ಮೌಲ್ಯ ಮತ್ತು ಸಂಸ್ಕೃತಿ ಜೀವನದ ಅವಿಭಾಜ್ಯ ಅಂಗ: ಡಾ . ಎಂ . ಪ್ರಭಾಕರ ಜೋಶಿ ಅಭಿಮತ

Spread the love

ಮೌಲ್ಯ ಮತ್ತು ಸಂಸ್ಕೃತಿ ಜೀವನದ ಅವಿಭಾಜ್ಯ ಅಂಗ:  ಡಾ . ಎಂ . ಪ್ರಭಾಕರ ಜೋಶಿ ಅಭಿಮತ

ಮೂಡಬಿದ್ರೆ: ಭಾರತೀಯ ಪುರಾಣಗಳು ಮೌಲ್ಯಗಳ ಕಣಜ. ಅವುಗಳಲ್ಲಿ ಪ್ರತಿಪಾದಿಸಿರುವ ಸಾಂಸ್ಕೃತಿಕ ಅಂಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡರೆ ಶ್ರಮ, ತ್ಯಾಗ, ಸಹಕಾರ ಮತ್ತು ಕಲಿಕೆ ಯಂತಹ ಸದ್ಗುಣಗಳು ತಾನಾಗಿಯೇ ಬರುತ್ತವೆ. ಇತಿಹಾಸ ಪುರುಷರ ಮತ್ತು ನಾಯಕರ ಜೀವನವು ಯುವಕರಿಗೆ ಆದರ್ಶವಾಗಿದೆ. ಆಧುನಿಕ ಮ್ಯಾನೇಜ್ಮೆಂಟ್ ವಿಷಯಗಳು ಕಲಿಸುವುದು ಇದೇ ತತ್ವಗಳನ್ನು ಎಂದು ಹಿರಿಯ ಯಕ್ಷಗಾನ ವಿದ್ವಾಂಸ ಮತ್ತು ವಿಮರ್ಶಕ ಡಾ.ಎಂ. ಪ್ರಭಾಕರ ಜೋಶಿ ತಿಳಿಸಿದರು.

ಅವರು ಮಿಜಾರು ಆಳ್ವಾಸ್ ಎಂಬಿಎ ವಿಭಾಗದ ವತಿಯಿಂದ ಆಯೋಜಿಸಲ್ಪಟ್ಟ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು .

ನಮಗೆ ಮಾರ್ಗದರ್ಶಕವಾಗಿರುವ ಇತಿಹಾಸ, ಪುರಾಣ ಮತ್ತು ಗ್ರಂಥಗಳನ್ನು ಸರಿಯಾಗಿ ಅಧ್ಯಯನ ಮಾಡುವ ಅವಶ್ಯಕತೆಯಿದೆ. ಇವುಗಳಲ್ಲಿರುವ ನೀತಿಗಳು ನಮ್ಮನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯಲು ಸಹಕಾರಿ ಎಂದು ಅವರು ಕರೆಯಿತ್ತರು.

ಎಂಬಿಎ ವಿಭಾಗದ ಡೀನ್ ಪ್ರೊ. ಪಿ. ರಾಮಕೃಷ್ಣ ಚಡಗ ಅತಿಥಿಗಳನ್ನು ಸ್ವಾಗತಿಸಿದರು. ಇಂದಿನ ಶಿಕ್ಷಣದಲ್ಲಿ ಮೌಲ್ಯಗಳ ಕೊರತೆಯಿದ್ದು ಅಧ್ಯಾಪಕರು ಇದಕ್ಕೆ ಹೆಚ್ಚಿನ ಒತ್ತುಕೊಡಬೇಕು ಎಂದು ಅವರು ಸಲಹೆಯಿತ್ತರು. ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್ ಅತಿಥಿಗಳನ್ನು ಗೌರವಿಸಿದರು. ಕಾರ್ಯಕ್ರಮ ಸಂಯೋಜಕ ಗುರುದತ್ ಸೋಮಯಾಜಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


Spread the love