ಯಂಗ್ ಮೆನ್ಸ್ ಬೋವಿ ಅಸೋಸಿಯೇಶನ್ ನ 82ನೇ ವಾರ್ಷಿಕೋತ್ಸವ

Spread the love

ಯಂಗ್ ಮೆನ್ಸ್ ಬೋವಿ ಅಸೋಸಿಯೇಶನ್ ನ 82ನೇ ವಾರ್ಷಿಕೋತ್ಸವ

ಮುಂಬಯಿ : ನಾನು ಮೂಲತ: ಉಪ್ಪಳದ ಐಲದವನು ಎನ್ನಲು ಅಭಿಮಾನವಾಗುತ್ತಿದೆ. ಕರಾವಳಿಯ ಬೋವಿ ಸಮುದಾಯದವರು 82 ವರ್ಷಗಳ ಹಿಂದೆಯೇ ಈ ಸಂಘಟನೆಯನ್ನು ಸ್ಥಾಪಿಸಿ ಸಮಾಜ ಬಾಂಧವರಲ್ಲಿ ಒಗ್ಗಟ್ಟನ್ನು ನಿರ್ಮಿಸಿರುವುದನ್ನು ಇಲ್ಲಿ ಕಾಣಬಹುದು. ಶ್ರಮ ಜೀವಿಗಳಾದ ಈ ಸಮಜ ಬಾಂಧವರು ಧೈರ್ಯಶಾಲಿಗಲು. ಸಂಘಟನೆ ಇದ್ದಲ್ಲಿ ಅಭಿವೃದ್ದಿ ಸಾದ್ಯ. ಶತಮಾನೋತ್ಸವಕ್ಕೆ ಮೊದಲೇ ವೈ.ಯಂ.ಬಿ.ಎ. ಯ ಸಮಾಜ ಭವನ ನಿರ್ಮಾಣಗೊಳ್ಳಲಿ, ಎಂದು ನಗರದ ಜನಪ್ರಿಯ ಉಧ್ಯಮಿ ಕೆ. ಡಿ. ಶೆಟ್ಟಿಯವರು ಅಭಿಪ್ರಾಯಪಟ್ಟರು.

ನ. 25ರಂದು ಸಂತಾಕ್ರೂಸ್ ಬಿಲ್ಲವ ಭವನದ ಸಭಾಗೃಹದಲ್ಲಿ ನಡೆದ ದಿ. ಯಂಗ್ ಮೆನ್ಸ್ ಬೋವಿ ಅಸೋಸಿಯೇಶನ್ ನ 82ನೇ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಯುವಜನಾಂಗವನ್ನುದ್ದೇಶಿಸಿ ಮಾತನಾಡುತ್ತಾ ಕೆ. ಡಿ. ಶೆಟ್ಟಿಯವರು ನಮ್ಮ ತಾಯಿ ತಂದೆಯವರು ನಮಗೆ ಮೊದಲ ದೇವರು. ಮಕ್ಕಳನ್ನು ನಮ್ಮ ಮಾತೃಬಾಷೆಯತ್ತ ಕೊಂಡೊಯ್ಯಬೇಕು. ಇಂದಿನ ಸಮಾರಂಭದಲ್ಲಿ ಕನ್ನಡದಲ್ಲಿ ಹರಿಕಥೆಯನ್ನು ನಡೆಸಿಕೊಟ್ಟ ಎಳೆಯ ಹೆಣ್ಮಗಳು ಬೋವಿ ಸಮಾಜದ ಕಣ್ಮಣಿ, ಎಂದರು.

ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಮುಖ್ಯ ಬೋವಿ ಸಮುದಾಯ ಸಭಾದ ಅಧ್ಯಕ್ಷ ಆನಂದ ಕೆ. ಐಲ್ ಅವರು ಮಾತನಾಡುತ್ತಾ ನಾವು ಮೊದಲು ಮುಂಬಯಿಗಾಗಮಿಸಿದ ಅಂದಿನ ಕಾಲದಲ್ಲಿ ವೈ.ಯಂ.ಬಿ.ಎ. ಯ ಮೂಲಕ ಇಲ್ಲಿ ನಮ್ಮವರನ್ನು ಕಾಣುವಂತಾಯಿತು. ಮಕ್ಕಳಿಗೆ ಮೊಯಾ ಸಂಸ್ಕೃತಿಯನ್ನು ಅರಿಯಲು ಇಂತಹ ಸಂಘಟನೆ ಅಗತ್ಯ. ನಮ್ಮ ಮಕ್ಕಳೊಂದಿಗೆ ನಾವು ನಮ್ಮ ಮಾತೃಬಾಷೆಯಲ್ಲಿ ಮಾತನಾಡಬೇಕು. ಶಾಂತಿಯುತ ಬದುಕಿಗೆ ನಮ್ಮ ಸಂಸ್ಕೃತಿಯ ಅರಿವು ಅಗತ್ಯ. ನಮ್ಮ ಸಂಸ್ಕೃತಿಯು ಇತರರ ಸಂಸ್ಕೃತಿಗಿಂತ ಭಿನ್ನವಾಗಿದೆ. ನಮ್ಮ ಸಮುದಾಯಕ್ಕೆ ನಮ್ಮ ನಾಡಿನಾಡಿನಲ್ಲಿ ಮೂರು ಶಾಲೆಗಳಿದ್ದು ನಮ್ಮಲ್ಲಿ ಹೆಚ್ಚಿನವರು ವಿದ್ಯಾವಂತರಾಗಿದ್ದಾರೆ. ಅತೀ ಅಧಿಕ ಶಿಕ್ಕಕರು ನಮ್ಮ ಸಮಾಜದಲ್ಲಿ ಇದ್ದಾರೆ. ನಮ್ಮ ಸಮಾಜ ಬಾಂದವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಒಗ್ಗೂಡಿಸೋಣ ಎಂದರು.

ಈ ಸಂದರ್ಭದಲ್ಲಿ ವೈ.ಯಂ.ಬಿ.ಎ. ಯ ಮಾಜಿ ಅಧ್ಯಕ್ಷರಾದ ದೇವದಾಸ ಉಚ್ಚಿಲ್ ದಂಪತಿ ಮತ್ತು ಪುರುಷೋತ್ತಮ ಕೆ ಐಲ್ ದಂಪತಿಯನ್ನು ಸನ್ಮಾನಿಸಲಾಯಿತು. ಸನ್ಮಾನ ಪತ್ರವನ್ನು ಎ. ಕೆ. ಯಶವಂತ ಮತ್ತು ತಾರನಾಥ ಉಚ್ಚಿಲ್ ವಾಚಿಸಿದರು.

ಸನ್ಮಾನಕ್ಕೆ ಉತ್ತರಿಸಿದ ದೇವದಾಸ ಉಚ್ಚಿಲ್ ಅವರು ಮಾತನಾಡುತ್ತಾ ಇಂದಿನ ಸಭೆಯಲ್ಲಿ ಸೇರಿರುವ ಸಮಾಜ ಬಾಂಧವರ ಸಂಖ್ಯೆಯನ್ನು ನೋಡಿ ಸಂತೋಷವಾಗುತ್ತಿದೆ. ಜನಬಲ ಅಧಿಕವಾದಂತೆ ಸಂಘಟನೆ ಬಲವಾಗುತ್ತದೆ. ಈ ಸಂಘಟನೆಯು ಹೆಚ್ಚೆಚ್ಚು ಕಾರ್ಯಕ್ರಮಗಳನ್ನು ಮಾಡುವಂತಾಗಲಿ ಎಂದು ಶುಭ ಹಾರೈಸಿದರು. ಪುರುಷೋತ್ತಮ ಕೆ ಐಲ್ ಮಾತನಾಡುತ್ತಾ ಕಳೆದ 82 ವರ್ಷಗಳಲ್ಲಿ ಕೇವಲ ಕೆಲವೇ ಮಂದಿಗಳು ಇದರಲ್ಲಿ ಅಧ್ಯಕ್ಷರಾಗಿ ದುಡಿದಿದ್ದು ಅದರಲ್ಲಿ ನಾನೂ ಒಬ್ಬನು ಎನ್ನಲು ಅಭಿಮಾನವಾಗುತ್ತಿದೆ. ಇಂದಿನ ಸನ್ಮಾನವ ದೇವರ ಕೊಡುಗೆಯಾಗಿದ್ದು ಯುವ ಜನಾಂಗವು ಈ ಸಂಘಟನೆಯನ್ನು ಇನ್ನು ಉತ್ತಮವಾಗಿ ಮುಂದುವರಿಸಲಿ ಎಂದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಕೆ.ಡಿ.ಶೆಟ್ಟಿ ಮತ್ತು ಸರಿತಾ ಶೆಟ್ಟಿಯನ್ನು ಮತ್ತು ಆನಂದ ಕೆ. ಐಲ್ ಅವರನ್ನು ಗೌರವಿಸಿದರು.
ಊರಿಂದ ಆಗಮಿಸಿದ ಮೋಯಾ ಸಮುದಾಯದ ಯುವ ಪ್ರತಿಭೆ ಕು. ಪೂಜಾ ವಾಸುದೇವ ಐಲ್ ಅವರು ಹರಿಕಥೆಯಿಂದ ಸಭಿಕರ ಹಾಗೂ ಅತಿಥಿಗಳ ಮನಗೆದ್ದರು.

