ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ಕು ಕುಖ್ಯಾತ ದನಕಳ್ಳರ ಬಂಧನ
ಮಂಗಳೂರು: ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಮನೆಗಳಿಂದ ದನಗಳನ್ನು ಕದ್ದು ಸಾಗಾಟ ಮಾಡುತ್ತಿದ್ದ ನಾಲ್ಕು ಮಂದಿ ಆರೋಪಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಕಾವೂರು ಹಾಗೂ ಮೂಡಬಿದ್ರೆ ಪೋಲಿಸರು ಯಶಸ್ವಿಯಾಗಿದ್ದಾರೆ.
ಪ್ರಕರಣ 1: ನಗರದ ಕಾವೂರು ಪೊಲೀಸ್ ಠಾಣಾ ವ್ಹಾಪ್ತಿಯ ಮೂಡುಶೆಡ್ಡೆಬೆೈಲು ಎಂಬಲ್ಲಿನ ಮನೆಯ ಹಟ್ಟಿಯಿಂದ ಎರಡು ದನಗಳನ್ನು ಕಳವು ಮಾಡಿದ ಪ್ರಕರಣದಲ್ಲಿ ಭಾಗಿಯಾದ ಇಬ್ಬರು ಆರೋಪಿಗಳಾದ ಬಂಟ್ವಾಳ ಅಮ್ಮೇಮ್ಮಾರ್ ನಿವಾಸಿ ಇಮ್ರಾನ್@ಕುಟ್ಟ ಇಮ್ರಾನ್ (27) ಮತ್ತು ಬಜಪೆ ನಿವಾಸಿ ಉಮ್ಮರ್ ಫಾರೂಕ್ ಅವರನ್ನು ಬಂಧೀಸಿದ್ದಾರೆ.
ಬಂಧಿತರು ಜುಲೈ 16-17ರಂದು ಬೆಳಗಿನ ಜಾವ ಕಾವೂರು ಮೂಡುಶೆಡ್ಡೆಬೈಲು ನಿವಾಸಿ ಪುರುಷೋತ್ತಮ ಎಂಬವರ ಮನೆಯ ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ ದನಗಳನ್ನು ಬಿಳಿ ಬಣ್ಣದ ಟಾಟಾ ಸುಮೊದಲ್ಲಿ ಬಂದು ಮನೆಯವರಿಗೆ ಹೆದರಿಸಿ ಎರಡು ದನಗಳನ್ನು ಕಳವು ಮಾಡಿಕೊಂಡು ಹೋದ ಬಗ್ಗೆ ದೂರು ದಾಖಲಾಗಿತ್ತು.
ಇನ್ನೋರ್ವ ಆರೋಪಿ ಉಮ್ಮರ್ ಫಾರೂಕ್ ವಿರುದ್ದ ಬಜಪೆ, ಬಂಟ್ವಾಳ ನಗರ, ಉಪ್ಪಿನಂಗಡಿ, ವೇಣೂರು ಕಾರ್ಕಳ ನಗರ ಮತ್ತು ಗ್ರಾಮಾಂತರ ಠಾಣೆಗಳಲ್ಲಿ ದನ ಕಳ್ಳತನಕ್ಕೆ ಸಂಬಂಧಪಟ್ಟಂತೆ ಒಟ್ಟು 10 ಪ್ರಕರಣಗಳು ದಾಖಲಾಗಿರುತ್ತದೆ. ಈ ಪ್ರಕರಣದಲ್ಲಿ ಇನ್ನೂ ಹಲವು ಆರೋಪಿತರು ಭಾಗಿಯಾಗಿದ್ದು ಅವರನ್ನು ಶೀಘ್ರವಾಗಿ ಬಂಧಿಸಲಾಗುವುದು ಎಂದು ಪೋಲಿಸರು ತಿಳಿಸಿದ್ದಾರೆ.
ಪ್ರಕರಣ 2: ಮಂಗಳೂರು ನಗರದ ಮಂಗಳೂರು ದಕ್ಷಿಣ ಪೋಲಿಸ್ ಠಾಣಾ ವ್ಯಾಪ್ತಿಯ ಗೂಡ್ಸ್ ಶೆಡ್ ಎಂಬಲ್ಲಿ ಮೇಯುತ್ತಿದ್ದ 2 ದನ ಹಾಗೂ ಕರುವನ್ನು ಕಳವು ಮಾಡಿದ ಪ್ರಕರಣದಲ್ಲಿ ಭಾಗಿಯಾದ ಕುಖ್ಯಾತ ಆರೋಪಿ ಮಂಗಳೂರು ಕಸಬಾ ಬೆಂಗರೆ ನಿವಾಸಿ ಅಬ್ದುಲ್ ಕಬೀರ್ @ ಪಾರಿವಾಳ ಕಬೀರ್ (30) ಎಂಬಾತನ್ನು ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಪೋಲಿಸರು ಯಶಸ್ವಿಯಾಗಿದ್ದಾರೆ.
