Home Mangalorean News Kannada News ಮೂಡಬಿದ್ರೆ ತಾಲೂಕು ಜನಸೇವೆಗೆ ಮಾನ್ಯತೆವಿಲ್ಲ: ಸುಶೀಲ್ ನೊರೊನ್ಹ

ಮೂಡಬಿದ್ರೆ ತಾಲೂಕು ಜನಸೇವೆಗೆ ಮಾನ್ಯತೆವಿಲ್ಲ: ಸುಶೀಲ್ ನೊರೊನ್ಹ

Spread the love

ಮೂಡಬಿದ್ರೆ ತಾಲೂಕು ಜನಸೇವೆಗೆ ಮಾನ್ಯತೆವಿಲ್ಲ: ಸುಶೀಲ್ ನೊರೊನ್ಹ

ಮೂಡಬಿದ್ರೆ: ಮೂಡಬಿದ್ರೆ ತಾಲೂಕು ಉದ್ಘಾಟನೆಗೆ ಮಾಜಿ ಸಚಿವ ಅಮರನಾಥ ಶೆಟ್ಟಿ ಹಾಗೂ ಕೆ. ಆಭಯಚಂದ್ರರವರನ್ನು ಆಮಂತ್ರಣ ಪತ್ರಿಕೆಯಲ್ಲಿ ಅತಿಥಿಗಳಾಗಿ ಸೇರಿಸದಿರುವುದು ಬಹಳ ಅಚ್ಚರಿಯ ವಿಷಯ. ಹಗಲಿರುಳು ತಾಲೂಕು ರಚನೆಗೆ ದುಡಿದ ವ್ಯಕ್ತಿಗಳನ್ನು ನಿರ್ಲಕ್ಷಿಸುವುದು ಬಹಳ ಬೇಸರದ ವಿಷಯ. ಅಮರನಾಥ ಶೆಟ್ಟಿ ಶಾಸಕರಾಗಿ, ಮಂತ್ರಿಗಳಾಗಿ ರಾಮಕೃಷ್ಣ ಹೆಗ್ಡೆ, ಜೆ.ಎಚ್. ಪಟೇಲ್ ಕಾಲದಿಂದಲೂ ನಿರಂತರ ಹೋರಾಟ ಮಾಡಿ ಬಂದಿದ್ದು ಆನಂತರ ಅಭಯಚಂದ್ರರವರು ಅದನ್ನು ಮುಂದುವರಿಸಿಕೊಂಡು ಹೋಗಿದ್ದರು. ಆದರೆ ಇದೀಗ ತಾಲೂಕು ರಚನೆಗೆ ಮೂಲ ಕಾರಣರಾದ ನಾಯಕರನ್ನು ಕಡೆಗಣಿಸುವುದು ಜನ ಸೇವೆಗೆ ಮಾನ್ಯತೆವಿಲ್ಲ ಎಂಬುದು ಎತ್ತಿ ತೋರಿಸುತ್ತದೆ. ಇದು ¨ಹಳ ನೋವಿನ ಹಾಗೂ ಖಂಡನೀಯ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಮಹಮ್ಮದ್ ಕುಂಞ, ರಾಜ್ಯ ಉಪಾಧ್ಯಕ್ಷರಾದ ಎಂ. ಬಿ. ಸದಾಶಿವ, ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹ, ದಕ್ಷಿಣ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ವಸಂತ ಪೂಜಾರಿಯವರು ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version