Home Mangalorean News Kannada News ಮೈತ್ರಿ ಸರ್ಕಾರದ ಜನಪರ ಕಾರ್ಯಗಳು ಮಧು ಬಂಗಾರಪ್ಪ ಗೆಲುವಿಗೆ ಸಹಕಾರಿ – ಜಿ.ಎ.ಬಾವಾ

ಮೈತ್ರಿ ಸರ್ಕಾರದ ಜನಪರ ಕಾರ್ಯಗಳು ಮಧು ಬಂಗಾರಪ್ಪ ಗೆಲುವಿಗೆ ಸಹಕಾರಿ – ಜಿ.ಎ.ಬಾವಾ

Spread the love

ಮೈತ್ರಿ ಸರ್ಕಾರದ ಜನಪರ ಕಾರ್ಯಗಳು ಮಧು ಬಂಗಾರಪ್ಪ ಗೆಲುವಿಗೆ ಸಹಕಾರಿ – ಜಿ.ಎ.ಬಾವಾ

ಉಡುಪಿ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಮಧು ಬಂಗಾರಪ್ಪ ಗೆಲುವುದು ಖಚಿತ. ಕ್ಷೇತ್ರದಲ್ಲಿ ಕಾಂಗ್ರೆಸ್‌ ಪರ ಒಲವು ಕಾಣುತ್ತಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ.ಬಾವ ಹೇಳಿದರು.

ನಗರದ ವೈಟ್ ಲೋಟಸ್ ಪರ್ಲ್‌ ಹೋಟೆಲ್‌ನಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, ಮೈತ್ರಿ ಸರ್ಕಾರದ ಉತ್ತಮ ಕಾರ್ಯಗಳು ಐದೂ ಕ್ಷೇತ್ರಗಳ ಉಪಚುನಾವಣೆಯ ಗೆಲುವಿಗೆ ಕಾರಣವಾಗಲಿವೆ ಎಂದರು.

ಯಡಿಯೂರಪ್ಪ ಹಾಗೂ ಬಿ.ವೈ.ರಾಘವೇಂದ್ರ ಸತತವಾಗಿ 9.5 ವರ್ಷಗಳ ಕಾಲ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಅಧಿಕಾರ ಅನುಭವಿಸಿದ್ದಾರೆ. ಬೈಂದೂರು ಕ್ಷೇತ್ರದ ಅಭಿವೃದ್ಧಿಗೆ ಅವರು ಕೊಡುಗೆಗಳು ಶೂನ್ಯ. ಮತದಾರರಿಗೆ ಈ ಬಗ್ಗೆ ಬೇಸರವಿದೆ. ಚುನಾವಣೆಯಲ್ಲಿ ಮೈತ್ರಿ ಸರ್ಕಾರದ ಪರ ಮತ ಚಲಾಯಿಸಲಿದ್ದಾರೆ ಎಂದರು.

ಮೈತ್ರಿ ಸರ್ಕಾರದ ಅಭ್ಯರ್ಥಿ ಉಪ ಚುನಾವಣೆಯಲ್ಲಿ ಗೆದ್ದರೆ 5 ತಿಂಗಳ ಆಡಳಿತವನ್ನು ಮತದಾರರು ಗಮನಿಸಲಿ. ಅಭಿವೃದ್ಧಿ ಆಧಾರದ ಮೇಲೆ 2019ರ ಲೋಕಸಭಾ ಚುನಾವಣೆಯಲ್ಲಿ ಮತ ಹಾಕಲಿ ಎಂದರು.‌

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ನರಸಿಂಹ ಮೂರ್ತಿ, ನಾಗೇಶ್‌ ಉಪಸ್ಥಿತರಿದ್ದರು.


Spread the love

Exit mobile version