ಮೊಬೈಲ್ ಮೆಡಿಕಲ್ ಯುನಿಟ್ ವೀಕ್ಷಿಸಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್
ಕುಂದಾಪುರ: ಜಿಲ್ಲೆಗೆ ಎರಡು ಮೊಬೈಲ್ ಮೆಡಿಕಲ್ ಯುನಿಟ್ ಮಂಜೂರು ಆಗಿದ್ದು, ಕುಂದಾಪುರದ ಹೆಂಗವಳ್ಳಿ, ಮಡಾಮಕ್ಕಿ, ಅಮಾಸೆಬೈಲಿನಲ್ಲಿ ಕಾರ್ಯನಿರ್ವಹಿಸಲಿದೆ. ಅದೇ ರೀತಿ ಕಾರ್ಕಳದ ನಡ್ಪಾಲು, ಹಬ್ರಿ, ವರಾಂಗ, ಶಿರ್ಲಾಲು, ಈದುವಿನಲ್ಲಿ ಕರ್ತವ್ಯ ನಿರ್ವಹಿಸಲಿದೆ.
ಮೊಬೈಲ್ ಮೆಡಿಕಲ್ ಯುನಿಟ್ಗಳನ್ನು ವೀಕ್ಷಿಸಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಯುನಿಟ್ಗಳು ಕರ್ತವ್ಯ ನಿರ್ವಹಿಸುವ ವೇಳೆ ಅನಿರೀಕ್ಷಿತ ಭೇಟಿ ನೀಡಿ ಕಾರ್ಯನಿರ್ವಹಣೆ ಪರಿಶೀಲಿಸುವುದಾಗಿಯೂ ಹೇಳಿದರು.