ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಚಿಂತನ-ಮಂಥನ

Spread the love

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಚಿಂತನ-ಮಂಥನ

ಮ0ಗಳೂರು : ಕರ್ನಾಟಕ ಸಾಹಿತ್ಯ ಅಕಾಡೆಮಿಯು 2017ರ ಜೂನ್ ಮತ್ತು ಜುಲೈ ತಿಂಗಳಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ವಿಶೇಷ ಘಟಕ / ಗಿರಿಜನ ಉಪಯೋಜನೆ/ಸಾಮಾನ್ಯ ಯೋಜನೆಯಡಿಯಲ್ಲಿ ಆಸಕ್ತ ಅಭ್ಯರ್ಥಿಗಳಿಗಾಗಿ ಮೈಸೂರು ವಿಭಾಗ ಮಟ್ಟದಲ್ಲಿ ವಸತಿ ಸಹಿತ ಎರಡು ದಿನಗಳ “ ಡಾ. ಬಿ.ಆರ್. ಅಂಬೇಡ್ಕರ್ ಚಿಂತನ – ಮಂಥನ” (ರಾಷ್ಟ್ರದ ಅಭಿವೃದ್ಧಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಿಚಾರಧಾರೆ ಕುರಿತ ಕಮ್ಮಟ) ಕಮ್ಮಟವನ್ನು ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿದೆ.

ಮೈಸೂರು ವಿಭಾಗದ ಯಾವುದೇ ಜಿಲ್ಲೆಗೆ (ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು)ಸೇರಿರುವ 18ರಿಂದ 40ರ ವಯೋಮಿತಿ ಯಲ್ಲಿರುವ ವಿದ್ಯಾರ್ಥಿಗಳು , ಶಿಕ್ಷಕರು-ಉಪನ್ಯಾಸಕರು ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ವಯಸ್ಸಿಗೆ ಸಂಬಂಧಿಸಿದಂತೆ ಎಸ್.ಎಸ್.ಎಲ್.ಸಿ. ಅಂಕಪಟ್ಟಿಯ ದೃಢೀಕೃತ ಪಟ್ಟಿಯನ್ನು ಲಗತ್ತಿಸಬೇಕು. ಜಾತಿಗೆ ಸಂಬಂಧಿಸಿದಂತೆ ದೃಢೀಕೃತ ಜಾತಿ ಪ್ರಮಾಣಪತ್ರದ ಪ್ರತಿಯನ್ನು ಕಡ್ಡಾಯವಾಗಿ ಲಗತ್ತಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳು ಕಡ್ಡಾಯವಾಗಿ ಎರಡು ದಿನಗಳು ಶಿಬಿರದಲ್ಲೇ ವಾಸ್ತವ್ಯ ಮಾಡಬೇಕು. ಅರ್ಜಿಯನ್ನೊಳಗೊಂಡ ಲಕೋಟೆಯ ಮೇಲ್ಭಾಗದಲ್ಲಿ ಕಡ್ಡಾಯವಾಗಿ “ ಡಾ. ಬಿ.ಆರ್. ಅಂಬೇಡ್ಕರ್ ಚಿಂತನ – ಮಂಥನ ಮೈಸೂರು ವಿಭಾಗ ಕಮ್ಮಟ ” ಕ್ಕೆ ಅರ್ಜಿ ಎಂದು ನಮೂದಿಸಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಶಿಬಿರದ ಸ್ಥಳಕ್ಕೆ ಬಂದು ಹೋಗಲು ರಾಜಹಂಸ ಬಸ್ ದರ / ಸಾಮಾನ್ಯ ರೈಲ್ವೆ ದರವನ್ನು ನೀಡಲಾಗುವುದು. ಹಾಗೂ ಎರಡು ದಿನಗಳು ಊಟ, ಉಪಹಾರದ ವ್ಯವಸ್ಥೆ ಯನ್ನು ಮಾಡಲಾಗುವುದು.

ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಅಕಾಡೆಮಿಯ ವೆಬ್ ಸೈಟ್ ನಿಂದ ಪಡೆದುಕೊಳ್ಳ ಬಹುದು. ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಜೂನ್ ಮೊದಲ ವಾರದಲ್ಲಿ ಅಕಾಡೆಮಿಯ ವೆಬ್ಸೈಟ್ ನಲ್ಲಿಪ್ರಕಟಿಸಲಾಗುವುದು.

ಸಲ್ಲಿಸಲು ಕೊನೆಯ ದಿನ ಮೇ. 25 ಕಡ್ಡಾಯವಾಗಿ ಅರ್ಜಿಯಲ್ಲಿ ಪೂರ್ಣವಿಳಾಸ, ಮೊಬೈಲ್ ಸಂಖ್ಯೆ . ಇ-ಮೇಲ್ ವಿಳಾಸ ನಮೂದಿಸಬೇಕು. ಇಲ್ಲದಿದ್ದರೆ ಅರ್ಜಿಯನ್ನು ತಿರಸ್ಕರಿಸಲಾಗುವುದು. ಅಭ್ಯರ್ಥಿಗಳು ಈ ವಿಷಯಗಳನ್ನು ಅಭ್ಯಾಸ ಮಾಡಿಯೇ ಕಮ್ಮಟಕ್ಕೆ ಹಾಜರಾಗಬೇಕು.

ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಶಿಕ್ಷಣ, ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಕಾರ್ಮಿಕ ಸಮುದಾಯ, ಡಾ. ಬಿ.ಆರ್.ಅಂಬೇಡ್ಕರ್ ಮತ್ತು ರೈತ ಸಮುದಾಯ, ಡಾ. ಬಿ.ಆರ್.ಅಂಬೇಡ್ಕರ್ ಮತ್ತು ಮಹಿಳಾ ಸಮುದಾಯ, ಡಾ. ಬಿ.ಆರ್. ಅಂಬೇಡ್ಕರ್ – ವರ್ಣ, ಜಾತಿ ಮತ್ತು ಅಸ್ಪೃಶ್ಯತೆ, ಡಾ. ಬಿ.ಆರ್. ಅಂಬೇಡ್ಕರ್ – ಸಾಮಾಜಿಕ ವಿಮೋಚನೆ, ಡಾ. ಬಿ.ಆರ್. ಅಂಬೇಡ್ಕರ್ – ಧಾರ್ಮಿಕ ಚಿಂತನೆಗಳು ಡಾ. ಬಿ.ಆರ್. ಅಂಬೇಡ್ಕರ್ – ಆರ್ಥಿ ಕ ಚಿಂತನೆಗಳು, ಡಾ. ಬಿ.ಆರ್. ಅಂಬೇಡ್ಕರ್ – ನೀರಾವರಿ ಕುರಿತ ಚಿಂತನೆಗಳು, ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಪ್ರಜಾಪ್ರಭುತ್ವದ ಚಿಂತನೆಗಳು, ಡಾ. ಬಿ.ಆರ್. ಅಂಬೇಡ್ಕರ್ ಮತ್ತು ತಳಸಮುದಾಯದ ಹಕ್ಕುಗಳು, ಡಾ. ಬಿ.ಆರ್. ಅಂಬೇಡ್ಕರ್ ರಾಷ್ಟ್ರೀಯತೆ ಮತ್ತು ಪ್ರಬುದ್ಧ ಭಾರತದ ಕಲ್ಪನೆ ಅರ್ಜಿಯನ್ನು.ಡಾ. ಎಸ್.ನರೇಂದ್ರಕುಮಾರ್ ಸಮನ್ವಯಾಧಿಕಾರಿಗಳು, ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ, ಮೈಸೂರು ವಿಶ್ವವಿದ್ಯಾನಿಲಯ, ಮಾನಸಗಂಗೋತ್ರಿ,ಮೈಸೂರು- 570006 (94818 18439) ಇವರಿಗೆ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.


Spread the love