ಮೊಬೈಲ್ ಕಳವು ಆರೋಪಿಯ ಬಂಧನ

Spread the love

ಮೊಬೈಲ್ ಕಳವು ಆರೋಪಿಯ ಬಂಧನ

ಮಂಗಳೂರು : ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಪರಾರಿ ಎಂಬಲ್ಲಿ ಅಂಗಡಿಯಲ್ಲಿ ಯುವತಿ ಒಬ್ಬಳೇ ಇದ್ದದನ್ನು ಗಮನಿಸಿ ಸಿಗರೇಟ್ ಖರೀದಿಸುವ ನೆಪದಲ್ಲಿ ಹೋಗಿ ಯುವತಿಯ ಮೊಬೈಲ್ ಫೋನ್ ಕಳ್ಳತನ ಮಾಡಿ ಪರಾರಿಯಾದ ಆರೋಪಿಗಳ ಪೈಕಿ ಓರ್ವನನ್ನು ದಸ್ತಗಿರಿ ಮಾಡುವಲ್ಲಿ ರೌಡಿ ನಿಗ್ರಹ ದಳದ ಸಿಬ್ಬಂದಿಯವರು ಯಶಸ್ವಿಯಾಗಿದ್ದಾರೆ.

ಬಂಧಿತನನ್ನು ಮಂಗಳೂರು ಬಂದರು ನಿವಾಸಿ ಮಹಮ್ಮದ್ ಸರ್ಫುದ್ದೀನ್ (23) ಎಂದು ಗುರುತಿಸಲಾಗಿದೆ.

2017 ನೇ ಮಾರ್ಚ್ ತಿಂಗಳಿನಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಪರಾರಿ ಎಂಬಲ್ಲಿ ಅಂಗಡಿಯಲ್ಲಿ ಯುವತಿ ಒಬ್ಬಳೇ ಇದ್ದದನ್ನು ಗಮನಿಸಿ ಸಿಗರೇಟ್ ಖರೀದಿಸುವ ನೆಪದಲ್ಲಿ ಹೋಗಿ ಯುವತಿಯ ಮೊಬೈಲ್ ಫೋನ್ ಕಳ್ಳತನ ಮಾಡಿ ಹೊಂಡಾ ಆಕ್ಟಿವ್ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದು,ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಹಳೇ ಪಾಂಡೇಶ್ವರ ಠಾಣಾ ಹಳೇ ಆರೋಪಿ ಮಹಮ್ಮದ್ ಸರ್ಪುದ್ದೀನ್ ಮೊರ್ಗನ್ಗೇಟ್ ಬಳಿ ಚೆಕ್ ಮಾಡಿ ವಿಚಾರಿಸಿದಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಪರಾರಿ ಎಂಬಲ್ಲಿ ಅಂಗಡಿಯಿಂದ ಮೊಬೈಲ್ ಕಳ್ಳತನ ಮಾಡಿದ ಬಗ್ಗೆ ಒಪ್ಪಿದ್ದು, ಈತನನ್ನು ಕಳವು ಮಾಡಿದ ಸೊತ್ತಿನೊಂದಿಗೆ ವಶಕ್ಕೆ ಪಡೆದು ಮುಂದಿನ ಕ್ರಮದ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಹಸ್ತಾಂತರಿಲಾಗಿದೆ.ಆರೋಪಿ ಮಹಮ್ಮದ್ ಸರ್ಪುದ್ದೀನ್(23) ಈತನ ಮೇಲೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ಸುಲಿಗೆ ಮತ್ತು ದರೋಡೆ (ಎರಡು ಪ್ರಕರಣ),ಮಂಗಳೂರು ಪೂರ್ವ ಠಾಣೆಯಲ್ಲಿ ಒಂದು ಕಳವು ಪ್ರಕರಣ ದಾಖಲಾಗಿರುತ್ತದೆ.

ಈ ಕಾರ್ಯಾಚರಣೆಯಲ್ಲಿ ಮಂಗಳೂರು ದಕ್ಷಿಣ ಉಪ ವಿಭಾಗ ಎ.ಸಿ.ಪಿ ಯವರ ಆದೇಶದಂತೆ ರೌಡಿ ನಿಗ್ರಹ ದಳದ ಸಿಬ್ಬಂದಿವರು ಪತ್ತೆ ಕಾರ್ಯದಲ್ಲಿ ಭಾಗವಹಿಸಿದರು


Spread the love