ಮೂಡುಬಿದಿರೆ: ಪ್ರೇಯಸಿಯ ಕೊಂದು ಪ್ರೇಮಿ ಆತ್ಮಹತ್ಯೆ
ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಪ್ರಾಂತ್ಯ ಶಾಲೆ ಬಳಿ ಕುಟುಂಬದವರೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಯುವತಿಯನ್ನು ಆಕೆ ಸಂಬಂಧಿ, ಪ್ರಿಯಕರ ಕೊಲೆ ಮಾಡಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಚರಿಷ್ಮಾ ಪೂಜಾರಿ(20) ಮೃತಪಟ್ಟಾಕೆ. ಮಂಗಳೂರು ಬಜಾಲ್ ಮೂಲದ ಲೋಹಿತ್ ಆಕೆಯನ್ನು ಕೊಲೆ ಮಾಡಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ವೇಳೆ ಬಂದ ಲೋಹಿತ್ ಚರಿಷ್ಮಾ ಕುತ್ತಿಗೆಗೆ ಚಾಕುವಿನಿಂದ ಇರಿದು, ಬಳಿಕ ತಲೆಗೆ ಸುತ್ತಿಗೆಯಿಂದ ಬಡಿದ್ದಾನೆ ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಮೂಡುಬಿದಿರೆ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಬಳಿಕ ಆತ ನೇಣುಬಿಗಿದು ಮನೆಯ ಒಳಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೂಡುಬಿದಿರೆ ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.