ಮೊಂತಿ ಹಬ್ಬಕ್ಕೆ ಶುಭಾಶಯ ಕೋರಿದ ಮಂಗಳೂರು ಬಿಷಪ್
ಮಂಗಳೂರು: ಕರಾವಳಿ ಕ್ರೈಸ್ತರು ಆಚರಿಸುವ ತೆನೆ ಹಬ್ಬಕ್ಕೆ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ. ಅಲೋಶೀಯಸ್ ಪಾವ್ಲ್ ಡಿಸೋಜಾ ಶುಭಾಶಯ ಕೋರಿದ್ದಾರೆ.
ಸರ್ವೇಶ್ವರಾ ತನ್ನ ವಿಮೋಚನಾ ಯೋಜನೆಯಲ್ಲಿ ಮಾತೆ ಮರಿಯಳಿಗೆ ಒಂದು ಪ್ರಮುಖ ಸ್ಥಾನವನ್ನು ದಯಪಾಲಿಸಿ, ಜನ್ಮಪಾಪದಿಂದ ಅವರನ್ನು ಮುಕ್ತಿಗೊಳಿಸಿದರು. ಮಾತೆ ಮರಿಯಳ ಜನ್ಮ ದೇವರ ಪ್ರೀತಿ ಭೂಲೋಕಕ್ಕೆ ಸಾರುತ್ತದೆ. ಮರಿಯಾಳ ವಿಶ್ವಾಸಭರಿತ ಜೀವನ, ಪ್ರತಿಯೊಬ್ಬ ಕ್ರೈಸ್ತನಿಗೂ ಒಂದು ಆದರ್ಶ. ಅವರ ಜನ್ಮದಿನವನ್ನು ನಮ್ಮ ಕುಟುಂಬದ ಹಬ್ಬ(ತೆನೆಹಬ್ಬ)ವಾಗಿ ಆಚರಣೆ ಮಾಡುವುದು ನಮ್ಮ ಸೌಭಾಗ್ಯ. ಆದುದರಿಂದ ನಾವೆಲ್ಲರೂ ಮಾತೆ ಮರಿಯಳನ್ನು ನಮ್ಮ ಕುಟುಂಬದ ರಾಣಿಯಾಗಿ ಸ್ವೀಕರಿಸಿ, ಅವರನ್ನು ವಂದಿಸಿ, ಪ್ರಕೃತಿಯಲ್ಲಿ ಉತ್ಪಾದಿಸಿದ ನವ ತೆನೆಯನ್ನು ಕುಟುಂಬದ ಎಲ್ಲಾ ಸದಸ್ಯರೊಡಗೂಡಿ ಆಸ್ವಾದೀಸೋಣ. ಕುಟುಂಬದ ರಾಣಿ ಮಾತೆ ಮರಿಯಳು ನಮ್ಮ ಕುಟುಂಬಗಳನ್ನು ಆಶೀರ್ವದಿಸಲಿ. ನಿಮಗೆಲ್ಲರಿಗೂ ತೆನೆಹಬ್ಬದ/ಮಾತೆ ಮರಿಯಳ ಹುಟ್ಟುಹಬ್ಬದ ಶುಭಾಶಯಗಳು