ಯುವಜನತೆ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಿ – ನ್ಯಾ. ಸಂತೋಷ್ ಹೆಗ್ಡೆ

Spread the love

ಯುವಜನತೆ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಿ – ನ್ಯಾ. ಸಂತೋಷ್ ಹೆಗ್ಡೆ

ಬಳ್ಳಾರಿ: ಯುವಜನರು ತಮ್ಮ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಮಾಜಿ ಲೋಕಾಯುಕ್ತ ಹಾಗೂ ಸರ್ವೊಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಜಸ್ಟೀಸ್ ಸಂತೋಷ್ ಹೆಗ್ಡೆ ಹೇಳಿದರು.

ಅವರು ಶನಿವಾರ ಬಳ್ಳಾರಿಯಲ್ಲಿ ನಡೆಯುತ್ತಿರುವ ಕರ್ನಾಟಕ ಪ್ರಾಂತೀಯ ಯುವಜನೋತ್ಸವದ ಮೂರನೇ ದಿನ ಮುಖ್ಯ ಅತಿಥಿಯಾಗಿ ಮಾತನಾಡಿದರು. ಪ್ರಜಾಪ್ರಭುತ್ವವು ಜನರಿಂದ, ಜನರಿಗಾಗಿ, ಜನರಿಗೋಸ್ಕರ ಇರುವಾಗ ನಾವು ಪ್ರಜಾಪ್ರಭುತ್ವದ ನಂಬಿಕೆ ಇಟ್ಟುಕೊಂಡು ಕಾನೂನಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೋಳ್ಳದೆ, ಸಮಾಜದ ಅಭಿವøದ್ಧಿಯ ಕೆಲಸದಲ್ಲಿ ಭಾಗಿಯಾಗುವ ಕೆಲಸವನ್ನು ಮಾಡಬೇಕು ಎಂದು ಕರೆ ನೀಡಿದರು. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಪ್ರಜಾಪ್ರಭುತ್ವದ ಭದ್ರಬುನಾದಿಗಳು. ಪ್ರಸ್ತುತ ಸಮಾಜದಲ್ಲಿ ಮೌಲ್ಯವಗಳ ಕುಸಿತಗೊಳ್ಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸಮಾಜವು ಮೌಲ್ಯರಹಿತವಾಗಿ ಮುಂದುವರೆಯುತ್ತಿರುವಾಗ ಅವರು ಅಳವಡಿಸಿಕೊಂಡಿರುವ ತಪ್ತಿ ಮೌಲ್ಯ, ಮಾನವೀಯತೆ ಮೌಲ್ಯಗಳನ್ನು ಯುವಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯತೆಯ ಬಗ್ಗೆ ತಿಳಿಸಿದರು. ಯುವಜನರು ಕಾನೂನಿನ ಚೌಕಟ್ಟಿನಲ್ಲಿ ಸ್ವಂತ ಪ್ರಯತ್ನದಲ್ಲಿ ಹಣ ಸಂಪಾನೆ ಮಾಡಿ, ಸಂತೋಷವಾಗಿ ಖರ್ಚುಮಾಡಿ ಉತ್ತಮವಾದ ಜೀವನ ನಡೆಯಿಸಿರಿ ಎಂದು ಕರೆ ಕೊಟ್ಟರು. ಒಳ್ಳೆಯ ಮೌಲ್ಯಗಳನ್ನು ಅಳವಡಿಸಿಕೊಂಡಿರುವ ನಾಯಕರಿಗೆ ಮತ ನೀಡಿ ಸಂಸತ್ತಿಗೆ ಕಳುಹಿಸುವ ಕೆಲಸದಲ್ಲಿ ಯುವಕರು ಕಾರ್ಯಪ್ರವøತ್ತರಾಗವೇಕು ಎಂದು ತಿಳಿಸಿದರು.


Spread the love