ಅಧ್ಯಕ್ಷತೆಯನ್ನು ವಹಿಸಿದ ಯಂಗ್ ಮೆನ್ಸ್ ಬೋವಿ ಅಸೋಸಿಯೇಶನ್ ನ ಅಧ್ಯಕ್ಷ ಚಂದ್ರಕಾಂತ್ ಎಸ್. ಉಚ್ಚಿಲ್ ಮಾತನಾಡುತ್ತಾ ಸಮಾಜದ ಯುವಕರು ಹಾಗೂ ದಾನಿಗಳು ಈ ಸಂಘಟನೆಯಲ್ಲಿ ಕ್ರೀಯಾಶೀಲರಾಗಬೇಕೆಂದು ವಿನಂತಿಸಿದರು,

ಉಪಾಧ್ಯಕ್ಷೆ ಯಶೋದ ಬಟ್ಟಪ್ಪಾಡಿ ಅವರು ಅಥಿತಿಗಳನ್ನು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರವಿರಾಜ್ ಉಚ್ಚಿಲ್ ವೈ.ಯಂ.ಬಿ.ಎ. ಯ ಕಾರ್ಯಚಟುವಟಿಕೆಗಳ ಮಾಹಿತಿಯಿತ್ತರು. ಕೃಪಾಕರ್ ಕುಂಬ್ಳೆ ಮತ್ತು ದೇವೆಂದ್ರನಾಥ್ ಅಯೂರ್ ಅತಿಗಳನ್ನು ಪರಿಚಯಿಸಿದರು.

ಸಮಾರಂಭಕ್ಕೆ ವಿವಿಧ ರೀತಿಯಲ್ಲಿ ಸಹಕರಿಸಿದ ಗಣ್ಯರನ್ನು, ಶೈಕ್ಷಣಿಕ ಕ್ಷೇತ್ರದಲ್ಲಿ ಯಶಸ್ವಿಯಾಗಿರುವ ಸಮಾಜದ ಪ್ರತಿಭಾವಂತರನ್ನು ಗೌರವಿಸಲಾಯಿತು.

ಸಭಾಕಾರ್ಯಕ್ರಮವನ್ನು ಸಚ್ಚಿದಾನಂದ ಐಲ್, ಜಯಂತಿ ಎಸ್. ಐಲ್ ನಿರೂಪಿಸಿದರು. ಸ್ನೇಹ ಉಚ್ಚಿಲ್, ಸುಭಾಶ್ಚಂದ್ರ ಉಚ್ಚಿಲ್, ವಿವೇಕ್ ಐಲ್, ಧನ್ ರಾಜ್ ಉಚ್ಚಿಲ್, ದೇವೆಂದ್ರನಾಥ್ ಅಯೂರ್, ಸತೀಶ್ ಐಲ್, ಧನ್ಯಶ್ರೀ ಐಲ್, ಸ್ವೇತ ಉಚ್ಚಿಲ್, ಮಿಸ್ತಿ ಖಡೆ, ದೇವದಾಶ್ ಉಚ್ಚಿಲ್, ಕುಮಾರಯ್ಯ ಐಲ್, ರೂಪಾ ಉಚ್ಚಿಲ್ ಮೊದಲಾದವರು ಸಹಕರಿಸಿದರು. ವಿವೇಕ್ ಐಲ್ ಕೊನೆಯಲ್ಲಿ ಅಭಾರ ಮನ್ನಿಸಿದರು.

ದಿನ ಪೂರ್ತಿ ನಡೆದ ಈ ಸಮಾರಂಭದಲ್ಲಿ ಸಮಾಜದ ಪ್ರತಿಭೆಗಳಿಂದ ನೃತ್ಯ ವೈಭವ, ರಸಮಂಜರಿ ಹಾಗೂ ಗುರುನಾರಾಯಣ ಯಕ್ಷಗಾನ ಮಂಡಳಿಯವರಿಂದ ವಿದ್ಯನ್ಮತಿ ಕಲ್ಯಾಣ ಯಕ್ಷಗಾನ ಪ್ರದರ್ಶನವು ನಡೆಯಿತು.

ವರದಿ : ಈಶ್ವರ ಎಂ. ಐಲ್
ಚಿತ್ರ : ಸುಭಾಷ್ ಶಿರಿಯಾ


Spread the love