Home Mangalorean News Kannada News ಯಶಸ್ವಿ ಕಂಡ ವೀರರಾಣಿ ಅಬ್ಬಕ್ಕ ಉತ್ಸವ 

ಯಶಸ್ವಿ ಕಂಡ ವೀರರಾಣಿ ಅಬ್ಬಕ್ಕ ಉತ್ಸವ 

Spread the love

ಯಶಸ್ವಿ ಕಂಡ ವೀರರಾಣಿ ಅಬ್ಬಕ್ಕ ಉತ್ಸವ 

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ನಡೆದ ಈ ವರ್ಷದ ವೀರರಾಣಿ ಅಬ್ಬಕ್ಕ ಉತ್ಸವ ಭಾನುವಾರ ಯಶಸ್ವಿಯಾಗಿ ತೆರೆ ಕಂಡಿತು.

ದಕ್ಷಿಣ ಕನ್ನಡ ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ನಡೆದ ಈ ಉತ್ಸವದ ಪ್ರಯುಕ್ತ ನಡೆದ ವೈವಿಧ್ಯಮಯ ಕಾರ್ಯಕ್ರಮಗಳು, ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು, ವಿಚಾರಸಂಕಿರಣ, ಕ್ರೀಡೋತ್ಸವ, ಸಾಂಸ್ಕøತಿಕ ಕಾರ್ಯಕ್ರಮಗಳು ವೀರರಾಣಿ ಅಬ್ಬಕ್ಕಳ ಕುರಿತು ಸಾರ್ವಜನಿಕರಿಗೆ ಹೆಚ್ಚು ಮಾಹಿತಿ ಹಾಗೂ ಅರಿವು ಮೂಡಿಸುವಲ್ಲಿ ಫಲಪ್ರದವಾಗಿದೆ.

ಈ ಬಾರಿ ಅಬ್ಬಕ್ಕ ಉತ್ಸವದ ಅಂಗವಾಗಿ ಕ್ರೀಡೋತ್ಸವ, ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ “ರಾಣಿ ಅಬ್ಬಕ್ಕಳ ಹೋರಾಟದ ದೃಶ್ಯ” ಕುರಿತು ಚಿತ್ರಕಲಾ ಸ್ಪರ್ಧೆ, “ರಾಣಿ ಅಬ್ಬಕ್ಕಳ ಇತಿಹಾಸದ ಗುರುತುಗಳು” ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಅಬ್ಬಕ್ಕಳ ಬಗ್ಗೆ ಜ್ಞಾನವನ್ನು ವಿದ್ಯಾರ್ಥಿಗಳಿಗೆ ವಿಸ್ತರಿಸುವಲ್ಲಿ ಜಿಲ್ಲಾಡಳಿತ ಮುತುವರ್ಜಿ ವಹಿಸಿತ್ತು. ಜಿಲ್ಲೆಯ ಎಲ್ಲಾ ತಾಲೂಕುಗಳಿಂದಲೂ ಈ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅದೇರೀತಿ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ರಾಣಿ ಅಬ್ಬಕ್ಕಳ ಇತಿಹಾಸ ಕುರಿತು ಭಾಷಣ ಹಾಗೂ ನಾಟಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ನಗರದ ವಿಶ್ವವಿದ್ಯಾಲಯ ಕಾಲೇಜಿನಲ್ಲಿ “ತುಳುನಾಡಿನ ರಾಣಿಯರು” ಕುರಿತ ವಿಚಾರಸಂಕಿರಣವು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಳಿದ ರಾಣಿಯರು, ಮಹಿಳಾ ಆಡಳಿತಗಾರರತ್ತ ವರ್ತಮಾನದಲ್ಲಿ ಬೆಳಕು ಚೆಲ್ಲಿದೆ. ಬಹುಭಾμÁ ಕವಿ ಗೋಷ್ಠಿಯು ಅಬ್ಬಕ್ಕಳ ಹೋರಾಟ, ಸಾಧನೆಗಳನ್ನು ಬಹುಭಾμÉಗಳಲ್ಲಿ ಮೂಡಿಸಿದವು.

