ಮೊಬೈಲ್ ಫೋನ್ ಸುಲಿಗೆ; ಕಾನೂನಿನೊಡನೆ ಸಂಘರ್ಷಕ್ಕಿಳಿದ ಇಬ್ಬರು ಬಾಲಕರ ಬಂಧನ
ಮಂಗಳೂರು: ನಗರದ ಹಲವು ಕಡೆಗಳಲ್ಲಿ ಮೊಬೈಲ್ ಫೋನ್ ಸುಲಿಗೆ ಮಾಡಿದ ಕಾನೂನಿನೊಡನೆ ಸಂಘರ್ಷಕ್ಕಿಳಿದ ಬಾಲಕರಿಬ್ಬರನ್ನು ಪೋಲಿಸರು ಬಂಧಿಸಿದ್ದಾರೆ.
ಸಪ್ಟೆಂಬರ್ 5ರಂದು ಬೆಳಿಗ್ಗೆ 09-00 ಗಂಟೆಗೆ ಪಣಂಬೂರು ಠಾಣಾ ಪಿ.ಎಸ್.ಐ(ಕಾ.ಸು) ಉಮೇಶ್ ಕುಮಾರ್.ಎಂ.ಎನ್ ರವರು ಠಾಣೆಯಲ್ಲಿದ್ದ ಸಮಯ ನಗರದ ಹಲವು ಕಡೆಗಳಲ್ಲಿ ನಡೆದ ಮೊಬೈಲ್ ಫೋನ್ ಸುಲಿಗೆ ಮಾಡಿದ ಯುವಕರಿಬ್ಬರು ಬೈಕಂಪಾಡಿ ಗ್ರಾಮದ ಬೈಕಂಪಾಡಿ ಎಪಿಎಂಸಿ ಮುಖ್ಯ ಪ್ರವೇಶ ದ್ವಾರದ ಬಳಿ ನಿಂತುಕೊಂಡು ಮೊಬೈಲ್ ಫೋನ್ ಗಳನ್ನು ಮಾರಾಟ ಮಾಡಲು ಯತ್ನಿಸುತ್ತಿರುವುದಾಗಿ ಖಚಿತ ಮಾಹಿತಿ ದೊರೆತಂತೆ ಠಾಣಾಧಿಕಾರಿ ಪಿಐ ರಫೀಕ್.ಕೆ.ಎಂ ರವರ ಮುಂದಾಳತ್ವದಲ್ಲಿ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತಲುಪುತ್ತಿದ್ದಂತೆ ಪರಾರಿಯಾಗಲು ಯತ್ನಿಸಿದವರನ್ನು ಸಿಬ್ಬಂದಿಗಳ ಸಹಾಯದಿಂದ ಇಬ್ಬರು ಕಾನೂನಿನೊಡನೆ ಸಂಘರ್ಷಕ್ಕಿಳಿದ ಬಾಲಕರನ್ನು ವಶಕ್ಕೆ ಪಡೆದು ಅವರಿಂದ ನಗರದ ಹಲವು ಕಡೆಗಳಲ್ಲಿ ನಡೆದುಕೊಂಡು ಹೋಗುವ ವ್ಯಕ್ತಿಗಳಿಂದ ಬಲತ್ಕಾರವಾಗಿ ಸುಲಿಗೆ ಮಾಡಿದ ಒಟ್ಟು ಅಂದಾಜು ಮೌಲ್ಯ 75,000/- ರೂ ಬೆಲೆ ಬಾಳುವ ವಿವಿಧ ಕಂಪನಿಯ ಮೊಬೈಲ್ ಫೋನ್ ಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ಅಂದಾಜು ಮೌಲ್ಯ ರೂ.50,000/- ಬೆಲೆ ಬಾಳುವ ದ್ವಿಚಕ್ರ ವಾಹವನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಕಾನೂನಿನೊಡನೆ ಸಂಘರ್ಷಕ್ಕಿಳಿದ ಬಾಲಕರ ಮೇಲೆ ಕಾನೂನು ಕ್ರಮ ಕೈಗೊಂಡಿದ್ದು, ನಗರದ ಹಲವಾರು ಠಾಣೆಗಳಲ್ಲಿ ಇವರ ಮೇಲೆ ಇಂತಹದೇ ಪ್ರಕರಣಗಳು ದಾಖಲಾಗಿ ತನಿಖೆಯಲ್ಲಿರುತ್ತವೆ. ಕಾನೂನಿನೊಡನೆ ಸಂಘರ್ಷಕ್ಕಿಳಿದ ಬಾಲಕರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಟಿ.ಸುರೇಶ್ ಪೊಲೀಸ್ ಆಯುಕ್ತರು, ಮಂಗಳೂರು ನಗರ, ಉಪ-ಪೊಲೀಸ್ ಆಯುಕ್ತರು ಉಮಾ ಪ್ರಶಾಂತ್ ಹಾಗೂ ಮಂಗಳೂರು ನಗರ ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ರಾಜೇಂದ್ರ.ಡಿ.ಎಸ್ ಇವರ ಮಾರ್ಗದರ್ಶನದಲ್ಲಿ ಪಣಂಬೂರುಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ. ರಫೀಕ್.ಕೆ.ಎಂ, ಹಾಗೂ ಪೊಲೀಸ್ ಉಪ-ನಿರೀಕ್ಷಕರಾದ ಉಮೇಶ್ ಕುಮಾರ್.ಎಂ.ಎನ್, ಸಿಬ್ಬಂದಿಯವರಾದ ಚಂದ್ರಹಾಸ ಆಳ್ವ, ರಾಧಾಕೃಷ್ಣ, ಇಸಾಕ್, ಮತ್ತು ಶರಣ್ ಕಾಳಿ ಇವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.