ಜುಲೈ 5ರಂದು ಮಂಗಳೂರು ನಗರದ ದಕ್ಷಿಣ ಪೋಲಿಸ್ ಠಾಣಾ ಗೂಡ್ಸ್ ಶೆಡ್ ಬಳಿಯಲ್ಲಿ ಮೇಯುತ್ತಿದ್ದ ದನಗಳ ಪೈಕಿ ಪಾಂಡೇಶ್ವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ ದನ ಹಾಗೂ ಕರುವಿನ ಕಳ್ಳತನವಾಗಿದ್ದು, ಈ ಬಗ್ಗೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣದ ಆರೋಪಿ ಅಬ್ರುಲ್ ಕಬೀರ್ ನಿಂದ ದನ ಕಳ್ಳತನ ಮಾಡಲು ಉಪಯೋಗಿಸಿದ ಮಾರುತಿ ರಿಡ್ಜ್ ಕಾರು ಸಮೇತ ಮುಂದಿನ ಕ್ರಮಕ್ಕಾಗಿ ಮಂಗಳೂರು ದಕ್ಷಿಣ ಪೋಲಿಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಆರೋಪಿಯ ವಿರುದ್ದ ಈ ಹಿಂದ ಪಣಂಬೂರು ಪೋಲಿಸ್ ಠಾಣೆಯಲ್ಲಿ ದರೋಡೆ ಪ್ರಕರಣ, ಬಜಪೆ ಪೋಲಿಸ್ ಠಾಣೆಯಲ್ಲಿ ದನಕಳ್ಳತನ ಪ್ರಕರಣ, ಉಳ್ಳಾಲ ಹಾಗೂ ಉಪ್ಪಿನಂಗಡಿ ಪೋಲಿಸ್ ಠಾಣೆಗಳಲ್ಲಿ ಮೊಬೈಲ್ ಕಳ್ಳತನ ಹಾಗೂ ದನಕಳ್ಳತನ ಪ್ರಕರಣಗಳು ದಾಖಲಾಗಿರುತ್ತದೆ.
ಈತನು ಪ್ರಕರಣ ವಿಚಾರಣೆ ಸಮಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು, ನ್ಯಾಯಾಲವು ಈತನ ವಿರುದ್ದ ವಾರಂಟ್ ಹೊರಡಿಸಿರುತ್ತದೆ.
ಪ್ರಕರಣ 3 : ಮೂಡಬಿದ್ರಿ ಪೋಲಿಸ್ ಠಾಣಾ ವ್ಯಾಪ್ತಿಯ ಮೂರು ಕಡೆಗಳಲ್ಲಿ 2017 ನೇ ಇಸವಿಯಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಪ್ರಮುಖ ಆರೋಪಿ ಎಡಪದವು ಮೀಜಾರು ಬಡಗ ತೋಡಾರು ನಿವಾಸಿ ಕೆ ಅಬ್ದುಲ್ ಬಶೀರ್ @ಅರ್ಗ ಬಶೀರ್ (42) ಎಂಬಾತನ್ನು ಕೂಡ ಸಿಸಿಬಿ ಪೋಲಿಸರು ಬಂಧಿಸಿದ್ದಾರೆ.
2017ನೇ ಇಸವಿಯಲ್ಲಿ ಮೂಡಬಿದ್ರಿ ಪೋಲಿಸ್ ಠಾಣಾ ವ್ಯಾಪ್ತಿಯ ರಿಂಗ್ ರೋಡ್ ಪರಿಸರದಲ್ಲಿನ ಹಟ್ಟಿಯೊಂದರಲ್ಲಿ ಕಟ್ಟಿಹಾಕಿದ್ದ ದನವನ್ನು ಕಳ್ಳತನ ಮಾಡಿದ ಪ್ರಕರಣ, ಮೂಡಬಿದ್ರೆಯ ಒಂಟಿಕಟ್ಟೆ ಎಂಬಲ್ಲಿ ಮೇಯಲು ಬಿಟ್ಟಿದ್ದ ದನವನ್ನು ಕಳ್ಳತನ ಮಾಡಿದ್ದ ಪ್ರಕರಣ, ಮೂಡಬಿದ್ರೆಯ ಬೊಗ್ರುಗುಡ್ಡೆಯ ಹಟ್ಟಿಯೊಂದರಲ್ಲಿ ಕಟ್ಟಿದ್ದ ದನವನ್ನು ಕಳ್ಳತನ ಮಾಡಿದ್ದ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೊಪಿ ಅಬ್ದುಲ್ ಬಶಿರ್ ನನ್ನು ಸಿಸಿಬಿ ಪೋಲಿಸರು ತೋಡಾರು ಬಳಿಯಿಂದ ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಮೂಡಬಿದ್ರಿ ಪೋಲಿಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ಆರೋಪಿಯ ವಿರುದ್ದ ಈ ಹಿಂದೆ ಬಜಪೆ ಪೋಲಿಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ, ಮೂಡಬಿದ್ರಿ ಪೋಲಿಸ್ ಠಾಣಾ ವ್ಯಾಫ್ತಿಯಲ್ಲಿ ದನಕಳ್ಳತನಕ್ಕೆ ಸಂಬಂಧಿಸಿ ಒಟ್ಟು 7 ಪ್ರಕರಣಗಳು ದಾಖಲಾಗಿರುತ್ತದೆ.