Home Mangalorean News Kannada News ಮೂಡಿಗೆರೆ : ದೆವ್ವದ ವೇಶ ಧರಿಸಿ ಶ್ರೀಗಂಧ ಕಳ್ಳತನ ಮಾಡುತ್ತಿದ್ದವರ ಬಂಧನ 

ಮೂಡಿಗೆರೆ : ದೆವ್ವದ ವೇಶ ಧರಿಸಿ ಶ್ರೀಗಂಧ ಕಳ್ಳತನ ಮಾಡುತ್ತಿದ್ದವರ ಬಂಧನ 

Spread the love

ಮೂಡಿಗೆರೆ : ದೆವ್ವದ ವೇಶ ಧರಿಸಿ ಶ್ರೀಗಂಧ ಕಳ್ಳತನ ಮಾಡುತ್ತಿದ್ದವರ ಬಂಧನ 

ಮೂಡಿಗೆರೆ : ವಿಚಿತ್ರ ಮುಖವಾಡ ಮತ್ತು ದೆವ್ವದ ವೇಷ ಧರಿಸಿ ಕಳ್ಳತನ ಮಾಡುತ್ತಿದ್ದ ಕಳ್ಳರನ್ನು ಗ್ರಾಮಸ್ಥರೇ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ ಘಟನೆ ತಾಲ್ಲೂಕಿನ ಜಿ ಹೊಸಳ್ಳಿ ಗ್ರಾಮದ ತಮಟೆಬೈಲಿನಲ್ಲ್ಲಿ ನಡೆದಿದೆ.

ಹಲವು ದಿನಗಳಿಂದ ಶ್ರೀಗಂಧ ಕಳ್ಳತನವನ್ನೇ ಪ್ರಮುಖ ಕೆಲಸವನ್ನಾಗಿಸಿಕೊಂಡಿದ್ದ ಕಳ್ಳರು ವಿಚಿತ್ರಮುಖವಾಡವನ್ನು ಹಾಗೂ ದೆವ್ವದ ವೇಷ ಧರಿಸಿ ಗ್ರಾಮದ ಜನರಲ್ಲಿ ಭೀತಿ ಹುಟ್ಟಿಸಿದ್ದರು ಎನ್ನಲಾಗಿದೆ. ಇದನ್ನೇ ಬಂಡವಾಳವನ್ನಾಗಿರಿಸಿಕೊಂಡ ಕಳ್ಳರು ಹಲವಾರು ದಿನಗಳಿಂದ ಶ್ರೀಗಂಧವನ್ನು ಕಳ್ಳತನ ಮಾಡುತ್ತಿದ್ದರು ಎನ್ನಲಾಗಿದೆ. ದೆವ್ವದ ವೇಷ ಧರಿಸಿ ಗ್ರಾಮಸ್ಥರನ್ನು ಭಯಭೀತಗೊಳಿಸುತ್ತಿದ್ದರಿಂದ ರಾತ್ರಿ ವೇಳೆಯಲ್ಲಿ ಗ್ರಾಮಸ್ಥರು ಹೊರ ಬರಲು ಭಯ ಬೀಳುತ್ತಿದ್ದರು.

ಗುರುವಾರ ಮಧ್ಯರಾತ್ರಿ ಇದೇ ರೀತಿಯಲ್ಲಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ವೇಳೆಗೆ ತಮಟೆ ಬೈಲಿನ ಗ್ರಾಮಸ್ಥರ ಕೈಗೆ ಕಳ್ಳರು ಸಿಕ್ಕಿಬಿದ್ದಿದ್ದು, ಗ್ರಾಮಸ್ಥರಿಂದ ಚೆನ್ನಾಗಿಯೇ ಧರ್ಮದೇಟು ಬಿದ್ದವು. ನಂತರ ಮೂಡಿಗೆರೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಆರೋಪಿಗಳನ್ನು ಅರಣ್ಯ ಇಲಾಖೆಯ ಸುಪರ್ದಿಗೆ ಒಪ್ಪಿಸಲಯಿತು. ಆರೋಪಿಗಳಿಂದ 5 ಶ್ರೀಗಂಧದ ತುಂಡುಗಳನ್ನು ಹಾಗೂ ಒಂದು ಆಟೋವನ್ನು ವಶಪಡಿಸಿಕೊಳ್ಳಲಾಗಿದೆ. ಸ್ಥಳದಲ್ಲಿ ಸಿಕ್ಕಿಬಿದ್ದ ಆಟೋ ಚಾಲಕ ಮುನ್ನಾ ಮತ್ತು ರುದ್ರಯ್ಯ ಎಂಬುವವರನ್ನು ಬಂಧಿಸಲಾಗಿದ್ದು ಇತರರ ಬಂದನಕ್ಕೆ ಹುಡುಕಾಟ ನಡೆಸಲಾಗಿದೆ. ಬಂಧಿತರೆಲ್ಲರೂ ಬೇಲೂರು ತಾಲ್ಲೂಕಿನ ಅರೇಹಳ್ಳಿಯವರು ಎಂದು ತಿಳಿದುಬಂದಿದೆ.


Spread the love

Exit mobile version