಿವಳಿ ತಲಾಖ್ ವಿಷಯದಲ್ಲಿ ಹಸ್ತಕ್ಷೇಪ ಮಾಡಬೇಡಿ: ಕೇಂದ್ರಕ್ಕೆ ಖಾಝಿ ಉಸ್ತಾದ್ ಎಚ್ಚರಿಕೆ
ಮಂಗಳೂರು: ಮುಸ್ಲಿಂ ಸಮುದಾಯದ ಶರಿಅತ್ ಅಥವಾ ತಲಾಖ್ ವಿಷಯದಲ್ಲಿ ಯಾರೂ ಕೂಡ ಹಸ್ತಕ್ಷೇಪ ಮಾಡುವುದು ಸಲ್ಲ ಎಂದು ಖಾಝೀ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ಕೇಂದ್ರ ಸರಕಾರಕ್ಕೆ ಎಚ್ಚರಿಗೆ ನೀಡಿದ್ದಾರೆ.

ಅವರು ನಗರದ ಜಿಲ್ಲಾಧಿಕಾರಿಗ ಕಚೇರಿ ಆವರಣದ ಎದುರು ವಿವಿಧ ಮಸ್ಲಿಂ ಸಂಘಟನೆಗಳು ಆಯೋಜಿಸಿದ ತಲಾಖ್ ಹಾಗೂ ಶರೀಅತ್ ನಿಯಮಗಳಲ್ಲಿ ಕೇಂದ್ರ ಸರಕಾರದ ಹಸ್ತಕ್ಷೇಪ ಖಂಡಿಸಿ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

image001triple-talaq-sharia-uniform-civilcode-mangalorean-com-20161028-001

ಇಸ್ಲಾಂ ಧರ್ಮ ಪರಿಪೂರ್ಣ ಧರ್ಮವಾಗಿದ್ದು ಕೇಂದ್ರ ಸರಕಾರದ ತ್ರಿವಳಿ ತಲಾಖ್ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಇಂತಹ ದುಷ್ಕ್ರತ್ಯ ನಡೆದರೆ ದೇಶದಲ್ಲಿ ಮುಸ್ಲಿಂರಿಂದ ಭಾರೀ ವಿರೋಧವನ್ನು ಎದುರಿಸಬೇಕಾದಿತು ಎಂದು ಎಚ್ಚರಿಗೆ ನೀಡಿದರು.

ತಲಾಖ್ ಎಂಬುದು ದೇವನಿಗೂ ಅನಿಷ್ಟವಾದ ಕ್ರಿಯೆ ತನಗೆ ಮನ ಬಂದಂತೆ ತಲಾಖ್ ನೀಡಲು ಇಸ್ಲಾಂ ಧರ್ಮದಲ್ಲಿ ಅವಕಾಶಗಳಿಲ್ಲ. ಪತಿ ಪತ್ನಿ ಜೀವನ ಮುಂದೆ ಸರಿ ಹೊಂದುವುದಿಲ್ಲ ಎಂದು ಖಾತರಿ ಪಡಿಸಿದಾಗ ತಲಾಖ್ ಅನಿವಾರ್ಯತೆ ಎದರಾಗುತ್ತದೆ. ಇದಕ್ಕೂ ಇಸ್ಲಾಮ್ ಧರ್ಮದಲ್ಲಿ ಹೆಣ್ಣಿಗೆ ಪರವಾಗಿ ಹಲವಾರು ನೀತಿನಿಯಮಗಳಿವೆ. ಒಂದೇ ಬಾರಿ ಮೂರು ತಲಾಖ್ ಹೇಳುವಂತಿಲ್ಲ. ಪ್ರಥಮ ತಲಾಖ್ ನೀಡುವಾಗ ಹೆಣ್ಣಿಗೆ ಸರಿ ಹೊಂದಲು ಕಾಲಾವಾಕಾಶ ನೀಡಬೇಕು. ಎರಡನೇ ಬಾರಿ ತಲಾಖ್ ಹೇಳುವಾಗಲೂ ಸಮಾವಕಾಶ ನೀಡಬೇಕು ಮೂರನೇ ಬಾರಿ ಹೇಳುವ ಮೊದಲು ಪತಿ ಮತ್ತು ಪತ್ನಿಯ ಕಡೆಯಿಂದ ಒಬ್ಬಬ್ಬರನ್ನು ಮಧ್ಯಸ್ತರಾಗಿ ಮಾತುಕತೆ ನಡೆಸಬೇಕು/ ಮಾತುಕತೆಯಲ್ಲೂ ಪತಿ ಪತ್ನಿಗೆ ಒಟ್ಟಿಗೆ ಬಾಳಲು ಸಹಮತ ವ್ಯಕ್ತವಾಗದೆ ಇದ್ದಾರ ಮೂರನೇ ತಲಾಖ್ ಅನಿವಾರ್ಯವಾಗುತ್ತದೆ. ಆದರೆ ಇಸ್ಲಾಂನ ನೀತಿ ನಿಯಮಗಳಿಗೆ ವಿರುದ್ದವಾಗಿ ಮತ್ತು ದೇಶದ ಕೋಟ್ಯಂತರ ಮುಸ್ಲಿಂರ ಭಾವನೆಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ಕೇಂದ್ರ ಸರಕಾರ ವರ್ತಿಸಿದರೆ ಇಡೀ ಮುಸ್ಲಿಂ ಸಮುದಾಯ ಒಂದಾಗಿ ಪ್ರತಿಭಟಿಸಲಿದೆ ಎಂದರು.


Spread the love
1 Comment
Inline Feedbacks
View all comments
swamy
8 years ago

let us see what this khazi can do to the central govt, at most he can give a call to not to vote to BJP, it is forgone conclusion that these people will not vote to BJP. If he abide by the constitution let him stay in india othewise let him go to a place where he can live happily.

wpDiscuz
Exit mobile version