ಮ.ನ.ಪಾ ನೌಕರರಿಗೆ ಸಮವಸ್ತ್ರ ಖಡ್ಡಾಯಗೊಳಿಸಲು ಜೆ.ಡಿ.ಯು ಅಗ್ರಹ
ಮಂಗಳೂರು: ಮಂಗಳೂರು ಮಹಾನಗರಪಾಲಿಕೆಯಲ್ಲಿ ಸಾರ್ವಜನಿಕರಿಗೆ ಅಧಿಕಾರಿಗಳು ಮತ್ತು ನೌಕರರನ್ನು ಗುರುತಿಸುವುದು ಬಹಳ ಕಷ್ಟವಾಗುತ್ತಿದೆ. ಮ.ನ.ಪಾ ನೌಕರರಿಗೆ ಹಾಗೂ ಅಧಿಕಾರಿಗಳಿಗೆ ಸಮವಸ್ತ್ರದ ವ್ಯವಸ್ಥೆ ಮಾಡಿದರೆ ಮಹಾನಗರಪಾಲಿಕೆ ಕಚೇರಿಯಲ್ಲಿ ಹಾಗೂ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಅವರನ್ನು ಗುರುತಿಸಲು ಸುಲಭವಾಗುತ್ತದೆ. ಸರಕಾರಿ ಹಾಗೂ ಸರಕಾರೇತರ ಹೆಚ್ಚಿನ ಸಂಸ್ಥೆಗಳಲ್ಲಿ ತಮ್ಮ ನೌಕರರಿಗೆ ಸಮವಸ್ತ್ರದ ವ್ಯವಸ್ಥೆಯಿದೆ. ಆದುದರಿಂದ ಸಾರ್ವಜನಿಕರ ಹಿತದೃಷ್ಠಿಯಿಂದ ಮ.ನ.ಪಾ ನೌಕರರಿಗೆ ಹಾಗೂ ಅಧಿಕಾರಿಗಳಿಗೆ ಶಿಸ್ತುಬದ್ಧವಾದ ಸಮವಸ್ತ್ರ ಧರಿಸಲು ವ್ಯವಸ್ಥೆಯನ್ನು ಕಡ್ಡಾಯಗೊಳಿಸಬೇಕೆಂದು ಜೆ.ಡಿ.ಯು (ಸಂಯುಕ್ತ ಜನತಾದಳ) ಪಕ್ಷದ ದಕ್ಷಿಣ, ಕನ್ನಡ ಜಿಲ್ಲಾ ಮುಖಂಡರಾದ ಸುಪ್ರಿತ್ ಕುಮಾರ್ ಪೂಜಾರಿ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.