ಕಳೆದ ಒಂದು ವಾರದಲ್ಲಿ ಈ ಎಲ್ಲಾ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಿ, ವಾರವಿಡೀ ರಾಣಿ ಅಬ್ಬಕ್ಕಳ ಕುರಿತು ಅರಿವು ಮೂಡಿಸುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ.

ಅಸೈಗೋಳಿಯಲ್ಲಿ ಎರಡು ದಿನಗಳ ಕಾಲ ನಡೆದ ವೀರರಾಣಿ ಅಬ್ಬಕ್ಕ ಉತ್ಸವದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರನ್ನು ಆಕರ್ಷಿಸಿದವು. ರಾಜ್ಯದ ಖ್ಯಾತ ಕಲಾವಿದೆ ಸಂಗೀತ ಕಟ್ಟಿಯವರ ಸಂಗೀತ ಕಾರ್ಯಕ್ರಮ, ಭೋಜರಾಜ ವಾಮಂಜೂರು ಹಾಸ್ಯ, ವಿವಿಧ ಖ್ಯಾತ ಕಲಾವಿದರ ನೃತ್ಯ, ರೂಪಕ, ನಾಟಕ, ರಸಮಂಜರಿ ಕಾರ್ಯಕ್ರಮಗಳು ಪ್ರೇಕ್ಷಕರನ್ನು ಆಕರ್ಷಿಸಿದವು. ಸ್ಥಳೀಯ ಕಲಾವಿದರೊಂದಿಗೆ ರಾಜ್ಯದ ಖ್ಯಾತಿವೆತ್ತ ಕಲಾವಿದರೂ, ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಉತ್ಸವ ಹೆಚ್ಚು ಆಕರ್ಷಕಯುತವಾಗಿ ಮೂಡಿ ಬಂತು.

ಅಬ್ಬಕ್ಕ ಉತ್ಸವದ ಉದ್ಘಾಟನಾ ಪೂರ್ವ ದೇರಳಕಟ್ಟೆಯಿಂದ ಅಸೈಗೋಳಿವರೆಗೆ ನಡೆದ ಸಾಂಸ್ಕೃತಿಕ ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಕಲಾ ಪ್ರಕಾರದ ತಂಡಗಳು ಭಾಗವಹಿಸಿದ್ದವು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ತುಳಸೀ ಗೌಡ ಹಾಗೂ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಿ ಗೌರವಿಸುವ ಮೂಲಕ ಉತ್ಸವ ಇನ್ನಷ್ಟು ಅರ್ಥಪೂರ್ಣವಾಗಿ ಮೂಡಿಬಂತು.

ವೀರರಾಣಿ ಅಬ್ಬಕ್ಕ ಉತ್ಸವ ಪ್ರಯುಕ್ತ ಪ್ರತಿ ವರ್ಷ ಇಬ್ಬರು ಮಹಿಳಾ ಸಾಧಕರಿಗೆ ಅಬ್ಬಕ್ಕ ಪ್ರಶಸ್ತಿ ನೀಡಲಾಗುತ್ತಿದೆ. ಮುಂದಿನ ವರ್ಷದಿಂದ ಈ ಪ್ರಶಸ್ತಿಗೆ ಮಾನದಂಡಗಳನ್ನು ರೂಪಿಸಿ, ರಾಜ್ಯಮಟ್ಟದಲ್ಲಿ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಈಗಾಗಲೇ ಪ್ರಕಟಿಸಿದ್ದಾರೆ.

