Home Mangalorean News Kannada News ಯಂತ್ರದ ಸಹಾಯದಿಂದ ತೆಂಗಿನ ಮರ ಹತ್ತುವ ಪ್ರಾತ್ಯಕ್ಷಿತೆ

ಯಂತ್ರದ ಸಹಾಯದಿಂದ ತೆಂಗಿನ ಮರ ಹತ್ತುವ ಪ್ರಾತ್ಯಕ್ಷಿತೆ

Spread the love

ಯಂತ್ರದ ಸಹಾಯದಿಂದ ತೆಂಗಿನ ಮರ ಹತ್ತುವ ಪ್ರಾತ್ಯಕ್ಷಿತೆ

ಉಡುಪಿ: ಯಾವುದೇ ಸಂದರ್ಭಗಳಲ್ಲಿ ತೆಂಗಿನ ಮರವನ್ನು ಲೀಲಾಜಾಲವಾಗಿ ಗ್ರಾಮ ಪಂಚಾಯತು ಸದಸ್ಯ ಪ್ರಾಣೇಶ್ ಹೆಜಮಾಡಿ ಯಂತ್ರದ ಸಹಾಯದಿಂದ ಹತ್ತಬಹುದು ಎಂದು ಪ್ರಾತ್ಯಕ್ಷತೆಯಲ್ಲಿ ತೋರಿಸಿ ಕೊಟ್ಟಿದ್ದಾರೆ.
ಇತ್ತೀಚಿನ ದಿನಗಳಲ್ಲಿ ತೆಂಗಿನ ಮರ ಹತ್ತಿ ತೆಂಗಿನ ಕಾಯಿ ಹಾಗೂ ಸೀಯಾಳ ಕೇಳವವರು ವಿರಳವಾಗಿದ್ದು, ಇದು ಒಂದು ಸ್ವ ಉದ್ಯೋಗ ಎಂದು ಹೆಜಮಾಡಿಯ ಪ್ರಾಣೇಶ್ ತೋರಿಸಿ ಕೊಟ್ಟಿದ್ದಾರೆ.

ಇದರಿಂದ ಯುವ ಪೀಳಿಗೆ ತೆಂಗಿನ ಕಾಯಿ ಹಾಗೂ ಸೀಯಾಳ ತೆಗೆಯುವವರಲ್ಲಿ ಉತ್ಸಾಹ ತೋರಬಹುದು ಈ ಬಗ್ಗೆ ತೋಟಗಾರಿಕಾ ಇಲಾಖೆ, ಹಾಗೂ ಜಿಲ್ಲಾ ಪಂಚಾಯತ್ ಹಾಗೂ ವಿವಿಧ ಸಂಘಟನೆಗಳು ತೆಂಗಿನ ಮರಹತ್ತುವ ಪ್ರಾತ್ಯಕ್ಷತೆಯನ್ನು ಮುಂದಿನ ಬುಧವಾರ ಹೆಜಮಾಡಿ ಹಾಲು ಉತ್ಪಾದಕರ ಸಭಾ ಭವನದಲ್ಲಿ ಹಮ್ಮಿ ಕೊಂಡಿದೆ. ಈ ಬಗ್ಗೆ ಆಸಕ್ತ್ತರು ಭಾಗವಹಿಸಬಹುದು.

