ಮೇ. 12 ಪುರಭವನದಲ್ಲಿ ‘ಕೊಂಕಣಿ ಶ್ರೀರಾಮ ಗೀತಾ’
ಮಂಗಳೂರು: 1974ರಿಂದ ಕೊಂಕಣಿ ಭಾಷೆ ಮತ್ತು ಸಂಸ್ಕøತಿಯ ಸೇವೆಯಲ್ಲಿ ತೊಡಗಿರುವ ಕೊಂಕಣಿ ಭಾಷಾ ಮಂಡಳ ಕರ್ನಾಟಕ ಇವರು ಆದಿತ್ಯವಾರ ಮೇ 12ರಂದು ಸಂಜೆ 6.00 ಗಂಟೆಗೆ ಸರಿಯಾಗಿ ಮಂಗಳೂರಿನ ಕುದ್ಮುಲ್ ರಂಗ ರಾವ್ ಪುರಭವನದಲ್ಲಿ ಸ್ವರಶ್ರೀ ಗೋವಾ ಇವರು ಪ್ರಸ್ತುತ ಪಡಿಸುವ ರಾಮಾಯಣ ಆಧಾರಿತ ‘ಕೊಂಕಣಿ ಶ್ರೀರಾಮ ಗೀತಾ’ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.
ಕೊಂಕಣಿಯ ಭಾಷೆಯ ಖ್ಯಾತ ಕವಿ ದಿವಂಗತ ಮನೋಹರರಾಯ್ ಸರದೇಸಾಯಿ ಇವರು 50 ವರ್ಷಗಳ ಹಿಂದೆ ಗೋವಾ ಓಪಿನಿಯನ್ ಪೋಲನ ಸಂದರ್ಭದಲ್ಲಿ ರಚಿಸಿದ ಗೀತೆಗಳಿಗೆ 17 ಕಲಾವಿದರ ತಂಡವಾಗಿರುವ ‘ಸ್ವರಶ್ರೀ ಗೋವಾ’ ಇವರು ಸಂಗೀತ ನೀಡಿ ದೇಶದಾದ್ಯಂತ ಹಾಗೂ ವಿದೇಶಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡಿರುತ್ತಾರೆ.
ಕರಾವಳಿ ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ಪ್ರಸ್ತುತಗೊಳ್ಳುತ್ತಿರುವ ಈ ಕಾರ್ಯಕ್ರಮಕ್ಕೆ ಮಂಗಳೂರಿನ ಸಂಗೀತಾಭಿಮಾನಿಗಳಿಗೆ ಮುಕ್ತ ಪ್ರವೇಶವಿದೆ.
1989ರಲ್ಲಿ ಕೊಂಕಣಿ ಜಾಥಾ ಹಾಗೂ 1995ರಲ್ಲಿ ಪ್ರಥಮ ವಿಶ್ವ ಕೊಂಕಣಿ ಸಮ್ಮೇಳನವನ್ನು ಆಯೋಜಿಸಿ ಪ್ರಪ್ರಥಮ ಬಾರಿಗೆ ದೇಶದಾದ್ಯಂತದ ಕೊಂಕಣಿಗರನ್ನು ಸಂಘಟಿಸಿದ ಶ್ರೇಯಸ್ಸು ಕೊಂಕಣಿ ಭಾಷಾ ಮಂಡಳದಾಗಿದೆ ಎಂದು ಭಾಷಾ ಮಂಡಳದ ಅಧ್ಯಕ್ಷ ವೆಂಕಟೇಶ ಎನ್. ಬಾಳಿಗಾ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖೆ 73045 05978 ಅಥವಾ 98807 01747 ಅನ್ನು ಸಂಪರ್ಕಿಸಲು ಕೋರಲಾಗಿದೆ.