ಕಳೆದ ಹಲವು ವರ್ಷಗಳಿಂದ ಅಬ್ಬಕ್ಕ ಉತ್ಸವ ಆಚರಿಸುತ್ತಿದ್ದರೂ, ಅಬ್ಬಕ್ಕ ಉತ್ಸವ ಅಧಿಕೃತ ಲಾಂಛನ ಇರಲಿಲ್ಲ. ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಅವರು ವಿಶೇಷ ಆಸಕ್ತಿ ವಹಿಸಿ, ಜಿಲ್ಲೆಯ ಖ್ಯಾತ ಚಿತ್ರ ಕಲಾವಿದರನ್ನು ಕರೆಸಿ, ಅಬ್ಬಕ್ಕ ಉತ್ಸವಕ್ಕೆ ಅಧಿಕೃತ ಲಾಂಛನ ಸಿದ್ಧಗೊಳಿಸಿದರು. ಅದನ್ನು ಈ ಸಲದ ಅಬ್ಬಕ್ಕ ಉತ್ಸವದಲ್ಲಿಯೇ ಅನಾವರಣಗೊಳಿಸಲಾಯಿತು.

ಪ್ರಸಕ್ತ ವರ್ಷ ವೀರರಾಣಿ ಅಬ್ಬಕ್ಕ ಉತ್ಸವವನ್ನು ಜಿಲ್ಲಾಡಳಿತವೇ ಸ್ಥಳೀಯರ ಸಹಕಾರದೊಂದಿಗೆ ನೇರವಾಗಿ ಉಸ್ತುವಾರಿ ವಹಿಸಿ ನಿರ್ವಹಿಸಿದೆ. ಉತ್ಸವದ ಖರ್ಚುವೆಚ್ಚಗಳನ್ನು ಜಿಲ್ಲಾಧಿಕಾರಿ ಕಚೇರಿಯಿಂದಲೇ ನಿರ್ವಹಿಸಲಾಗಿದ್ದು, ಯಾವುದೇ ಉಪಸಮಿತಿಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶದಲ್ಲಿ ಮಹಿಳೆಯರೇ ಆಗಿರುವ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿಗಳು ಕಳೆದ ಎರಡು ತಿಂಗಳಿನಿಂದ ಸಾಕಷ್ಟು ಪೂರ್ವಸಿದ್ಧತೆಗಳೊಂದಿಗೆ ವೀರರಾಣಿ ಅಬ್ಬಕ್ಕ ಉತ್ಸವ ಯಶಸ್ವಿಗೊಳಿಸಿದ್ದಾರೆ. ಹಿಂದಿನ ಎಲ್ಲಾ ಅಬ್ಬಕ್ಕ ಉತ್ಸವಕ್ಕಿಂತಲೂ ಈ ವರ್ಷ ಅಬ್ಬಕ್ಕ ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ ಪ್ರೇಕ್ಷಕರು, ಉತ್ಸವದ ಯಶಸ್ವಿಯನ್ನು ಸಾರುತ್ತಿತ್ತು.

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹೋರಾಟಗಾರರ ಪೈಕಿ ಮೊದಲ ಮಹಿಳಾ ಹೋರಾಟಗಾರ್ತಿ ಎಂಬ ಕೀರ್ತಿ ರಾಣಿ ಅಬ್ಬಕ್ಕ ಅವರಿಗೆ ಇದೆ. ಇದು ಕರಾವಳಿಗೆ ನಿಜಕ್ಕೂ ಹೆಮ್ಮೆಯ ವಿಷಯ. . ಇಂತಹ ಮಹಾನ್ ಇತಿಹಾಸವನ್ನು ತಿಳಿದುಕೊಂಡು ದೇಶದ ಪರವಾಗಿ ಅವರಂತೆ ಹೋರಾಟದಲ್ಲಿ ಭಾಗವಹಿಸುವ ಮನೋಬಲ ಈಗಿನ ಜನತೆಯಲ್ಲಿ ಮೂಡಿ ಬರುವುದು ಅಬ್ಬಕ್ಕ ಉತ್ಸವದ ಆಶಯವಾಗಿದೆ.


Spread the love

Exit mobile version