ಈ ಸಂದರ್ಭ ಪ್ರಾಣೇಶ್ ಹೆಜಮಾಡಿ ಮಾತನಾಡಿ, ನಾನು ಎಸ್ಎಸ್ಎಲ್ಸಿ ರಜೆಯಲ್ಲಿ ನಮ್ಮ ಮನೆಯ ತೆಂಗಿನ ಮರವನ್ನು ಹತ್ತಲು ಪ್ರಾರಂಭಿಸಿದ್ದೆ. ಆಗ ತೆಂಗಿನ ಮರ ಹತ್ತ್ತಲು ಕೈ ಹಾಗೂ ಕಾಲಿಗೆ ಹಗ್ಗವನ್ನು ಉಪಯೋಗ ಮಾಡುತ್ತಿದ್ದೆ. 1991ರಲ್ಲಿ ಕೇರಳದ ಜೋಸೆಫ್ ಎಂಬವರು ಬ್ರಹ್ಮಾವರದ ರುಡ್ಸೆಡ್ ಎಂಬ ಸಂಸ್ಥೆ ವಿವಿಧ ಸಂಘಟನೆಯ ಸಹಯೋಗದಲ್ಲಿ ತೆಂಗಿನ ಮರ ಹತ್ತುವ ತರಬೇತಿ ಎರ್ಪಡಿಸಿತ್ತು. ಆ ತರಬೇತಿಯಲ್ಲಿ ಪ್ರಾರಂಭಿಸಿದ ನಂತರ ನಾನು ನಿರಂತರವಾಗಿ ಯಂತ್ರದಿಂದಲೇ ತೆಂಗಿನ ಕಾಯನ್ನು ಕೊಯ್ಯಲು ಪಾರಂಭ ಮಾಡಿದ್ದೇನೆ. ಅಂದಿನಿಂದ ಇಂದಿನವರೆಗೆ ಮರ ಹತ್ತುವ ಯಂತ್ರದಿಂದಲೇ ನಾನು ತೆಂಗಿನ ಮರ ಏರುತ್ತೇನೆ. ಈ ಯಂತ್ರದಿಂದ ಮಳೆಗಾಲದಲ್ಲಿ ಪಾಚಿ ಹಿಡಿದ ಮರಕ್ಕೂ ಹತ್ತಲು ಯಾವುದೇ ಅಪಾಯವಿಲ್ಲ. ಇದು ಅತ್ಯಂತ ಸುಲಭದ ಮಾರ್ಗ.
ಈಗ ಹೆಚ್ಚಾಗಿ ಹಳಬರು ಮಾತ್ರ ತೆಂಗಿನ ಮರ ಹತ್ತುತ್ತಿದ್ದಾರೆ. ಆದರೆ ಯುವ ಪೀಳಿಗೆ ತರಬೇತಿ ಪಡೆದು ಈ ಕಾರ್ಯ ದಲ್ಲಿ ಕೈ ಜೋಡಿಸಬೇಕಿದೆ. ಈ ಯಂತ್ರವನ್ನು ಉಪಯೋಗಿಸಿ ಬೆಳಿಗ್ಗೆಯಿಂದ ಮದ್ಯಾಹ್ನದವರೆಗೆ ಒಂದರಿಂದ ಒಂದೂವರೆ ಸಾವಿರ ರುಪಾಯಿಯನ್ನು ಗಳಿಸಬಹುದು. ತೆಂಗಿನಮರವನ್ನು ಹತ್ತಿ ಗಾಯಗೊಂಡವರೂ ಹಾಗೂ ಮೃತ ಪಟ್ಟವರಿದ್ದಾರೆ. ಆದರೆ ಅವರಿಗೆ ಸರಕಾರ ದಿಂದ ಯಾವುದೇ ಪ್ರಯೋಜನ ಆಗಿಲ್ಲ. ಆ ಸಂಘಟಿತ ಕಾರ್ಮಿಕರಲ್ಲಿ ತೆಂಗಿನ ಕಾಯಿ ಕೀಳುವವರು ಬರುತ್ತಿಲ್ಲ. ಇದನ್ನು ಎಲ್ಲಾ ಕಡೆ ಹೇಳಿದರೂ ಯಾವುದೇ ಪ್ರಯೋಜನ ಆಗಿಲ್ಲ. ಮುಂದಿನ ದಿನಗಳಲ್ಲಿ ತೆಂಗಿನ ಮರ ಹತ್ತುವವರನ್ನು ಸಂಘಟಿಸಿ, ಅವರಿಗೆ ಪ್ರೋತ್ಸಾಹ ನೀಡಿದಲ್ಲಿ ಸರಕಾರದಲ್ಲಿ ಸವಲತ್ತು ಸಿಗ ಬಹುದು ಎಂದರು.


Spread the love

Exit mobile version