Home Mangalorean News Kannada News ಯುವಜನತೆ ಸಕಲ ಪೂರ್ವ ಸಿದ್ದತೆಯೊಂದಿಗೆ ಸಾಧನೆಯ ದಾರಿಯಲ್ಲಿ ಅಚಲರಾಗಿ ಸಾಗಬೇಕು 

ಯುವಜನತೆ ಸಕಲ ಪೂರ್ವ ಸಿದ್ದತೆಯೊಂದಿಗೆ ಸಾಧನೆಯ ದಾರಿಯಲ್ಲಿ ಅಚಲರಾಗಿ ಸಾಗಬೇಕು 

Spread the love

ಯುವಜನತೆ ಸಕಲ ಪೂರ್ವ ಸಿದ್ದತೆಯೊಂದಿಗೆ ಸಾಧನೆಯ ದಾರಿಯಲ್ಲಿ ಅಚಲರಾಗಿ ಸಾಗಬೇಕು 

ವಿದ್ಯಾಗಿರಿ:ಸಾಧನೆ ಎಂಬುದು ಪೂರ್ವ ಸಿದ್ಧತೆಗಳು ಪ್ರತಿಫಲ. ಯುವಜನತೆ ಸಕಲ ಪೂರ್ವ ಸಿದ್ದತೆಯೊಂದಿಗೆ ಸಾಧನೆಯ ದಾರಿಯಲ್ಲಿ ಅಚಲರಾಗಿ ಸಾಗಬೇಕು ಎಂದು ಮೂಡಬಿದಿರೆ ಪೋಲೀಸ್ ಠಾಣಾ ಇನ್ಸ್‍ಪೆಕ್ಟರ್ ಬಿ ಎಸ್ ದಿನೇಶ್‍ಕುಮಾರ್ ಹೇಳಿದರು.

ಅವರು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಮೂಡಬಿದಿರೆ ಪೋಲಿಸ್ ಠಾಣಾ ವತಿಯಿಂದ“ಪೋಲಿಸ್ ಕಾನ್ಸ್ಟೇಬಲ್ ಮತ್ತು ಪೋಲೀಸ್ ಸಬ್‍ಇನ್ಸ್‍ಪೆಕ್ಟರ್ ನೇಮಕಾತಿ” ಕುರಿತಂತೆ ಮಾಹಿತಿ ಕಾರ್ಯಗಾರವನ್ನು ಆಯೋಜಿಸಲಾಯಿತು.

ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪೋಲೀಸ್ ಇಲಾಖೆಯ ಉದ್ಯೋಗದಲ್ಲಿ ಸೇರಬೇಕು. ಸೇನೆಯವರಿಗೆ ಮೀಸಲಾಗಿದ್ದ ಕ್ಯಾಂಟಿನ್ ಸೌಲಭ್ಯ ಈಗ ಪೋಲೀಸ್ ಇಲಾಖೆಗೂ ಒದಗಿಸಲಾಗಿದೆ ಎಂದರು. ಪೊಲೀಸ್ ಇಲಾಖಾ ಸಿಬ್ಬಂದಿಗೆÀ ಸಂಬಂಧ ಪಟ್ಟ “ಆರೋಗ್ಯ ಭಾಗ್ಯ” ಯೋಜನೆಯಡಿ ಕುಟುಂಬಕ್ಕೆ 15 ಲಕ್ಷದವರೆಗೆ ಉಚಿತವಾಗಿ ಚಿಕಿತ್ಸೆಯ ವ್ಯವಸ್ಥೆ ಪಡೆದುಕೊಳ್ಳಬಹುದು. ಪೋಲೀಸ್ ಇಲಾಖೆಯಲ್ಲಿ ಉತ್ತಮ ವೇತನದ ಲಭ್ಯವಿದ್ದು, ಸಮಾಜಮುಖಿಯಾಗಿ ಸೇವೆ ಸಲ್ಲಿಸಲು ಉತ್ತಮ ವೇದಿಕೆಯಾಗಿದೆ ಎಂದರು.

ಪ್ರಚಲಿತ ವಿದ್ಯಮಾನಗಳ ಬಗ್ಗೆ ಪತ್ರಿಕೆಗಳು ಹಾಗು ಸ್ಪರ್ಧಾತ್ಮಕ ಪುಸ್ತಕಗಳನ್ನು ಅವಲಂಬಿತವಾಗಿರಬೇಕು ಅಲ್ಲದೆ ದೈಹಿಕ ಹಾಗೂ ಮಾನಸಿಕ ಸದೃಢಯನ್ನು ಕಾಪಾಡಿಕೊಂಡಿರಬೇಕು ಎಂದರು. ಮಾದಕ ದ್ರವ್ಯದಿಂದ ಯುವಕರು ದೂರವಿರಿ. ಅದರಿಂದ ಎಚ್ಚೆತ್ತು ಕೊಳ್ಳಿ,ಇಲ್ಲದಿದ್ದರೆ ಅದು ಬದುಕನ್ನು ಸರ್ವನಾಶವಾಗಿಸುತ್ತದೆ ಎಂದು ಎಚ್ಚರಿಸಿದರು.

ಆಳ್ವಾಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಕುರಿಯನ್, ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Spread the love

Exit mobile version