Home Mangalorean News Kannada News ‘ಯಶೋ ಮಾಧ್ಯಮ-2024’ ಪುರಸ್ಕಾರಕ್ಕೆ ಅಲೆವೂರು ರಾಜೇಶ್ ಶೆಟ್ಟಿ ಆಯ್ಕೆ

‘ಯಶೋ ಮಾಧ್ಯಮ-2024’ ಪುರಸ್ಕಾರಕ್ಕೆ ಅಲೆವೂರು ರಾಜೇಶ್ ಶೆಟ್ಟಿ ಆಯ್ಕೆ

Spread the love

‘ಯಶೋ ಮಾಧ್ಯಮ-2024’ ಪುರಸ್ಕಾರಕ್ಕೆ ಅಲೆವೂರು ರಾಜೇಶ್ ಶೆಟ್ಟಿ ಆಯ್ಕೆ

ಬೆಂಗಳೂರು: ಬೆಂಗಳೂರಿನ ರಾಜಾಜಿನಗರದ ಸ್ಪಂದನಾ ಸೇವಾ ಸಂಸ್ಥೆಯು ಕೊಡ ಮಾಡುವ ಯಶೋ ಮಾಧ್ಯಮ ಪ್ರಶಸ್ತಿಗೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಡುಪಿ ಜಿಲ್ಲೆಯ ಆಧ್ಯಕ್ಷರಾದ ರಾಜೇಶ್ ಶೆಟ್ಟಿ ಯವರು ಆಯ್ಕೆಯಾಗಿದ್ದಾರೆ. ಜೂ 22ರ ಶನಿವಾರ ಬೆಳಿಗ್ಗೆ ಉಡುಪಿ ಜಿಲ್ಲೆಯ ಕಲ್ಯಾಣಪುರದ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುವ ಉಚಿತ ನೋಟ್ ಪುಸ್ತಕ ವಿತರಣಾ ಸಮಾರಂಭದಲ್ಲಿ “ಯಶೋ ಮಾಧ್ಯಮ-2024” ಪ್ರಶಸ್ತಿಯನ್ನು ವಿತರಿಸಲಾಗುವುದು.

ರಾಜೇಶ್ ಶೆಟ್ಪಿಯವರ ಪರಿಚಯ:
ಅಲೆವೂರಿನ ದಿ.ಸಂಜೀವ ಶೆಟ್ಟಿ ಮತ್ರು ಉಷಾ ಶೆಟ್ಟಿ ದಂಪತಿಗಳ ಸುಪುತ್ರರಾಗಿ ದಿನಾಂಕ 20-09-1970 ರಂದು ಜನನ. ಅಲೆವೂರಿನ ಪ್ರ್ಯೆಮರಿ ಸುಭೋದಿನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಬ್ಯಾಸ ಪ್ರಾರಂಭ. ನಂತರ ನೆಹರು ಪ್ರೌಢಶಾಲೆಯಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮಾಡಿದರು. ಮಣಿಪಾಲ ಜ್ಯೂನಿಯರ್ ಕಾಲೇಜು ಮತ್ತು ಡಾ.ಟಿ.ಎಂ.ಎ.ಪೈ ಪಾಲಿಟೆಕ್ನಿಕ್ ನಲ್ಲಿ ಡಿಪ್ಲೊಮಾ ಮಾಡಿದರು.

ಉಡುಪಿಯ ರೋಟರ್ಯಾಕ್ಟ್ ಕ್ಲಬ್ ಝೋನಲ್ ರೆಪ್ರೆಸೆಂಟ್ ಅಧ್ಯಕ್ಷರಾಗಿ, ಮಾಜಿ ಅದ್ಯಕ್ಷರು ಮತ್ತು ಸ್ಥಾಪಕ ಸದಸ್ಯರು ಅಲೆವೂರು ಗಣೇಶೋತ್ಸವ ಸಮಿತಿಯ ಸ್ಥಾಪಕ ಸದಸ್ಯರಾಗಿ, ಅಧ್ಯಕ್ಷರಾಗಿ, ಅಲೆವೂರು ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಸುಮಾರು 150 ತುಳು ಮತ್ತು ಕನ್ನಡ ನಾಟಕ ಗಳಲ್ಲಿ ಅಭಿನಯ, ನಿರ್ದೇಶನ, ಕಾರ್ಯಕ್ರಮ ನಿರ್ವಹಣೆ, ಮೇಕಪ್ ಕಲಾವಿದರಾಗಿ ಪ್ರೇಮ ಅರ್ಟಸ್ ಉಡುಪಿಯಲ್ಲಿ ತರಬೇತಿ ಮತ್ತು ಸಮಾರು 10 ವರ್ಷ ಹವ್ಯಾಸಿ ಮೇಕಪ್ ಕಲಾವಿದರಾಗಿ ಕೆಲಸ ಮಾಡಿದ್ದಾರೆ. ದುಡಿಮೆ , ಉಡುಪಿ, ಬೆಂಗಳೂರು, ಮ್ಯೆಸೂರುಗಳಲ್ಲಿ.

ನಮ್ಮ ಟಿವಿಯಲ್ಲಿ ಜಿಲ್ಲಾ ವರದಿಗಾರರಾಗಿ 18 ವರ್ಷ, ಉದಯಟಿವಿಯಲ್ಲಿ 2 ವರ್ಷ, C4U ಚ್ಯಾನಲ್ ನಲ್ಲಿ ಒಟ್ಟು 20 ವರ್ಷಗಳ ಕಾಲ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ.

ಈಗ ಸ್ವಂತ ಸಂಸ್ಥೆ “ಕನಸು ಕ್ರಿಯೇಷನ್” ಮೂಲಕ ಅನೇಕ ಡಾಕ್ಯುಮೆಂಟ್ ಗಳನ್ನು ತಯಾರಿ ಮಾಡುತ್ತಿದ್ದಾರೆ.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ 2021-2022, 2022-2025ರವರೆಗೆ ಅಯ್ಕೆಯಾಗಿ ಕೆಲಸ ಮಾಡುತ್ತಿದ್ದಾರೆ.

ಸ್ವತಃ ರಕ್ತದಾನಿಯಾಗಿರುವುದಲ್ಲದೇ, ಉಚಿತ ರಕ್ತದಾನ ಶಿಬಿರ, ಅರೋಗ್ಯ ಶಿಬಿರ ಹಾಗೂ ಕಣ್ಣಿನ ಶಿಬಿರಗಳ ಅಯೋಜನೆಯನ್ನು ಮಾಡಿದ್ದಾರೆ.

ಇವರ ಪತ್ನಿ ಪ್ರಭಾವತಿ ಅದ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ದಂಪತಿಗಳಿಗೆ ಓರ್ವ ಪುತ್ರ ಮತ್ತು ಒಬ್ಬಳು ಮಗಳಿದ್ದಾರೆ.


Spread the love

Exit mobile version