Home Mangalorean News Kannada News ಮೇ 5 ರಂದು ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ; ಸಂಚಾರದಲ್ಲಿ ಬದಲಾವಣೆ

ಮೇ 5 ರಂದು ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ; ಸಂಚಾರದಲ್ಲಿ ಬದಲಾವಣೆ

Spread the love

ಮೇ 5 ರಂದು ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ; ಸಂಚಾರದಲ್ಲಿ ಬದಲಾವಣೆ

ಮಂಗಳೂರು: ದೇಶದ ಪ್ರಧಾನಿ ನರೇಂದ್ರ ಮೋದಿಯವರು ಮಂಗಳೂರು ನಗರದ ನೆಹರೂ ಮೈದಾನದಲ್ಲಿ ಮೇ 5 ರಂದು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಸದ್ರಿ ರೆಸ್ತೆಯಲ್ಲಿ ಅನಾವಶ್ಯಕವಾದ ವಾಹನ ನಿಲುಗಡೆಯನ್ನು ನಿಷೇಧಿಸಿ ನಗರ ಪೋಲಿಸ್ ಕಮೀಷನರ್ ವಿಪುಲ್ ಕುಮಾರ್ ಆದೇಶ ಹೊರಡಿಸಿದ್ದಾರೆ ಅಲ್ಲದೆ ವಾಹನ ಸಂಚಾರದಲ್ಲಿ ಕೂಡ ಬದಲಾವಣೆಯನ್ನು ಮಾಡಿದ್ದಾರೆ.

ನರಂದ್ರ ಮೋದಿ ಕಾರ್ಯಕ್ರಮ ಮುಗಿಸಿ ತೆರಳುವವರೆಗೆ ಜಾರಿಯಲ್ಲಿರುವಂತೆ ಈ ಕೆಳಗಿನಂತೆ ವಾಹನ ಸಂಚಾರದಲ್ಲಿ ತಾತ್ಕಾಲಿಕ ಮಾರ್ಪಾಡು ಮಾಡಿ ಬದಲಿ ವ್ಯವಸ್ಥೆ ಸೂಚಿಸಿ ಆದೇಶ ನೀಡಲಾಗಿದೆ. ನೆಹರು ಮೈದಾನ ಮತ್ತು ಸುತ್ತಲಿನ 500 ಮೀಟರ್ ವ್ಯಾಪ್ತಿಯಲ್ಲಿ ಕಾರ್ಯಕ್ರಮ ಮುಗಿಯುವ ತನಕ ಎಲ್ಲ ತರಹದ ವಾಹನಗಳನ್ನು ನಿಲ್ಲಿಸುವುದನ್ನು ನಿಷೇಧಿಸಲಾಗಿದೆ.


Spread the love

Exit mobile version