ಮೂಡಬಿದಿರೆ: ‘ವಿದ್ಯಾಗಮ’ ಯೋಜನೆಯಡಿ ಕರ್ತವ್ಯ ನಿರ್ವಹಿಸಿದ್ದ ಶಿಕ್ಷಕಿ ಕೊರೋನಾಗೆ ಬಲಿ

Spread the love

ಮೂಡಬಿದಿರೆ: ‘ವಿದ್ಯಾಗಮ’ ಯೋಜನೆಯಡಿ ಕರ್ತವ್ಯ ನಿರ್ವಹಿಸಿದ್ದ ಶಿಕ್ಷಕಿ ಕೊರೋನಾಗೆ ಬಲಿ

ಮೂಡಬಿದಿರೆ: ರಾಜ್ಯ ಸರ್ಕಾರದ ‘ವಿದ್ಯಾಗಮ’ ಯೋಜನೆಯಡಿ ಕರ್ತವ್ಯ ನಿರ್ವಹಿಸುವಾಗ ಕೊರೋನಾವೈರಸ್ ಸೋಂಕಿಗೆ ತುತ್ತಾದ ಶಿಕ್ಷಕಿ ಪದ್ಮಾಕ್ಷಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಮೂಡಬಿದಿರೆಯ ಜವಾಹರಲಾಲ್ ನೆಹರೂ ಅನುದಾನಿತ ಪ್ರೌಢಶಾಲೆಯ ಶಿಕ್ಷಕುಯಾಗಿದ್ದ ಪದ್ಮಾಕ್ಷಿ ಎನ್ ಅವರು ವಿವಿಧ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ‘ವಿದ್ಯಾಗಮ’ ಯೋಜನೆಯಡಿ ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದರು. ಅಂತಹ ಭೇಟಿಗಳ ಸಮಯದಲ್ಲಿ ಶಿಕ್ಷಕಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಸೆಪ್ಟೆಂಬರ್ 29 ರಂದು ಅವರು ಕೋವಿಡ್ ಪಾಸಿಟಿವ್ ವರದಿ ಪಡೆದಿದ್ದರು. ಆಕೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಿಸದೆ ಇಂದು ನಿಧನರಾಗಿದ್ದಾರೆ.

ಪದ್ಮಾಕ್ಷಿಯವರ ಪತಿಗೆ ಸಹ ಕೊರೋನಾ ಸೋಂಕು ತಗುಲಿದೆ. ಅವರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಚಿಕಿತ್ಸೆಯಿಂದ ಅವರೀಗ ಚೇತರಿಸಿಕೊಂಡಿದ್ದಾರೆ.

ಇದೇ ವೇಳೆ ಪದ್ಮಾಕ್ಷಿ ಅವರ ಪುತ್ರಿ ಐಶ್ವರ್ಯಾ ತಮ್ಮ ಕುಟುಂಬಕ್ಕೆ ನೆರವಾಗುವಂತೆ ಮುಖ್ಯಮಂತ್ರಿ, ಮಂತ್ರಿಗಳು, ಶಾಸಕರು, ಸಂಸದರು ಮುಂತಾದವರಲ್ಲಿ ನೆರವನ್ನು ಯಾಚಿಸಿದ್ದರು. ಆ ಮನವಿಗೆ ಸ್ಪಂದಿಸಿದ್ದ ಸರ್ಕಾರ ಶಿಕ್ಷಕಿಯ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿತ್ತು. ಆದರೂ ಜೀವ ಉಳಿಸಲಾಗಲಿಲ್ಲ.

ಈ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದು “ಮೂಡಬಿದರೆಯ ಶಿಕ್ಷಕಿ ಶ್ರೀಮತಿ‌ ಪದ್ಮಾಕ್ಷಿ ಅವರು ಮೃತ ಪಟ್ಟರೆಂದು ತಿಳಿದು ತುಂಬಾ ವೇದನೆಯೆನಿಸಿದೆ. ಅವರ ಕುಟುಂಬಕ್ಕೆ ಈ ದುಃಖ ಭರಿಸಲು‌ ಶಕ್ತಿ‌ ಸಿಗಲಿ. ಐಶ್ವರ್ಯ ಜೈನ್ ತನ್ನ ತಾಯಿ ಮನೆಗೆ ಹಿಂತಿರುಗಿ‌‌ ಎಲ್ಲರಂತಾಗುತ್ತಾರೆಂಬ ಕನಸನ್ನು ಹೊತ್ತಿದ್ದಳು. ಈ ಆಘಾತದಿಂದ‌ ಆಕೆ‌ ಚೇತರಿಸಿಕೊಳ್ಳುವಂತಾಗಲಿ.” ಎಂದಿದ್ದಾರೆ.


Spread the love