Home Mangalorean News Kannada News ಮೂಡುಬಿದಿರೆ ಪುರಸಭೆ ಬಯಲು ಮಲವಿಸರ್ಜನೆ ಮುಕ್ತ : ಆಕ್ಷೇಪಣೆ ಆಹ್ವಾನ

ಮೂಡುಬಿದಿರೆ ಪುರಸಭೆ ಬಯಲು ಮಲವಿಸರ್ಜನೆ ಮುಕ್ತ : ಆಕ್ಷೇಪಣೆ ಆಹ್ವಾನ

Spread the love

ಮೂಡುಬಿದಿರೆ ಪುರಸಭೆ ಬಯಲು ಮಲವಿಸರ್ಜನೆ ಮುಕ್ತ : ಆಕ್ಷೇಪಣೆ ಆಹ್ವಾನ

ಮಂಗಳೂರು : ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಕನಸಿನಂತೆ ಮನೆಗೊಂದು ಶೌಚಾಲಯವನ್ನು ನಿರ್ಮಾಣ ಮಾಡಲು 2014ನೇ ಸಾಲಿನಿಂದ ಸ್ವಚ್ಛ ಭಾರತ ಮಿಷನ್ ಅಂಗವಾಗಿ ಮೂಡುಬಿದಿರೆ ಪುರಸಭಾ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿ, ಅನುಷ್ಠಾನಗೊಳಿಸಲಾಗುತ್ತಿದೆ.

ಮೂಡುಬಿದಿರೆ ಪುರಸಭೆಯನ್ನು ಬಯಲು ಮಲವಿಸರ್ಜನೆ ಮುಕ್ತ ನಗರವನ್ನಾಗಿಸುವ ನಿಟ್ಟಿನಲ್ಲಿ ಆರ್ಥಿಕವಾಗಿ ಹಿಂದುಳಿದ ಶೌಚಾಲಯ ರಹಿತರಿಗೆ ಸ್ವಚ್ಛ ಭಾರತ ಮಿಷನ್ ಯೋಜನೆ, ಶೇ.24.10, ಶೇ.7.25 ಮತ್ತು ಶೇ.3ರ ಯೋಜನೆಗಳಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಸಹಾಯಧನ ನೀಡುವುದು ಹಾಗೂ ನಗರದ ವಾಣಿಜ್ಯ ಕೇಂದ್ರ, ಬಸ್‍ನಿಲ್ದಾಣಗಳಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲು ಕ್ರಮವಹಿಸಲಾಗಿದೆ. ಇದರೊಂದಿಗೆ ಪುರಸಭಾ ವ್ಯಾಪ್ತಿಯ ಎಲ್ಲಾ ಪೆಟ್ರೋಲ್ ಪಂಪ್‍ಗಳಲ್ಲಿರುವ ಶೌಚಾಲಯಗಳು ಸಾರ್ವಜನಿಕರ ಬಳಕೆಗೆ ಮುಕ್ತವಾಗಿರುತ್ತದೆ.

2014, 2015, 2016 ಮತ್ತು 2017ನೇ ಸಾಲಿನಲ್ಲಿ ನಡೆಸಿದ ಸಮೀಕ್ಷೆ ಅನ್ವಯ ಮೂಡುಬಿದಿರೆ ಪುರಸಭಾ ವ್ಯಾಪ್ತಿಯಲ್ಲಿ 112 ಮನೆಗಳಿಗೆ ಶೌಚಾಲಯ ವ್ಯವಸ್ಥೆ ಇಲ್ಲದಿರುವುದು ಕಂಡುಬಂದಿದ್ದು, ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಈ ಎಲ್ಲಾ ಕುಟುಂಬಗಳಿಗೆ ಶೌಚಾಲಯ ನಿರ್ಮಾಣಕ್ಕೆ ಸಹಾಯಧನ ನೀಡುವುದಾಗಿ ಪ್ರೋತ್ಸಾಹಿಸಿ, ಹಲವು ಅರ್ಜಿದಾರರು ಶೌಚಾಲಯ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿರುತ್ತದೆ.

ಈಗಾಗಲೇ ಮೊದಲ ಹಂತದಲ್ಲಿ ಆಯ್ದ 2 ವಾರ್ಡುಗಳಾದ ಎಲೆಕ್ಷನ್ ವಾರ್ಡ್ ನಂಬ್ರ 8 ಮತ್ತು 12ರ ಅರಮನೆಬಾಗಿಲು, ನಾಗರಕಟ್ಟೆ, ಬೋವಿಕೇರಿ, ಆಳ್ವಾಸ್ ಆಸ್ಪತ್ರೆ ರಸ್ತೆ, ಸ್ವರಾಜ್ಯ ಮೈದಾನ ಬಳಿ, ಕಲ್ಸಂಕ, ಜಿ.ವಿ.ಪೈ ನಗರ, ಮುಖ್ಯರಸ್ತೆ, ದೊಡ್ಡಮನೆ ರಸ್ತೆ, ಸಾವಿರಕಂಬದ ಬಸದಿ ಹಿಂಬದಿ, ರೋಟರಿ ಶಾಲಾ ಬಳಿವರೆಗಿನ ಪ್ರದೇಶಗಳನ್ನು ಬಯಲು ಮಲ ವಿಸರ್ಜನೆ ಮುಕ್ತ ವಾರ್ಡ್‍ಗಳೆಂದು ದಿನಾಂಕ: 18-05-2017ರ ಪ್ರಕಟಣೆಯನ್ವಯ ಘೋಷಣೆ ಮಾಡಲಾಗಿರುತ್ತದೆ ಉಳಿದಂತೆ 21 ವಾರ್ಡ್‍ಗಳನ್ನು ಈ ಪಟ್ಟಿಗೆ ಸೇರ್ಪಡೆಗೊಳಿಸಲು ನಿರ್ಧರಿಸಲಾಗಿದ್ದು, ಸಾರ್ವಜನಿಕರು/ಸಂಘ ಸಂಸ್ಥೆಗಳು ಈ ಸಂಬಂಧ ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ ಅಥವಾ ಈ ಪ್ರದೇಶದಲ್ಲಿ ಯಾವುದಾದರೂ ಶೌಚಾಲಯ ರಹಿತರು ಇದ್ದಲ್ಲಿ ಅಥವಾ ಬಯಲು ಮಲವಿಸರ್ಜನೆ ಮಾಡುತ್ತಿರುವುದು ಕಂಡು ಬಂದಲ್ಲಿ ಪ್ರಕಟಣೆ ಹೊರಡಿಸಿದ 7 ದಿನಗಳೊಳಗಾಗಿ “ಮುಖ್ಯಾಧಿಕಾರಿ, ಪುರಸಭೆ, ಮೂಡುಬಿದಿರೆ” ಇವರಿಗೆ ಲಿಖಿತವಾಗಿ ಮನವಿ ಸಲ್ಲಿಸಬಹುದು.

ಮುಂದಿನ ದಿನಗಳಲ್ಲಿ ಬಯಲು ಮಲ ವಿಸರ್ಜನೆಯನ್ನು ಮಾಡುವವರಿಗೆ ರೂ. 500/-ದಂಡ ವಿಧಿಸುವ ಬಗ್ಗೆ ಕ್ರಮವಹಿಸಲಾಗುವುದು ಎಂದು ಮುಖ್ಯಾಧಿಕಾರಿ, ಮೂಡಬಿದಿರೆ ಪುರಸಭೆ ಇದರ ಪ್ರಕಟಣೆ ತಿಳಿಸಿದೆ.


Spread the love

Exit mobile version