ಮ0ಗಳೂರು : ಪಿಲಿಕುಳ ದೋಣಿ ವಿಹಾರ ಕೇಂದ್ರದಲ್ಲಿರುವ ಕೆರೆಯಲ್ಲಿ ರಾಡ್ ಬಳಸಿ ಗಾಳ ಹಾಕಿ ಮೀನು ಹಿಡಿಯುವ ಆ್ಯಂಗ್ಲಿಂಗ್(ಗಾಳ ಶಿಕಾರಿ) ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಆ್ಯಂಗ್ಲಿಂಗ್ ಉದ್ಘಾಟನೆಯನ್ನು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ ಯವರು ಮಾ. 6 ರಂದು ಪೂರ್ವಾಹ್ನ 10 ಗಂಟೆಗೆ ಪಿಲಿಕುಳದ ದೋಣಿ ವಿಹಾರ ಕೇಂದ್ರದಲ್ಲಿ ನೆರವೇರಿಸಲಿರುವರು.
ಕರ್ನಾಟಕ ಮೀನು ಅಭಿವೃಧ್ದಿ ನಿಗಮದಿಂದ ಮೊಬೈಲ್ ಮತ್ಸ್ಯದರ್ಶಿನಿ (ಮೊಬೈಲ್ ಕ್ಯಾಂಟಿನ್) ವ್ಯವಸ್ಥೆ ಕೂಡಾ ಮಾಡಲಾಗಿದೆ. ಸ್ಥಳದಲ್ಲೇ ತಯಾರಿಸಿದ ಮೀನಿನ ಖಾದ್ಯಗಳನ್ನು ಸವಿಯಬಹುದು. ವಿವಿಧ ಜಾತಿಯ ಮೀನುಗಳ ಪ್ರದರ್ಶನ ಮತ್ತು ಮಾರಾಟ ಕೂಡಾ ಇದೆ.
ರಾಷ್ಟ್ರೀಯ ಮತ್ಸ್ಯಮೇಳ-2016 ರ ಅಂಗವಾಗಿ ಆ್ಯಂಗ್ಲಿಂಗ್ ಸ್ಪರ್ಧೆ ಏರ್ಪಡಿಸಲಾಗಿದೆ. ಮೀನು ಪ್ರ್ರಿಯರು ಹಾಗೂ ಆ್ಯಂಗ್ಲಿಂಗ್ ಪ್ರಿಯರು ಈ ಸುವರ್ಣವಕಾಶವನ್ನು ಉಪಯೋಗಿಸಿಕೊಳ್ಳಲು ಪ್ರಕಟಣೆ ತಿಳಿಸಿದೆ.
ಮ0ಗಳೂರು : ಪಿಲಿಕುಳ ದೋಣಿ ವಿಹಾರ ಕೇಂದ್ರದಲ್ಲಿ 6ರಂದು ಗಾಳ ಶಿಕಾರಿ
Spread the love
Spread the love